ಆರೆಂಜ್‌ ಡ್ರೆಸ್‌ನಲ್ಲಿ ಮುದ್ದಾಗಿ ಸ್ಮೈಲ್ ಕೊಟ್ಟ ಯಶ್ ಮುಂದಿನ ಸಿನಿಮಾದ ನಾಯಕಿ ಸಂಯುಕ್ತಾ

First Published | Apr 7, 2024, 2:00 PM IST

ಯಶ್‌ 19 ಸಿನಿಮಾದ ನಾಯಕಿ ಅಂತಾನೇ ಸುದ್ದಿಯಲ್ಲಿರೋ ಮಲಯಾಳಂ ನಟಿ ಸಂಯುಕ್ತಾ, ಇತ್ತೀಚಿಗೆ ಆರೆಂಜ್ ಡ್ರೆಸ್‌ನಲ್ಲಿ ತಮ್ಮ ಫೋಟೋಸ್ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಲುಕ್ ನೋಡಿ ಹೊಗಳೋ ಮೊದಲು ಸಿಕ್ಕಾಪಟ್ಟೆ ಮೇಕಪ್ ಮಾಡಿಕೊಂಡಿದ್ದೀರಿ ಎಂದು ಕಾಲೆಳೆದಿದ್ದಾರೆ.

ಕೆಜಿಎಫ್ ಸಿನಿಮಾದ ನಂತರ ಜಗತ್ತಿನಾದ್ಯಂತ ಯಶ್‌ ಕ್ರೇಜ್ ಹೆಚ್ಚಾಗಿದೆ. ರಾಕಿಂಗ್‌ ಸ್ಟಾರ್‌ ಮುಂದಿನ ಸಿನಿಮಾ ಹೀರೋಯಿನ್ ಯಾರು ಅನ್ನೋ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. ಯಶ್‌ 19 ಸಿನಿಮಾದ ನಾಯಕಿ ಅಂತಾನೇ ಸುದ್ದಿಯಲ್ಲಿರೋ ಮಲಯಾಳಂ ನಟಿ ಸಂಯುಕ್ತಾ, ಇತ್ತೀಚಿಗೆ ಆರೆಂಜ್ ಡ್ರೆಸ್‌ನಲ್ಲಿ ತಮ್ಮ ಫೋಟೋಸ್ ಶೇರ್ ಮಾಡಿದ್ದಾರೆ.

ಆರೆಂಜ್‌ ಡ್ರೆಸ್‌ಗೆ ದೊಡ್ಡದಾದ ಇಯರಿಂಗ್‌ನ್ನು ಸಹ ಫೇರ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡ್ಕೊಂಡಿರೋ ಫೋಟೋಸ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಬ್ಯೂಟಿ ಕ್ವೀನ್‌, ಪ್ರೆಟ್ಟೀ, ಗಾರ್ಜಿಯಸ್‌ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

Latest Videos


ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಸಂಯುಕ್ತಾ ಮೆನನ್. ಯಾವಾಗಲೂ ತಮ್ಮ ಟ್ರೆಡಿಶನಲ್ ಹಾಗೂ ಮಾಡರ್ನ್‌ ಡ್ರೆಸ್‌ನಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಇತ್ತೀಚಿಗೆ ಮಾಡರ್ನ್‌ ಲುಕ್‌ನ ಫೋಟೋಸ್ ಶೇರ್ ಮಾಡಿದ್ದಾರೆ.

ಸಂಯುಕ್ತಾ ಮೆನನ್ ಸದ್ಯ ದಕ್ಷಿಣಭಾರತದ ಸಿನಿಮಾಗಳಲ್ಲಿ ಟ್ರೆಂಡಿಂಗ್‌ಲ್ಲಿರೋ ಚೆಲುವೆ. 2016ರಿಂದ ಮಲೆಯಾಳಂ ಸಿನಿ ರಂಗದಲ್ಲಿ ಅಭಿನಯಿಸುತ್ತಿದ್ದಾರೆ. ಸಂಯುಕ್ತಾ ತೆಲುಗು, ತಮಿಳು ಚಿತ್ರರಂಗಕ್ಕೆ ಚಿರಪರಿಚಿತ ಹೆಸರು. ಕ್ಯಾರೆಕ್ಟರ್ ಬೇಸ್ಡ್‌ ಸಿನಿಮಾಗಳಲ್ಲೇ ಆಯ್ಕೆ ಮಾಡುತ್ತಾ ಬಂದಿದ್ದಾರೆ.
 

ಸಿನಿಮಾದಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್​ನಲ್ಲಿ ಕೂಡಾ ತುಂಬಾ ಸಿಂಪಲ್ ಆಗಿರುವ ಸಂಯುಕ್ತಾ ಅವರು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸಂಯುಕ್ತಾ ಮೆನನ್‌, ಕೇರಳದ ಪಾಲಕ್ಕಾಡ್‌ ಜಿಲ್ಲೆಯವರು.

ಮಲಯಾಳಂನ ಪಾಪ್‌ಕಾರ್ನ್‌ ಚಿತ್ರದ ಮೂಲಕ ನಟನೆ ಆರಂಭಿಸಿದರು. ನಂತರ ತೀವಂಡಿ, ಒರು ಯಮಂದನ್ ಪ್ರೇಮಕಥಾ, ಕಲ್ಕಿ, ವೆಲ್ಲಂ, ಕಡುವ ಸೇರಿದಂತೆ ಹಲವಾರು ಯಶಸ್ವೀ ಚಿತ್ರದಲ್ಲಿ ನಟಿಸಿದ್ದಾರೆ.

ವಾತಿ ಸಿನಿಮಾದಲ್ಲಿ ಧನುಷ್​ಗೆ ಜೋಡಿಯಾಗಿ ಹಳ್ಳಿಯ ಟೀಚರ್ ಪಾತ್ರದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಭೀಮ್ಲಾ ನಾಯಕ್ (2022) ಚಿತ್ರದ ಮೂಲಕ ತೆಲುಗು ಚೊಚ್ಚಲ ಪ್ರವೇಶದ ನಂತರ , ಬಿಂಬಿಸಾರದಲ್ಲಿ ಸಬ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ಅವರು ಪ್ರಶಂಸೆಯನ್ನು ಪಡೆದರು.(2022).  ಸೌತ್​ನಲ್ಲಿ ನಟಿಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ.  

ಗೀತು ಮೋಹನ್‌ ದಾಸ್‌ ಅವರ ಯಶ್‌ 19 ಸಿನಿಮಾದಲ್ಲಿ ಟೊವಿನೋ ಥಾಮಸ್‌, ಆಸಿಫ್ ಅಲಿ, ರಾಣಾ ದಗ್ಗುಬಾಟಿ ಮತ್ತು ಜಾನ್ ಅಬ್ರಹಾಂ ಸಹ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.  ಆದರೆ ಈ ಎಲ್ಲದರ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಬೇಕಿದೆ.

click me!