ಕಾಟನ್‌ ಸೀರೆಯುಟ್ಟು ಫೋಸ್ ಕೊಟ್ಟ ನಮ್ರತಾ ಗೌಡ, ಕಾರ್ತಿಕ್‌ ಮತ್ತು ನಿಮ್‌ ಜೋಡಿ ಸೂಪರ್ ಎಂದ ಫ್ಯಾನ್ಸ್‌!

Published : May 18, 2024, 04:55 PM IST

ಕಿರುತೆರೆ ನಟಿ ನಮ್ರತಾ ಗೌಡ, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ರೆಡ್‌ ಹಾಗೂ ಬ್ಲ್ಯಾಕ್‌ ಕಲರ್ ಸೀರೆಯುಟ್ಟು ಕೂಲಿಂಗ್ ಗ್ಲಾಸ್ ಹಾಕ್ಕೊಂಡು ಫೋಸ್ ಕೊಟ್ಟಿದ್ದಾರೆ. ನೆಟ್ಟಿಗರು ಈ ಕೂಲ್‌ ಲುಕ್‌ಗೆ ಫಿದಾ ಆಗಿದ್ದಾರೆ.

PREV
19
ಕಾಟನ್‌ ಸೀರೆಯುಟ್ಟು ಫೋಸ್ ಕೊಟ್ಟ ನಮ್ರತಾ ಗೌಡ, ಕಾರ್ತಿಕ್‌ ಮತ್ತು ನಿಮ್‌ ಜೋಡಿ ಸೂಪರ್ ಎಂದ ಫ್ಯಾನ್ಸ್‌!

ಕಿರುತೆರೆ ನಟಿ ನಮ್ರತಾ ಗೌಡ, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಯಾವಾಗ್ಲೂ ಸೀರೆ, ಸ್ಟೈಲಿಶ್‌ ಡ್ರೆಸ್‌ನಲ್ಲಿ ಫೋಟೋಸ್ ಪೋಸ್ಟ್ ಮಾಡುತ್ತಿರುತ್ತಾರೆ.

29

ಇತ್ತೀಚಿಗೆ ರೆಡ್‌ ಹಾಗೂ ಬ್ಲ್ಯಾಕ್‌ ಕಲರ್ ಸೀರೆಯುಟ್ಟು ಕೂಲಿಂಗ್ ಗ್ಲಾಸ್ ಹಾಕ್ಕೊಂಡು ಫೋಸ್ ಕೊಟ್ಟಿದ್ದಾರೆ. ನೆಟ್ಟಿಗರು ಈ ಕೂಲ್‌ ಲುಕ್‌ಗೆ ಫಿದಾ ಆಗಿದ್ದಾರೆ.

39

ಅಭಿಮಾನಿಗಳು ಬಿಗ್‌ಬಾಸ್‌ ನಮ್ಮು ಫೋಟೋಸ್‌ಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಕನ್ನಡದ ಸುಂದರ ಚೆಲುವೆ, ಗಾರ್ಜಿಯಸ್‌, ಪ್ರೆಟ್ಟೀ ಎಂದೆಲ್ಲಾ ಹೊಗಳಿದ್ದಾರೆ.

49

ಮತ್ತೆ ಕೆಲವರು 'ನಿಮ್ಮ ಮತ್ತೆ ಕಾರ್ತಿಕ್ ಜೋಡಿ ಸೂಪರ್‌' ಎಂದು ಹೊಗಳಿದ್ದಾರೆ. ಆಲ್‌ವೇಸ್ ಫೇವರಿಟ್‌, ಲವ್ಲೀ ಎಂದು ಇನ್ನು ಕೆಲವರು ಕಾಮೆಂಟ್ ಮಾಡಿದ್ದಾರೆ.

59

ನಮ್ರತಾ ಗೌಡ 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ನಮ್ರತಾ ಗೌಡ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.

69

ಇದಾದ ಬಳಿಕ 'ಪುಟ್ಟ ಗೌರಿ' ಮದುವೆ ಧಾರಾವಾಹಿಯಲ್ಲಿ ಹಿಮ ಪಾತ್ರದಲ್ಲಿ ಮಿಂಚಿದ್ದರು. ಈ ಸೀರಿಯಲ್‌ನಲ್ಲಿ ಆಕೆಯ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

79

ಕನ್ನಡ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ, ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ. ತಮ್ಮ ಉತ್ತಮ ನಟನೆಯಿಂದ ಮನೆ ಮಾತಾಗಿದ್ದರು. 

89

ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಕಿರುತೆರೆ, ಯೂಟ್ಯೂಬ್​ ಚಾನೆಲ್​ನಲ್ಲಿ ಸದ್ದು ಮಾಡ್ತಿದ್ದ ನಮ್ರತಾ ಗೌಡ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.

99

ನಾಗಿಣಿ 2, ಬಿಗ್ ಬಾಸ್ ಸೀಸನ್ 10 ಶೋ ಮೂಲಕ ಗಮನ ಸೆಳೆದ ನಮ್ರತಾ ಗೌಡ ಇತ್ತೀಚಿಗಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ದುಬಾರಿ ಕಾರು ಖರೀದಿಸುವ ಮೂಲಕ ನಟಿ ಸಂಭ್ರಮಿಸಿದ್ದಾರೆ.‌ 

Read more Photos on
click me!

Recommended Stories