ಇತ್ತೀಚಿಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ಮಾನ್ವಿತಾ ಕಾಮತ್ ರೆಡ್ ಕಲರ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಬ್ಲಡ್ ರೆಡ್‌ಗೆ ವೈಟ್ ಡಿಸೈನ್ ಇರೋ ಡ್ರೆಸ್ ಹಾಕ್ಕೊಂಡು ಮುದ್ದಾಗಿ ನಗು ಬೀರಿದ್ದಾರೆ.
29
ಮಾನ್ವಿತಾ ಲುಕ್ ನೋಡಿದ ಅಭಿಮಾನಿಗಳು, ಬ್ಯೂಟಿಫುಲ್, ಗಾರ್ಜಿಯಸ್, ಪ್ರೆಟ್ಟೀ ಎಂದೆಲ್ಲಾ ಹೊಗಳಿ ಕಾಮೆಂಟ್ ಮಾಡಿದ್ದಾರೆ.
39
2015ರಲ್ಲಿ ಕೆಂಡಸಂಪಿಗೆ ಸೀರಿಯಲ್ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಚೌಕಾ, ಕನಕಾ, ಟಗರು,ತಾರಕಸೂರ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಮಾನ್ವಿತಾ.
49
ಮೇ 1, 2024ರಂದು ಹುಟ್ಟೂರು ಕಳಸದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಫೋಷಕರು ಆಯ್ಕೆ ಮಾಡಿ ಹುಡುಗನ್ನು ಮದುವೆ ಮಾಡಿಕೊಂಡರು.
59
ಮಾನ್ವಿತಾ ಕೈ ಹಿಡಿದಿರುವ ಹುಡುಗ ಖ್ಯಾತ ಸಂಗೀತಾ ನಿರ್ಮಾಪಕ ಅರುಣ್. ಇವರಿಬ್ಬರ ಮದುವೆ ಕೊಂಕಣಿ ಸಂಪ್ರದಾಯದಲ್ಲಿ ನಡೆದಿದೆ.
69
ಮದುವೆ ನಂತರ ಮಾನ್ವಿತಾ ಅಪ್ಲೋಡ್ ಮಾಡಿರುವ ಮೊದಲ ಜೋಡಿ ಫೋಟೋದಲ್ಲಿ ಹಸಿರು ಮತ್ತು ಹಳದಿ ಕಾಂಬಿನೇಷನ್ ಸೀರೆ ಧರಿಸಿದ್ದಾರೆ.
79
'ಗಂಡ ಕೊಡಿಸುವ ಮೊದಲ ಸೀರೆ ಮನಸ್ಸಿಗೆ ತುಂಬಾನೇ ಹತ್ತಿರವಾಗಿರುತ್ತದೆ, ವಿಶೇಷ ಜಾಗ ಪಡೆಯುತ್ತದೆ' ಎಂದು ಮಾನ್ವಿತಾ ಬರೆದುಕೊಂಡಿದ್ದಾರೆ.
89
ಸೀರೆಯಲ್ಲಿ ಹೂಗಳ ಡಿಸೈನ್ ಇರುವ ಕಾರಣ ಬ್ಲೌಸ್‌ನಲ್ಲಿ ಮರದ ಡಿಸೈನ್ ಮಾಡಲಾಗಿದೆ. ಇದಕ್ಕೆ ಸಂಪೂರ್ಣವಾಗಿ ಚಿನ್ನದ ಆಭರಣಗಳನ್ನು ಧರಿಸಿದ್ದಾರೆ.
99
ಕ್ರೀಮ್ ವಿತ್ ವೈಟ್ ಆಂಡ್ ಬ್ಲಾಕ್ ಕಾಂಬಿನೇಷನ್ ಸೂಟ್ ಸೆಟ್‌ನಲ್ಲಿ ಅರುಣ್ ಮಿಂಚಿದ್ದಾರೆ. ವಾವ್ ನಿಮ್ಮಿಬ್ಬರ ಜೋಡಿ ಸೂಪರ್ ಎಂದು ನೆಟ್ಟಗರು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.