ರೆಟ್ರೋ ಲುಕ್‌, ಆಧುನಿಕ ಸ್ಟೈಲ್‌, ಹೊಸ ಫ್ಯಾಷನ್‌.. ಬಾಲಿವುಡ್ ಹುಡುಗಿಯರ 'ಮಿಯು ಮಿಯು' ಡ್ರೆಸ್ ಟ್ರೆಂಡ್

Published : Oct 03, 2025, 11:32 AM IST

ಸ್ಕರ್ಟ್‌ ಶರ್ಟ್‌ಗಿಂತಲೂ ಗಿಡ್ಡವಿದ್ದ ಕಾರಣ ಇದನ್ನು ಯಾವ ಆ್ಯಂಗಲ್‌ನಿಂದ ನೋಡಬೇಕು ಎಂದು ಕೆಲಮಂದಿ ಕಕ್ಕಾಬಿಕ್ಕಿಯಾದರು. ಈ ಮಿಯು ಮಿಯು ಡ್ರೆಸ್‌ ಕೊರಿಯಾದಲ್ಲೋ, ಜಪಾನ್‌ನಲ್ಲೋ ಹುಟ್ಟಿದ್ದಲ್ಲ. ಇಟಲಿಯ ಶ್ರೀಮಂತ ಸ್ಟೈಲ್‌ ಇದು.

PREV
16
ಹೊಸ ಫ್ಯಾಶನ್‌ ಟ್ರೆಂಡ್‌

ಬೆಕ್ಕಿನ ಕೂಗನ್ನು ಹೋಲುವ ಹೊಸ ಫ್ಯಾಶನ್‌ ಟ್ರೆಂಡ್‌ ‘ಮಿಯು ಮಿಯು’ . ಪ್ಲೇ ಫುಲ್‌ ಅಂತೀವಲ್ಲ, ಆ ಥರದ ಹುಡುಗಿಯರಿಗೆ ಇದು ಬಹಳ ಇಷ್ಟ. ಬಾಲಿವುಡ್‌ ಹುಡುಗಿ ಜಾನ್ವಿ ಕಪೂರ್‌ಗಂತೂ ಇದು ಮೋಸ್ಟ್‌ ಫೇವರಿಟ್‌ ಅಂತೆ.

26
ಕಂಫರ್ಟ್‌ ಫೀಲ್‌, ಮಾಡರ್ನ್‌ ಲುಕ್‌

ಈ ಉಡುಪುಗಳಲ್ಲಿರುವ ಕಂಫರ್ಟ್‌ ಫೀಲ್‌, ಮಾಡರ್ನ್‌ ಲುಕ್‌ ಮತ್ತು ಸಂಸ್ಕೃತಿಯ ಸ್ಪರ್ಶ ಎಂಥವರೂ ಇದನ್ನು ಇಷ್ಟಪಡುವಂತೆ ಮಾಡುತ್ತದೆ ಎನ್ನುವುದು ಜಾನ್ವಿ ಅವರ ಒಂದು ವಾಕ್ಯದ ಉತ್ತರ.

36
ಟ್ರೆಂಡಿಗೆ ಮರುಜೀವ

ಇತ್ತೀಚೆಗೆ ಜಾನ್ವಿ ಕಪೂರ್‌ ವಿದೇಶದಲ್ಲಿ ನಡೆದ ಫ್ಯಾಶನ್‌ ವೀಕ್‌ ಒಂದರಲ್ಲಿ ಈ ಮಿಯು ಮಿಯು ಡ್ರೆಸ್‌ನಲ್ಲಿ ರೆಡ್‌ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿ ಈ ಟ್ರೆಂಡಿಗೆ ಮರುಜೀವ ನೀಡಿದ್ರು.

46
ಬಿಂದಾಸ್‌ ಸ್ಟೈಲ್‌

ಕೆಲ ಸಮಯದ ಹಿಂದೆ ವಿವಾದಿತ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫೆರ್ನಾಂಡಿಸ್ ಈ ಮಿಯು ಮಿಯು ಡ್ರೆಸ್‌ನಲ್ಲಿ ಬಿಂದಾಸ್‌ ಆಗಿ ಸ್ಟೈಲ್‌ ಮಾಡಿದ್ರು. ಬೋಲ್ಡ್‌ ಲುಕ್‌ನ ಆ ಡ್ರೆಸ್‌ ಲಾಂಗ್‌ ಶರ್ಟ್‌ ಮತ್ತು ಮಿನಿ ಸ್ಕರ್ಟ್‌ ಮಾದರಿಯಲ್ಲಿತ್ತು.

56
ರೆಟ್ರೋ ಲುಕ್‌, ಸಂಸ್ಕೃತಿಯ ಸ್ಪರ್ಶ

ಸ್ಕರ್ಟ್‌ ಶರ್ಟ್‌ಗಿಂತಲೂ ಗಿಡ್ಡವಿದ್ದ ಕಾರಣ ಇದನ್ನು ಯಾವ ಆ್ಯಂಗಲ್‌ನಿಂದ ನೋಡಬೇಕು ಎಂದು ಕೆಲಮಂದಿ ಕಕ್ಕಾಬಿಕ್ಕಿಯಾದರು. ಈ ಮಿಯು ಮಿಯು ಡ್ರೆಸ್‌ ಕೊರಿಯಾದಲ್ಲೋ, ಜಪಾನ್‌ನಲ್ಲೋ ಹುಟ್ಟಿದ್ದಲ್ಲ. ಇಟಲಿಯ ಶ್ರೀಮಂತ ಸ್ಟೈಲ್‌ ಇದು. ರೆಟ್ರೋ ಲುಕ್‌, ಸಂಸ್ಕೃತಿಯ ಸ್ಪರ್ಶ, ಆಧುನಿಕತೆ ಚಿಂತನೆ ಅನ್ನುವ ಕಾನ್ಸೆಪ್ಟ್‌ ಈ ಸ್ಟೈಲ್‌ನ ಹಿಂದಿದೆ.

66
ರೆಟ್ರೋ ವಿನ್ಯಾಸ

ಬರೀ ಡ್ರೆಸ್‌ ಮಾತ್ರ ಅಲ್ಲ, ಬ್ಯಾಗ್‌ಗಳು, ಆ್ಯಕ್ಸೆಸರೀಸ್‌ಗಳೂ ಈ ಕಾನ್ಸೆಪ್ಟ್‌ನಲ್ಲಿ ಬಂದಿವೆ. ಈ ಹೆಸರಿನ ಫ್ಯಾಶನ್‌ ಬ್ರಾಂಡ್‌ಗಳೂ ಇವೆ. ಈ ಡ್ರೆಸ್‌ಗಳಲ್ಲಿ ಕಾಮನ್‌ ಆಗಿ ಇರೋ ಅಂಶಗಳೆಂದರೆ ಪೋಲ್ಕಾ ಡಾಟ್ಸ್‌, ಬೋಲ್ಡ್‌ ಆಗಿರುವ ರೆಟ್ರೋ ವಿನ್ಯಾಸ.

Read more Photos on
click me!

Recommended Stories