ದಕ್ಷಿಣಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್. ಯಾವಾಗ್ಲೂ ಬೋಲ್ಡ್ ಡ್ರೆಸ್ ಹಾಕ್ಕೊಂಡು ಇನ್‌ಸ್ಟಾಗ್ರಾಂನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಜರಿಯಂಚಿನ ಗ್ರ್ಯಾಂಡ್ ಸೀರೆಯುಟ್ಟು ಮುದ್ದಾಗಿ ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ.
ಹಸಿರು-ಕೆಂಪು ಬಣ್ಣದ ಗ್ರ್ಯಾಂಡ್ ರೇಷ್ಮೆ ಸೀರೆಯುಟ್ಟು ಮುದ್ದಾಗಿ ನಗು ಬೀರಿದ್ದಾರೆ. ಹಸಿರು ಮೈಗೆ ಕೆಂಪಂಚಿರುವ ಗ್ರ್ಯಾಂಡ್ ಸೀರೆಯನ್ನು ಅನುಪಮಾ ಉಟ್ಟಿದ್ದು, ಇದಕ್ಕೆ ಒಪ್ಪುವಂತೆ ಗ್ರ್ಯಾಂಡ್ ನೆಕ್ಲೇಸ್ ಹಾಗೂ ಇಯರಿಂಗ್‌ನ್ನು ಸಹ ಧರಿಸಿದ್ದಾರೆ.
ಹಲವು ಹುಡುಗರ ಮನಸ್ಸು ಕದ್ದ ಬೆಡಗಿ. ದೇವತೆ, ಕ್ರಶ್ ಎಂದು ಬಾಯ್ಸ್ ಮನಸಾರೆ ಮೆಚ್ಚಿಕೊಂಡಿರುವ ಹುಡುಗಿ ಅನುಪಮಾ ಪರಮೇಶ್ವರನ್.
ಯಾವಾಗ್ಲೂ ಹಾಟ್ ಲುಕ್‌ನಲ್ಲಿ ಮಿಂಚೋ ಈ ಮಲ್ಲು ಬೆಡಗಿ ಈ ಬಾರಿ ಅಪ್ಪಟ ಭಾರತೀಯ ನೀರೆಯಂತೆ ಗ್ರ್ಯಾಂಡ್ ಸೀರೆಯುಟ್ಟು ಆಭರಣಗಳನ್ನು ತೊಟ್ಟು ಮುದ್ದಾಗಿ ನಗು ಬೀರಿದ್ದಾರೆ.
ಅನುಪಮಾ ಸ್ಯಾರಿ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಲೈಕ್, ಹಾರ್ಟ್ ಎಮೋಜಿ ಕಳುಹಿಸಿದ್ದಾರೆ. ಬ್ಯೂಟಿಫುಲ್, ಕ್ಯೂಟಿ ಪೈ, ವಾವ್ಹ್, ದೇವತೆ, ಗಾರ್ಜಿಯಸ್ ಎಂದೆಲ್ಲಾ ಹೊಗಳಿದ್ದಾರೆ. ಇನ್ನು ಹಲವರು ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ ಎಂದು ಹೊಗಳಿದ್ದಾರೆ.
ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಬಿಝಿಯಾಗಿರುವ ನಟಿಯರಲ್ಲೊಬ್ಬರು ಅನುಪಮಾ ಪರಮೇಶ್ವರನ್. ಪಡ್ಡೆ ಹುಡುಗರ ಹಾಟ್ ಫೇವರಿಟ್. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಮಾಡರ್ನ್ ಹಾಗೂ ಟ್ರೆಡಿಶನಲ್ ಡ್ರೆಸ್‌ನಲ್ಲಿ ಆಗಾಗ ಸ್ಟೈಲಿಶ್ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 15 ಮಿಲಿಯನ್ ಫಾಲೋವರ್ಸ್‌ನ್ನು ಹೊಂದಿರುವ ನಟಿ, 1510 ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಇವರ ಫೋಟೋಗಳಿಗೆ ಲೈಕ್ಸ್, ಹಾರ್ಟ್ ಕೊಟ್ಟು, ಕಾಮೆಂಟ್ ಮಾಡ್ತಾನೂ ಇರ್ತಾರೆ.
ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳನ್ನು ಮಾಡಿರುವ ನಟಿ ಅನುಪಮಾ ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಾ ಅಭಿಮಾನಿಗಳ ಮನಗೆಲ್ಲುತ್ತಿರುತ್ತಾರೆ. ನಟಿ ಅನುಪಮಾ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡದಿದ್ದರೂ ಅನೇಕ ಸಿನಿಮಾಗಳು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿವೆ