Long Skirt to Baggy Pant: 2022ರಲ್ಲಿ ಹೆಚ್ಚು ಇಷ್ಟಪಟ್ಟ ಫ್ಯಾಷನ್ ಟ್ರೆಂಡ್‌ಗಳಿವು

First Published Dec 17, 2022, 6:18 PM IST

ಫ್ಯಾಷನ್ ಎಂಬುದು ಹೊಸದೇ ಬರಬೇಕು ಎಂದೇನಿಲ್ಲ, ಹಿಂದೆ ಟ್ರೆಂಡ್ ಆಗಿ ಮರೆಯಾದದ್ದು, ಮತ್ತೆ ವಾಪಾಸ್ ಟ್ರೆಂಡ್ ನಲ್ಲಿರೋದು ಸಹ ಫ್ಯಾಷನ್ ಆಗಿದೆ. ಅದು ಪ್ಲಾಜೋ ಪ್ಯಾಂಟ್ ಆಗಿರಲಿ ಅಥವಾ ಶರಾರಾ ಕುರ್ತಾ ಆಗಿರಲಿ. 90ರ ದಶಕದಲ್ಲಿ ಬ್ಯಾಗಿ ಪ್ಯಾಂಟ್ ಗಳು ಮತ್ತು ಲಾಂಗ್ ಸ್ಕರ್ಟ್ ಗಳ ಟ್ರೆಂಡ್ ಪ್ರಸ್ತುತ ಉತ್ತುಂಗದಲ್ಲಿದೆ. ಈ ವರ್ಷದುದ್ದಕ್ಕೂ ಫ್ಯಾಷನ್ ನಲ್ಲಿ ಸ್ವಲ್ಪ ಬದಲಾವಣೆಯಾಗಿದೆ, ಯಾವ ಟ್ರೆಂಡ್ ಮರಳಿ ಬಂದಿವೆ ಮತ್ತು ಹುಡುಗರು ಮತ್ತು ಹುಡುಗಿಯರು ಯಾವ ಟ್ರೆಂಡ್ ಹೆಚ್ಚು ಇಷ್ಟಪಟ್ಟಿದ್ದಾರೆ ಎಲ್ಲವನ್ನೂ ತಿಳಿಯೋಣ… 

ಲಾಂಗ್ ಸ್ಕರ್ಟ್: ಮಿನಿ ಟೈಟ್ ಸ್ಕರ್ಟ್ ಟ್ರೆಂಡ್ ಈಗ ಕೆಲವು ಸಮಯದಿಂದ ತುಂಬಾ ಹೆಚ್ಚಾಗಿದೆ. ಆದರೆ ಈ ವರ್ಷ ಉದ್ದ ಪ್ರಿಂಟೆಡ್ ಸ್ಕರ್ಟ್ ಗಳು ಹುಡುಗಿಯರ ಮೊದಲ ಆಯ್ಕೆಯಾಗಿ ಬದಲಾಗಿದ್ದವು. ಅದರಲ್ಲಿ ಸುಂದರವಾದ ಹೂವಿನ ಪ್ರಿಂಟ್ ಗಳು, ಸೈಟ್ ಗಳು ಸ್ಲಿಟ್ ಸ್ಕರ್ಟ್ ಗಳೊಂದಿಗೆ ಕ್ರಾಪ್ ಟಾಪ್ ನ್ನು ಮಹಿಳೆಯರು ಹೆಚ್ಚಾಗಿ ಕ್ಯಾರಿ ಮಾಡಿದ್ದರು.

ಬ್ಯಾಗಿ ಪ್ಯಾಂಟ್ಸ್ (Baggy Pants): 90 ರ ದಶಕದಲ್ಲಿ, ಸಡಿಲವಾದ ಮತ್ತು ಹೈ ವೇಸ್ಟ್ ಜೀನ್ಸ್ ನ ಫ್ಯಾಷನ್ ತುಂಬಾ ಇತ್ತು. ಆದರೆ ಬಿಗಿಯಾದ ಮತ್ತು ಲೋ ವೇಸ್ಟ್ ಜೀನ್ಸ್ ಕೆಲವು ಸಮಯದಿಂದ ಟ್ರೆಂಡ್ ನಲ್ಲಿತ್ತು, ಆದರೆ ಈ ವರ್ಷ 90 ರ ದಶಕದ ಯುಗವು ಮತ್ತೊಮ್ಮೆ ಟ್ರೆಂಡ್ ನಲ್ಲಿತ್ತು. ಹುಡುಗರು ಮತ್ತು ಹುಡುಗಿಯರು ಇಬ್ಬರೂ ಹೈ ವೆಸ್ಟ್ ಲೂಸ್ ಜೀನ್ಸ್ ಪ್ಯಾಂತ್ ಟ್ರೈ ಮಾಡಿದ್ರು, ಇದನ್ನ ಬ್ಯಾಗಿ ಪ್ಯಾಂಟ್ಸ್ ಎಂದು ಕರೆಯಲಾಗುತ್ತೆ..

ಓವರ್ ಸೈಜ್ ಬ್ಲೇಜರ್ (Over Size Blazer): 90 ರ ದಶಕದಲ್ಲಿ, ಕರಿಷ್ಮಾ ಕಪೂರ್ ಸಾಕಷ್ಟು ದೊಡ್ಡ ಗಾತ್ರದ ಬ್ಲೇಜರ್ ಗಳನ್ನು ಕ್ಯಾರಿ ಮಾಡುತ್ತಿದ್ದರು.. ಆದರೆ ಕೆಲವು ಸಮಯದಿಂದ, ಅದರ ಟ್ರೆಂಡ್ ಫ್ಯಾಷನ್ನಿಂದ ಹೊರಗಿತ್ತು, ಆದರೆ 2022 ರಲ್ಲಿ, ಮತ್ತೊಮ್ಮೆ ಈ ಸಡಿಲವಾದ ಓವರ್ ಸೈಜ್ ಬ್ಲೇಜರ್ಗಳ ಟ್ರೆಂಡ್ ಮತ್ತೊಮ್ಮೆ ಟ್ರೆಂಡ್ ನಲ್ಲಿದೆ.
 

ಅಗಲವಾದ ಲೆಗ್ ಪ್ಯಾಂಟ್ (Wide Leg Pant): ಈ ವರ್ಷ, ಫ್ಯಾಷನ್ ನಲ್ಲಿ ಬೆಲ್ ಬಾಟಮ್ ಪ್ಯಾಂಟ್ ಗಳು ಅಥವಾ ವೈಡ್ ಲೆಗ್ ಪ್ಯಾಂಟ್ ಗಳ ಟ್ರೆಂಡ್ ಕೂಡ ತುಂಬಾ ಹೆಚ್ಚಾಗಿದೆ. ಇದು ಹುಡುಗರು ಮತ್ತು ಹುಡುಗಿಯರ ಎತ್ತರವನ್ನು ಹೆಚ್ಚಿಸೋ ಮೂಲಕ ಮತ್ತಷ್ಟು ಎತ್ತರವಾಗಿ ಕಾಣುವಂತೆ ಮಾಡುತ್ತದೆ ಮತ್ತು ಸಾಕಷ್ಟು ಸ್ಟೈಲಿಶ್ ಆಗಿ ಕಾಣುತ್ತದೆ. ಇದು ಕ್ಯಾಶುಯಲ್ ಮತ್ತು ಫಾರ್ಮಲ್ ಲುಕ್ ಎರಡನ್ನೂ ನೀಡುತ್ತದೆ.

ಹೈ ಹೀಲ್ ಸ್ನೀಕರ್ಸ್ (High Heel Sneakers): ಈ ವರ್ಷ ಹುಡುಗರು ಮತ್ತು ಹುಡುಗಿಯರು ಫ್ಲಾಟ್ ಲೋಫರ್ ಗಳು ಮತ್ತು ಸ್ನೀಕರ್ ಗಳ ಬದಲಿಗೆ ಸ್ವಲ್ಪ ಹೀಲ್ಸ್ ಸ್ನೀಕರ್ ಗಳನ್ನು ಧರಿಸಲು ಆದ್ಯತೆ ನೀಡಿದರು. ಅನೇಕ ದೊಡ್ಡ ಬ್ರಾಂಡ್ ಗಳು ಸಹ ಈ ರೀತಿಯ ಸ್ನೀಕರ್ ಗಳನ್ನು ತಯಾರಿಸಿವೆ, ಇದು ಈ ವರ್ಷ ತುಂಬಾ ಟ್ರೆಂಡಿಯಾಗಿದೆ.

ಸ್ಯಾಟಿನ್ ಶರ್ಟ್ (Satin Shirts): ಸೀರೆಗಳು, ಉದ್ದನೆಯ ಸ್ಕರ್ಟ್ ಮತ್ತು ಜೀನ್ಸ್ ಎಲ್ಲಾದರ ಮೇಲೂ ಈ ವರ್ಷ ಹೆಚ್ಚು ಆಕರ್ಷಕವಾಗಿ ಕಂಡ ಡ್ರೆಸ್ ಎಂದರೆ ಸ್ಯಾಟಿನ್ ಶರ್ಟ್., ಸ್ಯಾಟಿನ್ ಶರ್ಟ್ ಗಳು ಈ ವರ್ಷ ಟ್ರೆಂಡ್ ಆಗಿವೆ. ಇದು ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ ಮತ್ತು ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳು ಸಹ ಇದನ್ನು ಟ್ರೈ ಮಾಡ್ತಾರೆ.

ಧೋತಿ ಸ್ಕರ್ಟ್ (Dhoti Skirt): ಧೋತಿಯ ಟ್ರೆಂಡ್ ತುಂಬಾ ಹಳೆಯದು, ಆದರೆ ಈ ವರ್ಷ ಧೋತಿ ಸ್ಕರ್ಟ್ ಅಥವಾ ಧೋತಿ ಪ್ಯಾಂಟ್ ಗಳ ಟ್ರೆಂಡ್ ತುಂಬಾ ಕಂಡುಬಂದಿದೆ. ಅಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿಯಿಂದ, ಅನೇಕ ಸೆಲೆಬ್ರಿಟಿಗಳು ಮತ್ತೊಮ್ಮೆ ಧೋತಿ ಸ್ಕರ್ಟ್ ಮತ್ತು ಪ್ಯಾಂಟ್ ಗಳನ್ನು ಟ್ರೆಂಡ್ ಗೆ ತಂದರು ಎಂದರೆ ತಪ್ಪಾಗಲಾರದು..

ಅನಿಮಲ್ ಪ್ರಿಂಟ್ ಡ್ರೆಸ್ (Animal Print Dress): ಶರ್ಟ್ ಗಳಿಂದ ಹಿಡಿದು ಸ್ಕರ್ಟ್ ಗಳು, ಬಾಟಮ್ ಗಳು ಮತ್ತು ಡ್ರೆಸ್ ಗಳವರೆಗೆ, ಅನಿಮಲ್ ಪ್ರಿಂಟ್ ಡಿಸೈನ್ ಕೂಡ ಅವುಗಳಲ್ಲಿ ತುಂಬಾ ಟ್ರೆಂಡ್ ಆಗಿತ್ತು. ಅದರಲ್ಲೂ ಹುಲಿಯಿಂದ ಜಿರಾಫೆಯವರೆಗೆ ಮತ್ತು ಅನೇಕ ಪ್ರಾಣಿಗಳ ಪ್ರಿಂಟ್ ಗಳ ಡ್ರೆಸ್ ಗಳನ್ನು ಹೆಚ್ಚಿನ ಮಹಿಳೆಯರು ಇಷ್ಟಪಟ್ಟು ಧರಿಸುತ್ತಿದ್ದರು.
 

ಟಿ-ಶರ್ಟ್ ಡ್ರೆಸ್ (T shirt Dress): ಟಿ-ಶರ್ಟ್ ಎಲ್ಲರಲ್ಲೂ ಇರುವಂತಹ ಸಾಮಾನ್ಯ ಔಟ್ ಫಿಟ್ ಆಗ್ಗಿದೆ ಅನ್ನೋದು ಎಲ್ಲರಿಗೂ ಗೊತ್ತು., ಆದರೆ ಈ ವರ್ಷ ಟಿ-ಶರ್ಟ್ ಡ್ರೆಸ್ ಟ್ರೆಂಡ್ ಹುಡುಗಿಯರಲ್ಲಿ ತುಂಬಾ ಕಂಡುಬಂದಿದೆ. ವಿಶೇಷವಾಗಿ ಆಲಿಯಾ ಭಟ್ ತನ್ನ ಗರ್ಭಾವಸ್ಥೆಯ ಸಮಯದಲ್ಲಿ ಸಡಿಲವಾದ ಟಿ-ಶರ್ಟ್ ಡ್ರೆಸ್ ಧರಿಸಿದ್ದರು.

click me!