ಸೂಪರ್ ಮಾಡೆಲ್‌ನಂತೆ ಕಾಣೋ ಇವರು ಮಹಿಳಾ ಪೊಲೀಸ್ ಅಧಿಕಾರಿ!

First Published | Mar 7, 2023, 5:13 PM IST

ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ 8 ರಂದು ಆಚರಿಸಲಾಗುತ್ತೆ, ಹಾಗಾಗಿ ಈ ಸಂದರ್ಭದಲ್ಲಿ ನಾವು ಇಂದು ಒಬ್ಬರು ಬೈಕರ್, ಬಾಕ್ಸರ್ ಮತ್ತು ಸೂಪರ್ ಮಾಡೆಲ್ ಆಗಿರುವ ಪೊಲೀಸ್ ಮಹಿಳಾ ಅಧಿಕಾರಿಯ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಸುತ್ತೇವೆ. 

ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಪುರುಷರಿಗಿಂತ ಹಿಂದೆ ಉಳಿದ್ದಿಲ್ಲ. ದೇಶದಿಂದ ವಿದೇಶಕ್ಕೆ, ಅವಳು ತನ್ನ ಯಶಸ್ಸನ್ನು ಕಂಡು ಕೊಳ್ಳುತ್ತಿದ್ದಾಳೆ, ಹಾಗಾಗಿ ಅಂತಹ ಒಬ್ಬ ಮಹಿಳಾ ಸಾಧಕಿ ಬಗ್ಗೆ ಇವತ್ತು ತಿಳಿಯೋಣ, ಅವರು ಒಂದಲ್ಲ ಅನೇಕ ಗುಣಗಳನ್ನು ಹೊಂದಿದ್ದಾರೆ. ಇಕ್ಷಾ ಕೆರುಂಗ್ (Eksha Kerung) ಎಂದೂ ಕರೆಯಲ್ಪಡುವ ಸಿಕ್ಕಿಂನ ಏಕ್ಷಾ ಹಂಗಾಮಾ ಸುಬ್ಬಾ ಬಗ್ಗೆ ಇಲ್ಲಿ ಹೆಳ್ತಿದ್ದೀವಿ. ಈ 21 ವರ್ಷದ ಮಹಿಳೆಗೆ ಇಂದು ಯಾವುದೇ ಮಾನ್ಯತೆಯ ಅಗತ್ಯವಿಲ್ಲ. ಪೊಲೀಸ್ ಅಧಿಕಾರಿಯಿಂದ ಹಿಡಿದು ಬಾಕ್ಸರ್ ಮತ್ತು ಸೂಪರ್ ಮಾಡೆಲ್ ವರೆಗೆ, ಅವರ ಕಥೆ ಪ್ರತಿಯೊಬ್ಬ ಮಹಿಳೆಗೂ ಸ್ಪೂರ್ತಿ ನೀಡುತ್ತೆ

ಸೂಪರ್ ಮಾಡೆಲ್(Super Model) ಜೊತೆಗೆ ಪೊಲೀಸ್ ಅಧಿಕಾರಿಯೂ ಹೌದು! 
ಸಿಕ್ಕಿಂ ಮೂಲದ ಏಕ್ಷಾ ಹಂಗಮಾ ಸುಬ್ಬಾ ತನ್ನ ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ, ಇದನ್ನು ಮಾಡುವುದು ಎಲ್ಲರಿಗೂ ಸುಲಭವಲ್ಲ. ಈಕೆ ಮಹಿಳೆ ಪೊಲೀಸ್ ಅಧಿಕಾರಿ ಮಾತ್ರವಲ್ಲ, ಸೂಪರ್ ಮಾಡೆಲ್, ಬಾಕ್ಸರ್ ಮತ್ತು ಬೈಕರ್ ಕೂಡ ಆಗಿದ್ದು, ಇದು ಅವರ ಕಠಿಣ ಪರಿಶ್ರಮಕ್ಕೆ ಉದಾಹರಣೆಯಾಗಿದೆ. ಅವರು 2019 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ನಂತರ ಅವರು ಮಾಡೆಲಿಂಗ್ ಸಹ ಪ್ರಯತ್ನಿಸಿದರು.

Tap to resize

ಏಕ್ಷಾಳ ಸ್ಟೈಲ್ ಗೆ ಜನರು ಫಿದಾ ಆಗಿದ್ದಾರೆ!
ಮಾಡೆಲಿಂಗ್ ಜೊತೆಗೆ, ಅವರು ಬೈಕ್ ಸವಾರಿಯನ್ನು ಸಹ ಇಷ್ಟಪಡುತ್ತಾರೆ. ಹಾಗೆಯೇ, ಅವರು ರಾಷ್ಟ್ರೀಯ ಮಟ್ಟದ ಬಾಕ್ಸರ್(National Boxer) ಕೂಡ ಆಗಿದ್ದಾರೆ. ಈ ಚಿತ್ರದಲ್ಲಿ, ಅವರು ಬೈಕಿನೊಂದಿಗೆ ಸ್ಟೈಲಿಶ್ ಬಟ್ಟೆಗಳಲ್ಲಿ ಕಾಣಿಸಿಕೊಂಡಿರುವುದನ್ನು ನೀವು ನೋಡಬಹುದು. ಅವರು ಟಾಪ್ ಮತ್ತು ಜೀನ್ಸ್ ನಲ್ಲಿ ತುಂಬಾ ಫಿಟ್ ಆಗಿ ಕಾಣುತ್ತಾರೆ.  
 

ಫ್ಯಾಷನ್ ನಲ್ಲಿ(Fashion) ಟಾಪ್ ನಟಿಯರೊಂದಿಗೆ ಸ್ಪರ್ಧಿಸಬಹುದು 
ಈ ಫೋಟೋಸ್ ನೋಡಿದರೆ, ಫ್ಯಾಷನ್ ಮತ್ತು ಸ್ಟೈಲ್ ನಲ್ಲಿ ಬಿ-ಟೌನ್ ನಟಿಯರೊಂದಿಗೆ ಏಕ್ಷಾ ಸ್ಪರ್ಧಿಸುತ್ತಾರೆ ಎಂದು ನೀವು ಅರ್ಥಮಾಡಿಕೊಂಡಿರಬೇಕು. ಇಲ್ಲಿ ಇವರು ಕಪ್ಪು ಬಣ್ಣದ ಸ್ಲಿಟ್ ಡ್ರೆಸ್ ಧರಿಸಿರೋದನ್ನು ಕಾಣಬಹುದು, ಅದರಲ್ಲಿ ಅವರ ಲೆಗ್ಸ್ ಫ್ಲೈನ್ಟ್ ಆಗಿವೆ. ಈ ಲುಕ್ನಲ್ಲಿ, ಅವರು ಬ್ಲಾಕ್ ಬ್ಯಾಗ್ ಜೊತೆಗೆ ಮ್ಯಾಚಿಂಗ್ ಹೀಲ್ಸ್, ಹೇರ್ ಸ್ಟೈಲ್ ಸಹ ಮಾಡಿದ್ದಾರೆ, ಮತ್ತು ಫ್ರಿಯಾಂಗ್ಗಳು ತುಂಬಾ ಪರ್ಫೆಕ್ಟ್ ಆಗಿ ಕಾಣುತ್ತಿವೆ.

ಮತ್ತೊಂದೆಡೆ, ಅವರು ಬೀಚಿನಲ್ಲಿ ಬೀಚ್ ಕ್ಲಾತ್ಸ್ (Beach cloths) ಕಾಣಿಸಿಕೊಂಡಿದ್ದಾರೆ, ಇದು ಅವರ ಬೋಲ್ಡ್ ಫ್ಯಾಷನ್‌ನ ಒಂದು ಲುಕ್ ನೀಡುತ್ತೆ. ಒಟ್ಟಾಗಿ ಎಲ್ಲಾ ರೀತಿಯಲ್ಲೂ ಸೂಪರ್ ಮಾಡೆಲ್ ಆಗಿರೋ ಇವರು, ಸಖತ್ ಫಿಟ್ ಆಗಿದ್ದು, ತಮ್ಮ ಫಿಟ್ನೆಸ್ ಕಡೆಗೂ ಸಹ ತುಂಬಾನೆ ಗಮನ ಹರಿಸ್ತಾರೆ. 
 

ಔಟಿಂಗ್ ಗೆ(Outing) ತಯಾರಿ ಮಾಡೋದು ಹೇಗೆ?
ಮಲ್ಟಿ ಟಾಲೆಂಟೆಡ್ ಏಕ್ಷಾ ದೇಶಾದ್ಯಂತದ ಹುಡುಗಿಯರಿಗೆ ಪ್ರೇರಣೆಯಾಗಿದ್ದಾರೆ. ಅವರು ದೇಶಕ್ಕಾಗಿ ಕೆಲಸ ಮಾಡೋದು ಮಾತ್ರವಲ್ಲದೆ ತನ್ನ ಹವ್ಯಾಸವನ್ನು ಮುಂದುವರೆಸಿಕೊಂಡು ಹೋಗ್ತಿದ್ದಾರೆ.. ಫೋಟೋದಲ್ಲಿ, ಅವರು ಹೇಗೆ ಸ್ಟೈಲಿಶ್ ಆಗಿ ಕಾಣುತ್ತಾರೆ ಎಂಬುದನ್ನು ನೀವು ನೋಡಬಹುದು. 

Latest Videos

click me!