ಅರ್ಜುನ್ ಮದುವೆಯಲ್ಲಿ ಮಿಂಚಿದ್ದು ಅಕ್ಕ ಸಾರಾ ತೆಂಡೂಲ್ಕರ್, ಪಿಂಕ್ ಸೀರೆಯಲ್ಲಿ ಮೋಡಿ, ಮದುವೆಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಅದು ಸಾರಾ. ಇದಕ್ಕೆ ಮುಖ್ಯ ಕಾರಣ ಮನೀಶ್ ಮಲ್ಹೋತ್ರ ಡಿಸೈನ್ ಮಾಡಿದ ಪಿಂಕ್ ಸೀರೆ.
ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೆಳತಿ ಸಾನಿಯಾ ಚಂದೋಕ್ ಜೊತೆ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಬಾಲಿವುಡ್, ಕ್ರಿಕೆಟ್, ರಾಜಕಾರಣಿಗಳು ಸೇರಿದಂತೆ ಹಲವು ದಿಗ್ಗಜರು ಪಾಲ್ಗೊಂಡಿದ್ದಾರೆ. ಈ ಮದುವೆಯಲ್ಲಿ ಮಿರ ಮಿರ ಮಿಂಚಿದ್ದು ಸಾರಾ ತೆಂಡೂಲ್ಕರ್.
25
ಸಾರಾ ತೆಂಡೂಲ್ಕರ್ ಪಿಂಕ್ ಸೀರೆ
ತಮ್ಮ ಅರ್ಜುನ್ ತೆಂಡೂಲ್ಕರ್ ಮದುವೆಯಲ್ಲಿ ಕೇಂದ್ರ ಬಿಂದು ಸಾರಾ ತೆಂಡೂಲ್ಕರ್. ಸಾರಾ ಪಿಂಕ್ ಸೀರೆಯಲ್ಲಿ ಮಿಂಚಿದ್ದರು. ಈ ಸೀರೆ ವಿನ್ಯಾಸಗೊಳಿಸಿದ್ದ ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರ. ರೊಸೆಟೆ ಬಾರ್ಡರ್, ಜರ್ದೋಝಿ ಹಾಗೂ ರೇಶಮ್ ಎಂಬ್ರಾಯಿಡರಿ ಈ ಸೀರೆಯ ಅಂದ ಹೆಚ್ಚಿಸಿದೆ. ಈ ಸೀರೆ ಸಾರಾ ತೆಂಡೂಲ್ಕರ್ ಸೌಂದರ್ಯ ಡಬಲ್ ಮಾಡಿದೆ.
35
ಸಾರಾ ಅಂದ ಹೆಚ್ಚಿಸಿದ ನೆಕ್ಲೇಸ್, ಮಾಂಗ್ಟಿಕಾ
ಸಾರಾ ತೆಂಡೂಲ್ಕರ್ ಟ್ರೆಡಿಷನಲ್ ಲುಕ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ ಅವರು ಗುಲಾಬಿ ಬಣ್ಣದ ಸೀರೆಗೆ ತಕ್ಕಂತೆ, ಲುಕ್‌ಗೆ ನೆಕ್ಲೇಸ್ ಮತ್ತು ಮಾಂಗ್‌ಟೀಕಾದಿಂದ ಇನ್ನಷ್ಟು ಮೆರುಗು ನೀಡಿತ್ತು. ಮೀಡಿಯಾಗೆ ಪೋಸ್ ಕೊಡುವಾಗ ಮುಗುಳ್ನಗುತ್ತಿದ್ದ ಸಾರಾ ತುಂಬಾ ಸುಂದರವಾಗಿ ಕಾಣುತ್ತಿದ್ದರು.
ಆಕರ್ಷಕವಾಗಿ ಕಾಣುತ್ತಿದ್ದ ಸಾರಾ ತೆಂಡೂಲ್ಕರ್ ಮಾಧ್ಯಮದ ಮುಂದೆ ಪೋಸ್ ನೀಡಿದ್ದಾರೆ. ಇದೀಗ ಸಾರಾ ತೆಂಡೂಲ್ಕರ್ ಸೌಂದರ್ಯ ಹಾಗೂ ಸೀರೆ ಭಾರಿ ಚರ್ಚೆಯಾಗುತ್ತಿದೆ. ಸಾರಾ ತೆಂಡೂಲ್ಕರ್ ಗುಲಾಬಿ ಬಣ್ಣದ ಸೀರೆ ಇದೀಗ ಟ್ರೆಂಡ್ ಆಗಿದೆ. ಸಚಿನ್ ತೆಂಡೂಲ್ಕರ್ ಪುತ್ರನ ಮದುವೆಯಲ್ಲಿ ಕಟುಂಬದ ಡ್ರೆಸ್ ಭಾರಿ ವೈರಲ್ ಆಗಿದೆ.
55
ಅಂಜಲಿ ತೆಂಡೂಲ್ಕರ್ ಸೀರೆ
ಅಂಜಲಿ ತೆಂಡೂಲ್ಕರ್ ಕಡು ಪಿಂಕ್ ಬಣ್ಣದ ಸೀರೆ ಧರಿಸಿದ್ದರು. ಈ ಮೂಲಕ ಮಗಳು ಹಾಗೂ ತಾಯಿಯ ಸೀರೆ ಹಾಗೂ ಲುಕ್ ವಿಶೇಷವಾಗಿತ್ತು. ಪ್ರೀ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಸಾರಾ ತೆಂಡೂಲ್ಕರ್ ಹೆವಿ ವರ್ಕ್ ಇರುವ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದರು.ಬಾರಿ ಮಿರರ್ ವರ್ಕ್ ಲೆಹಂಗಾ ಇದಾಗಿತ್ತು.
ಅಂಜಲಿ ತೆಂಡೂಲ್ಕರ್ ಸೀರೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.