ಈ ದೇಶದಲ್ಲೇ ಇರೋದು ಟಾಪ್ ಸುಂದ್ರ ಸುಂದ್ರೀರು..! ಸೌಂದರ್ಯ ಸ್ಪರ್ಧೇಲಿ ಹೆಚ್ಚು ಬಾರಿ ಗೆದ್ದೋರ್ಯಾರು?

First Published | Apr 19, 2024, 11:52 AM IST

ಕೆಲವು ದೇಶಗಳಲ್ಲಿ ನಿಜವಾಗಲೂ ಸುಂದರವಾಗಿರೋರು ಹೆಚ್ಚೋ, ಅಥವಾ ಅಲ್ಲಿರೋರಿಗೆ ಗೆಲ್ಲೋದು ಹೇಗೆ ಅಂತ ಗೊತ್ತೋ ಗೊತ್ತಿಲ್ಲ.. ಆದ್ರೆ ಈ ದೇಶಗಳು ಸೌಂದರ್ಯ ಸ್ಪರ್ಧೆಯಲ್ಲಿ ಅತಿ ಹೆಚ್ಚು ಬಾರಿ ಗೆಲುವು ಕಂಡಿವೆ. ಅಂದ ಹಾಗೆ, ಭಾರತ ಎಷ್ಟು ಬಾರಿ ಸೌಂದರ್ಯ ಸ್ಪರ್ಧೆಯ ವಿಜೇತರನ್ನು ಕಂಡಿದೆ?

ಸೌಂದರ್ಯ ಸ್ಪರ್ಧೆಗಳು ಹಲವು ರೀತಿಯಲ್ಲಿ ನಡೆಯುತ್ತವೆ. ಮಿಸ್ ಯೂನಿವರ್ಸ್, ಮಿಸ್ ವರ್ಲ್ಡ್, ಮಿಸ್ಟರ್ ಯೂನಿವರ್ಸ್, ಮಿಸ್ ಅರ್ತ್, ಮಿಸ್ ಗ್ಲೋಬಲ್, ಮಿಸ್ ಸುಪ್ರಾನ್ಯಾಷನಲ್, ಮಿಸ್ ಇಂಟರ್‌ನ್ಯಾಷನಲ್,ಮಿಸ್ಟರ್ ವರ್ಲ್ಡ್ ಇತ್ಯಾದಿ...

money.co.uk ವೆಬ್‌ಸೈಟ್ ಪ್ರಪಂಚದಾದ್ಯಂತ 5,000 ಸೌಂದರ್ಯ ಸ್ಪರ್ಧೆಗಳ (ಮಿಸ್ ಮತ್ತು ಮಿಸ್ಟರ್) ಫಲಿತಾಂಶಗಳನ್ನು ವಿಶ್ಲೇಷಿಸಿದೆ ಮತ್ತು ಇವುಗಳಲ್ಲಿ ಅತಿ ಹೆಚ್ಚು ಬಾರಿ ಸೌಂದರ್ಯದ ಕಿರೀಟ ಪಡೆದ ದೇಶಗಳನ್ನು ಗುರುತಿಸಿದೆ. ಈ ಪಟ್ಟಿಯಲ್ಲಿ ಟಾಪ್ 10 ಯಾವೆಲ್ಲ ನೋಡೋಣ. 

Tap to resize

1. U.S. - 61 ಪ್ರಶಸ್ತಿಗಳು
ಯುನೈಟೆಡ್ ಸ್ಟೇಟ್ಸ್ ಪುರುಷ ಮತ್ತು ಮಹಿಳಾ ಸೌಂದರ್ಯ ಸ್ಪರ್ಧೆಯ ವಿಜೇತರ ಪಟ್ಟಿಯಲ್ಲಿ ಒಟ್ಟು 61 ವಿಜಯಗಳೊಂದಿಗೆ ವ್ಯಾಪಕ ಅಂತರದಿಂದ ಅಗ್ರಸ್ಥಾನದಲ್ಲಿದೆ. 

2. ವೆನೆಜುವೆಲಾ - 35 ಪ್ರಶಸ್ತಿ ಗೆಲುವುಗಳು
ವೆನೆಜುವೆಲಾ ಯಾವಾಗಲೂ ಅಲ್ಲಿರುವವರ ಸೌಂದರ್ಯಕ್ಕಾಗಿ ಪ್ರಸಿದ್ಧವಾಗಿದೆ ಮತ್ತು ಅಂಕಿಅಂಶಗಳು ಅದನ್ನು ಸಾಬೀತುಪಡಿಸುತ್ತವೆ. ಅವರು ಒಟ್ಟು 35 ಸೌಂದರ್ಯ ಸ್ಪರ್ಧೆಗಳಲ್ಲಿ ಗೆದ್ದು ಎರಡನೇ ಅತಿ ಹೆಚ್ಚು ವಿಜೇತರನ್ನು ಹೊಂದಿರುವ ದೇಶವಾಗಿದೆ. 

3. ಬ್ರೆಸಿಲ್ - 26 ಪ್ರಶಸ್ತಿಗಳು
ಮೂರನೇ ಸ್ಥಾನದಲ್ಲಿ ಬ್ರೆಜಿಲ್ ಇದೆ, ಇದು 26 ಸೌಂದರ್ಯ ಸ್ಪರ್ಧೆಯ ವಿಜೇತರನ್ನು ಹೊಂದಿದೆ.

4. U.K. - 25 ಪ್ರಶಸ್ತಿಗಳು
ಯುಕೆ ವಿಶ್ವ ಮಟ್ಟದಲ್ಲಿ 1983ರ ನಂತರ ಗೆದ್ದಿಲ್ಲ. ಸೌಂದರ್ಯ ವಿಜೇತ ಅಥವಾ ವಿಜೇತೆಯರನ್ನು ಹೊಂದದೆ ಬಹಳ ಸಮಯವಾಗಿದೆ, ಆದರೂ ಅದರ 25 ವಿಜಯಗಳು ಅದನ್ನು ನಾಲ್ಕನೇ ಸ್ಥಾನದಲ್ಲಿ ಇರಿಸಿದೆ. 

5. ಫಿಲಿಪೈನ್ಸ್ - 23 ಪ್ರಶಸ್ತಿ ಗೆಲುವುಗಳು
ಏಷ್ಯನ್ ದೇಶವು ಹೆಚ್ಚು ಸೌಂದರ್ಯ ಸ್ಪರ್ಧೆಯ ವಿಜೇತರನ್ನು ಹೊಂದಿರುವ ವಿಶ್ವ ನಾಯಕರಲ್ಲಿ ಐದನೇ ಸ್ಥಾನದಲ್ಲಿದೆ; 23 ಪ್ರಶಸ್ತಿಗಳನ್ನದು ಪಡೆದಿದೆ. 

6. ಆಸ್ಟ್ರೇಲಿಯಾ, ಕೊಲಂಬಿಯಾ, ಥೈಲ್ಯಾಂಡ್ - 19 ಪ್ರಶಸ್ತಿ ಗೆಲುವುಗಳು
ಆರನೇ ಸ್ಥಾನದಲ್ಲಿ ಒಂದೇ ಸಂಖ್ಯೆಯ ಪುರುಷ ಮತ್ತು ಮಹಿಳಾ ವಿಜೇತರನ್ನು ಹೊಂದಿರುವ ಮೂರು ದೇಶಗಳಿವೆ: ಅವು ಆಸ್ಟ್ರೇಲಿಯಾ, ಕೊಲಂಬಿಯಾ, ಥೈಲ್ಯಾಂಡ್ . ಇವೆಲ್ಲ ದೇಶಗಳೂ ಇದುವರೆಗೆ 19 ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿವೆ.

7. ದಕ್ಷಿಣ ಆಫ್ರಿಕಾ, 18 ಪ್ರಶಸ್ತಿಗಳು

ಆಫ್ರಿಕನ್ನರೆಂದರೆ ಅವರ ಸೌಂದರ್ಯದ ಬಗ್ಗೆ ಅನುಮಾನ ಪಡುವವರ ಸಂಖ್ಯೆ ದೊಡ್ಡದಿದೆ. ಆದರೆ, 18 ಪ್ರಶಸ್ತಿಗಳೊಂದಿಗೆ ಈ ದೇಶವು ಸೌಂದರ್ಯ ಸ್ಪರ್ಧೆಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನು ಸ್ಪೇನ್ ಕೂಡಾ 18 ಸೌಂದರ್ಯ ಪ್ರಶಸ್ತಿ ಗೆದ್ದಿದೆ. 

ಭಾರತಕ್ಕೆಷ್ಟು ಪ್ರಶಸ್ತಿಗಳು?

ಎಲ್ಲಾ ನಾಲ್ಕು ಸ್ಪರ್ಧೆಗಳಲ್ಲಿ ಎಂಬತ್ತೊಂದು ಸ್ಥಾನಗಳೊಂದಿಗೆ ದೇಶವು ಒಟ್ಟು ಹತ್ತು ವಿಜಯಗಳನ್ನು ಕಂಡಿದೆ: ಮೂರು - ಮಿಸ್ ಯೂನಿವರ್ಸ್ ಕಿರೀಟಗಳು (1994 • 2000 • 2021) ಆರು - ಮಿಸ್ ವರ್ಲ್ಡ್ ಕಿರೀಟಗಳು (1966 • 1994 • 1997 • 1999 • 2000) ಒಂದು • 2017 - ಮಿಸ್ ಅರ್ಥ್ ಕಿರೀಟ (2010)

Latest Videos

click me!