ಹೆಂಗಸರ ದೇಹರಚನೆ ಗಂಡಸರಿಗಿಂತ ಭಿನ್ನವಾಗಿದೆ. ಆಳವಾದ ಪಾಕೆಟ್‌ಗಳು ಹೆಂಗಸರ ದೇಹ ರಚನೆಗೆ ಚೆಂದ ಕಾಣಿಸುವುದಿಲ್ಲ ಮತ್ತು, ಅವರ ಕೆಳಭಾಗ ಮಂದವಾಗಿ ಕಾಣುತ್ತದೆ. ಹೀಗಾಘಿ ಬದಲಾಗುತ್ತಿರುವ ಫ್ಯಾಷನ್ ಪ್ರವೃತ್ತಿಗಳು ಹೆಂಗಸರ ಜೀನ್ಸ್ ಪಾಕೆಟ್‌ಗಳ ಗಾತ್ರದ ಮೇಲೂ ಪರಿಣಾಮ ಬೀರಿವೆ. ಸ್ಕಿನ್ನಿ ಜೀನ್ಸ್, ಟೈಟ್ ಫಿಟ್ಟಿಂಗ್ ಜೀನ್ಸ್ ಬಂದ ಮೇಲೆ ಪಾಕೆಟ್ ಗಾತ್ರ ಕೂಡ ಚಿಕ್ಕದಾಗಿದೆ. ಫ್ಯಾಷನ್ ದೃಷ್ಟಿಯಿಂದ, ಹೆಂಗಸರಿಗೆ ಜೀನ್ಸ್‌ನಲ್ಲಿ ದೊಡ್ಡ ಪಾಕೆಟ್ ಆಕರ್ಷಕವಾಗಿ ಕಾಣುವುದಿಲ್ಲ. ಆದ್ದರಿಂದ, ಹೆಂಗಸರಿಗೆ ಚಿಕ್ಕ ಪಾಕೆಟ್ ಜೀನ್ಸ್ ಅನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.