ಗೋಡಂಬಿ ಬೀಜಗಳು ಆರೋಗ್ಯಕ್ಕೆ ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಹೊಳೆಯುವ ಚರ್ಮಕ್ಕಾಗಿ ನೀವು ಅನೇಕ ರೀತಿಯ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತೀರಿ. ಆದರೆ, ಅದರಲ್ಲಿರುವ ರಾಸಾಯನಿಕಗಳು ಚರ್ಮವನ್ನು ಹಾನಿಗೊಳಿಸಬಹುದು. ಚರ್ಮವನ್ನು ಒಳಗಿನಿಂದ ಆರೋಗ್ಯಕರವಾಗಿಡಲು ಬಯಸಿದರೆ, ನೈಸರ್ಗಿಕ ಪರಿಹಾರಗಳನ್ನು (natural remedies) ಅಳವಡಿಸಿಕೊಳ್ಳಬಹುದು. ಆರೋಗ್ಯಕರ ಚರ್ಮಕ್ಕಾಗಿ ಗೋಡಂಬಿ ಬೀಜ ಬಳಸಬಹುದು.
ಗೋಡಂಬಿಯಲ್ಲಿ (cashew) ಕಬ್ಬಿಣ, ಪೊಟ್ಯಾಸಿಯಮ್, ರಂಜಕ, ವಿಟಮಿನ್-ಕೆ ಮತ್ತು ಅನೇಕ ಪೋಷಕಾಂಶಗಳಿವೆ, ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಗೋಡಂಬಿ ಫೇಸ್ ಪ್ಯಾಕ್ ತಯಾರಿಸೋದು ಹೇಗೆ ಮತ್ತು ಅದರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ...
ಗೋಡಂಬಿಯಿಂದ ಈ 3 ಫೇಸ್ ಪ್ಯಾಕ್ ಗಳನ್ನು ತಯಾರಿಸಬಹುದು
1. ಗೋಡಂಬಿ ಮತ್ತು ಬೇಸನ್ ಫೇಸ್ ಪ್ಯಾಕ್ (cashew and basan facepack)
ಸಾಮಗ್ರಿಗಳು
10 ಗೋಡಂಬಿ, 1 ಟೀಸ್ಪೂನ್ ಹಸಿ ಹಾಲು, 1 ಟೀಸ್ಪೂನ್ ಕಡಲೆ ಹಿಟ್ಟು
ತಯಾರಿಸುವ ವಿಧಾನ
ಇದರಿಂದ ಫೇಸ್ ಪ್ಯಾಕ್ ತಯಾರಿಸಲು, ಮೊದಲು ಗೋಡಂಬಿಯನ್ನು ನೀರಿನಲ್ಲಿ ನೆನೆಸಿಡಿ. 1-2 ಗಂಟೆಗಳ ನಂತರ ಅದನ್ನು ರುಬ್ಬಿ, ಈಗ ಅದಕ್ಕೆ ಹಸಿ ಹಾಲು ಮತ್ತು ಕಡಲೆ ಹಿಟ್ಟನ್ನು ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ವಿಸ್ಕ್ ಮಾಡಿ. ನಂತರ ಈ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚಿ, ಸುಮಾರು 15 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಈ ಪ್ಯಾಕ್ ಅನ್ನು ನೀವು ವಾರದಲ್ಲಿ 2-3 ಬಾರಿ ಬಳಸಬಹುದು.
2. ಗೋಡಂಬಿ ಮತ್ತು ಅಲೋವೆರಾ (cashew and aloevera facepack)
ಸಾಮಗ್ರಿಗಳು
8-10 ಗೋಡಂಬಿ, ಒಂದು ಟೀಸ್ಪೂನ್ ಅಲೋವೆರಾ ಜೆಲ್
ತಯಾರಿಸುವ ವಿಧಾನ
ಮೊದಲನೆಯದಾಗಿ, ನೆನೆಸಿದ ಗೋಡಂಬಿಯ ಪೇಸ್ಟ್ ತಯಾರಿಸಿ, ಅದಕ್ಕೆ ಅಲೋವೆರಾ ಜೆಲ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು 15 ನಿಮಿಷಗಳ ನಂತರ ಅದನ್ನು ನೀರಿನಿಂದ ತೊಳೆಯಿರಿ. ನಂತರ ಮ್ಯಾಜಿಕ್ ನೀವೇ ನೋಡಿ.
3. ಗೋಡಂಬಿ, ಮುಲ್ತಾನಿ ಮಿಟ್ಟಿ ಮತ್ತು ಓಟ್ಸ್ (cashew, multani mitti and oats facepack)
ಸಾಮಗ್ರಿಗಳು
2 ಟೀಸ್ಪೂನ್ ಗೋಡಂಬಿ ಪೇಸ್ಟ್, 1 ಟೀಸ್ಪೂನ್ ಮುಲ್ತಾನಿ ಮಿಟ್ಟಿ, 1 ಟೀಸ್ಪೂನ್ ಓಟ್ಸ್ ಪೌಡರ್
ತಯಾರಿಸುವ ವಿಧಾನ
ಒಂದು ಬೌಲ್ ನಲ್ಲಿ ಗೋಡಂಬಿ ಪೇಸ್ಟ್ ತೆಗೆದುಕೊಳ್ಳಿ, ಅದಕ್ಕೆ ಮುಲ್ತಾನಿ ಮಿಟ್ಟಿ ಮತ್ತು ಓಟ್ಸ್ ಪುಡಿಯನ್ನು ಸೇರಿಸಿ. ನೀರಿನ ಸಹಾಯದಿಂದ ದಪ್ಪನೆಯ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ, 10-15 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಮುಖದ ಸ್ಕಿನ್ ಹೇಗೆ ಸಾಫ್ಟ್ ಅಂಡ್ ಸ್ಮೂತ್ ಆಗುತ್ತೆ ನೀವೇ ನೋಡಿ.
ಗೋಡಂಬಿ ಫೇಸ್ ಪ್ಯಾಕ್ ನ ಪ್ರಯೋಜನಗಳು (benefits of cashew facepack)
ಗೋಡಂಬಿ ಫೇಸ್ ಪ್ಯಾಕ್ ಅನೇಕ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತೆ. ಇದರ ಬಳಕೆಯು ಮುಖದ ಸುಕ್ಕುಗಳನ್ನು ಕಡಿಮೆ ಮಾಡುತ್ತೆ. ಇದು ಮೊಡವೆ, ಮತ್ತು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತೆ.
ಗೋಡಂಬಿ ಫೇಸ್ ಪ್ಯಾಕ್ ವಯಸ್ಸಾಗುವಿಕೆಯ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ ಎಂದು ಸಾಬೀತಾಗಿದೆ. ಅದರ ನಿಯಮಿತ ಬಳಕೆಯಿಂದ ನೀವು ಹೊಳೆಯುವ ಚರ್ಮವನ್ನು ಪಡೆಯಬಹುದು. ಇನ್ನೇಕೆ ತಡ ಇವತ್ತೆ ಗೋಡಂಬಿ ಫೇಸ್ ಪ್ಯಾಕ್ ಟ್ರೈ ಮಾಡಿ ನೋಡಿ.