Skin Care: ಈ ಹ್ಯಾಕ್ಸ್ ಅಂದುಕೊಂಡಷ್ಟು ಎಫೆಕ್ಟಿವ್ ಅಲ್ಲ!

First Published | Dec 19, 2022, 3:32 PM IST

ನಾವು ಪ್ರತಿದಿನ ಒಂದಲ್ಲ ಒಂದು ಬ್ಯೂಟಿ ಟಿಪ್ಸ್ (Beauty Tips) ಟ್ರೈ ಮಾಡುತ್ತಲೇ ಇರುತ್ತೇವೆ. ಆದರೆ ಹೆಚ್ಚಿನ ಟಿಪ್ಸ್ ಹೆಚ್ಚು ಪರಿಣಾಮಕಾರಿಯಾಗಿಲ್ಲ. ತುಂಬಾ ಕಡಿಮೆ ರಿಸಲ್ಟ್ ತೋರಿಸೋ ಕೆಲವು ಟಿಪ್ಸ್ ಇವೆ. ಅವುಗಳ ಬಗ್ಗೆ ಬೇಗ ತಿಳಿಯೋದು ಮುಖ್ಯ.  ಹೆಚ್ಚು ಪರಿಣಾಮಕಾರಿಯಾಗಿರದ ಈ ಹ್ಯಾಕ್ಸ್ ಯಾವುವು ಎಂದು ತಿಳಿದುಕೊಳ್ಳೋಣ.

ತುಂಬಾ ಪರಿಣಾಮಕಾರಿ ಎಂದು ಹೇಳಲಾಗುವ ಅನೇಕ ಸ್ಕಿನ್ ಕೇರ್ ಹ್ಯಾಕ್ಸ್ (Skin Care Hacks) ಬಗ್ಗೆ ನೀವು ಕೇಳಿರಬಹುದು ಆದರೆ ಈ ಟಿಪ್ಸ್‌ನಲ್ಲಿ ಹೆಚ್ಚಿನವು ಪರಿಣಾಮಕಾರಿಯಾಗಿಲ್ಲ. ಹಾಗೆ, ತುಂಬಾ ಕಡಿಮೆ ಪರಿಣಾಮಕಾರಿಯಾದ ಕೆಲವು ಟಿಪ್ಸ್ ಇವೆ. ನೀವು ಸಹ ಈ ಟಿಪ್ಸ್ ನಿಯಮಿತವಾಗಿ ಬಳಸುವವರಾದ್ರೆ, ನೀವು ಮೊದಲು ಅವುಗಳ ಸತ್ಯವನ್ನು ತಿಳಿದುಕೊಳ್ಳಬೇಕು. ಹಾಗಾಗಿ ಇಲ್ಲಿ ಅಂತಹ ಕೆಲವು ಸಲಹೆಗಳನ್ನು ತಿಳಿದುಕೊಳ್ಳೋಣ. 

ಕಣ್ಣುಗಳ ಮೇಲೆ ಆಲೂಗಡ್ಡೆ ಅಥವಾ ಸೌತೆಕಾಯಿಗಳ ತುಂಡುಗಳನ್ನು ಇಡೋದು :

ಆಲೂಗಡ್ಡೆ ಅಥವಾ ಸೌತೆಕಾಯಿ ತುಂಡುಗಳನ್ನು ಕಣ್ಣುಗಳ ಮೇಲೆ ಇಡೋದು ನೀವು ಯೋಚಿಸುವಷ್ಟು ಪರಿಣಾಮಕಾರಿಯಾಗಿಲ್ಲ.ಇದರಿಂದ ಡಾರ್ಕ್ ಸರ್ಕಲ್ (dark circle) ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತೆ. ಆದರೆ ಅದು ಶೀಘ್ರ ಫಲಿತಾಂಶ ನೀಡಿರುವ ಉದಾಹರಣೆಗಳು ಕಡಿಮೆ.

Tap to resize

ಕಣ್ಣುಗಳ ಮೇಲೆ ಆಲೂಗಡ್ಡೆ ಅಥವಾ ಸೌತೆಕಾಯಿ ತುಂಡುಗಳನ್ನು ಇಡೋದು :

ಆಲೂಗಡ್ಡೆ ಅಥವಾ ಸೌತೆಕಾಯಿ ತುಂಡುಗಳನ್ನು ಕಣ್ಣುಗಳ ಮೇಲೆ ಇಡೋದು ನೀವು ಯೋಚಿಸುವಷ್ಟು ಪರಿಣಾಮಕಾರಿಯಾಗಿಲ್ಲ.ಇದರಿಂದ ಡಾರ್ಕ್ ಸರ್ಕಲ್ (Dark Circle) ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತೆ. ಆದರೆ ಇಲ್ಲಿವರೆಗೂ ಅದು ಶೀಘ್ರ ಫಲಿತಾಂಶ ನೀಡಿರುವ ಉದಾಹರಣೆಗಳು ಕಡಿಮೆ.

ಅರಿಶಿನ ಮತ್ತು ಗ್ಲಿಸರಿನ್

ಚರ್ಮ ಹೊಳೆಯುವಂತೆ ಮಾಡಲು ಅರಿಶಿನವು ತುಂಬಾ ಪರಿಣಾಮಕಾರಿ ಎಂದು ಅನೇಕರು ಪರಿಗಣಿಸುತ್ತಾರೆ, ಆದರೆ ಈ ವಿಧಾನವು ಪ್ರತಿಯೊಂದೂ ಸ್ಕಿನ್ ಟೈಪಿಗೆ ಇದು ಸೂಕ್ತವಲ್ಲ. ಕೆಲವರು ಅರಿಶಿನ ಉಪಯೋಗಿಸೋದರಿಂದ ಸ್ಕಿನ್ ಕಪ್ಪಾಗುವ ಸಾಧ್ಯತೆ ಇದೆ. ಹರಿಶಿನ ಹಚ್ಚಿನ ಬಳಿಕ ಬಿಸಿಲಿಗೆ ಹೋಗೋದು ಸಹ ಸಮಸ್ಯೆ ಉಂಟು ಮಾಡುತ್ತೆ.
 

ಅರಿಶಿನವನ್ನು (turmeric) ಮುಖಕ್ಕೆ ಹಚ್ಚೋದರಿಂದ ಅನೇಕ ಜನರಿಗೆ ಅಲರ್ಜಿ ಉಂಟಾಗುತ್ತೆ. ಹಾಗೇ, ಗ್ಲಿಸರಿನ್ ಮೊಡವೆಗಳಿಗೂ ಕಾರಣವಾಗಬಹುದು. ಹಾಗಾಗಿ ಇವುಗಳನ್ನು ಯೂಸ್ ಮಾಡೋ ಮೊದಲು ಸ್ಕಿನ್ ಮೇಲೆ ಟೆಸ್ಟ್ ಮಾಡೋದನ್ನ ಮರೀಬೇಡಿ. ಇಲ್ಲಾಂದ್ರೆ ನಿಮ್ಮ ಮುದ್ದಾದ ಮುಖವನ್ನು ಹಾಳು ಮಾಡಬೇಕಾಗಿ ಬರುತ್ತೆ ಹುಷಾರಾಗಿರಿ.

50-55 ರ ಎಸ್ಪಿಎಫ್ ಸನ್ ಸ್ಕ್ರೀನ್

ಮನೆಯಿಂದ ಹೊರಹೋಗುವಾಗ, ಸೂರ್ಯನ ನೇರ ಕಿರಣಗಳಿಂದ ಉಂಟಾಗುವಂತಹ ಹಾನಿಯನ್ನು ತಪ್ಪಿಸಲು ನಾವು ಸಾಮಾನ್ಯವಾಗಿ ಸನ್ ಸ್ಕ್ರೀನ್ ಹಚ್ಚಿಕೊಂಡೇ ಹೊರ ಹೋಗುತ್ತೇವೆ. ಇದರಿಂ ಚರ್ಮದ ಮೇಲೆ ಯಾವುದೇ ರೀತಿಯ ಹಾನಿ ಉಂಟಾಗೋದಿಲ್ಲ ಎಂದು ನಾವು ಅಂದುಕೊಂಡಿರುತ್ತೇವೆ.

50-55 ರ ಎಸ್ಪಿಎಫ್ ಹೊಂದಿರುವ ಸನ್ ಸ್ಕ್ರೀನ್ (50-55 SPF sunscreen) ಕೂಡ ಮುಖಕ್ಕೆ ಸೂಕ್ತವಲ್ಲ. ವಿಶೇಷವಾಗಿ ಇಂತಹ ಹೆಚ್ಚಿನ ಎಸ್ಪಿಎಫ್ ಹೊಂದಿರುವ ಸನ್‌ಸ್ಕ್ರೀನ್ ದಿನಕ್ಕೆ ಹಲವು ಬಾರಿ ಮುಖಕ್ಕೆ ಹಚ್ಚಿದರೆ, ಅನೇಕ ಚರ್ಮದ ಸಮಸ್ಯೆಗಳನ್ನು ಹೊಂದಬಹುದು. ಹಾಗಾಗಿ ಎಚ್ಚರಿಕೆಯಿಂದ ಉಪಯೋಗಿಸಿ.  

ಬಿಸಿ ನೀರಿನಿಂದ ಸ್ನಾನ ಮಾಡೋದು

 ಚಳಿಗಾಲದಲ್ಲಿ ಪ್ರತಿಯೊಬ್ಬರೂ ಬಿಸಿ ನೀರಿನಿಂದ ಸ್ನಾನ (Hot Water Bath) ಮಾಡಲು ಇಷ್ಟಪಡುತ್ತಾರೆ. ಆದರೆ ಬಿಸಿ ಸ್ನಾನದ ಹೆಸರಿನಲ್ಲಿ, ನೀವು ಬಿಸಿ ನೀರಿನಲ್ಲಿ ಗಂಟೆಗಟ್ಟಲೆ ಕಳೆದರೆ, ಚರ್ಮ ತುಂಬಾ ಒಣಗಬಹುದು ಮತ್ತು ಚರ್ಮ ನೈಸರ್ಗಿಕ ತೇವಾಂಶವನ್ನು ಸಹ ಕಳೆದುಕೊಳ್ಳುತ್ತೆ. ಹಾಗಾಗಿ ಸ್ನಾನಕ್ಕೆ ಯಾವಾಗಲೂ ಉಗುರು ಬೆಚ್ಚಗಿನ ನೀರು ತುಂಬಾ ಒಳ್ಳೇದು.  

Latest Videos

click me!