ಇವರು ಸೆಲ್ವರಾಜ್ ಅಲ್ಲ ಸೆವೆನ್ ರಾಜ್: 7 ಎಂದರೆ ಇಂಪು : ಮನೆಯಲ್ಲಿರೋದೆಲ್ಲಾ ಬರೀ ಬಿಳಿ ಕೆಂಪು

First Published | Aug 30, 2023, 12:51 PM IST

ಕೆಲವರು ತಮ್ಮ ಪ್ರತಿಭೆ, ಶ್ರೀಮಂತಿಕೆ, ಬುದ್ಧಿವಂತಿಕೆ ಹೀಗೆ ವಿವಿಧ ಕಾರಣಕ್ಕೆ ಖ್ಯಾತಿ ಗಳಿಸಿದರೆ ಮತ್ತೆ ಕೆಲವು ವ್ಯಕ್ತಿಗಳು  ವಿಭಿನ್ನ ಕಾರಣಕ್ಕೆ ಫೇಮಸ್ ಆಗುತ್ತಾರೆ. ಅಂತಹವರ ಸಾಲಿಗೆ ಸೇರುತ್ತಾರೆ ಬೆಂಗಳೂರಿನ ಈ ಉದ್ಯಮಿ ಸೆವೆನ್ ರಾಜ್, ಸೆಲ್ವರಾಜ್‌ನ ಸೆವೆನ್ ರಾಜ್ ಎಂದು ಬರೆದಿರಬೇಕು ಅನ್ಕೊಂಡ್ರಾ ಖಂಡಿತ ಇಲ್ಲ, 7 ನಂಬರ್ ಮೇಲಿನ ಪ್ರೀತಿಗೆ ಇವರ ಹೆಸರೇ ಸೆವೆನ್ ರಾಜ್ ಆಗಿದೆ

sevenraj

ಬರೀ  ಈ ನಂಬರ್ ಕಾರಣಕ್ಕೆ ಇವರು ಖ್ಯಾತಿ ಗಳಿಸಿರೋದಲ್ಲಾ ಕೆಂಪು ಹಾಗೂ ಬಿಳಿ ಬಣ್ಣದ ಮೇಲಿನ ಇವರ ಪ್ರೇಮದ ಕಾರಣಕ್ಕೆ ಇವರು ಸಖತ್ ಫೇಮಸ್ ಆಗಿದ್ದಾರೆ. ಇವರ ಮನೆಗೆ ಹೋದರೆ ಯಾರಿಗಾದರೂ ಅಚ್ಚರಿಯಾಗದೇ ಇರದು ಏಕೆಂದರೆ ಇವರ ಮನೆಯಲ್ಲಿರೋದೆಲ್ಲಾ ಕೆಂಪು ಬಿಟ್ಟರೆ ಬಿಳಿ ಮಾತ್ರ ಬೇರಾವ ಬಣ್ಣವನ್ನು ನಿಮಗಿಲ್ಲಿ ಕಾಣಲಾಗದು. 

sevenraj

ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ (Real estate Businessman) ಸೆವೆನ್ ರಾಜ್ ಅವರಿಗೂ ಸಂಖ್ಯೆ ಏಳಿಗೂ(7) ಏನೋ ಅವಿನಾಭಾವ ಸಂಬಂಧ, ಸೆವೆನ್ ರಾಜ್ ಅವರು ತಮ್ಮ ಪೋಷಕರಿಗೆ 7ನೇ ಮಗುವಾಗಿ ಹುಟ್ಟಿದ್ದು, ಸಂಖ್ಯೆ 7ರಿಂದ ಆತನಿಗೆ ಶುಭವಾಗುವುದು ಎಂಬ ಬಗ್ಗೆ ಮೊದಲೇ ಸ್ವಲ್ಪ ಸ್ವಲ್ಪ ತಿಳಿದಿದ್ದ ಪೋಷಕರು ಆತನಿಗೆ ಸೆವೆನ್ ರಾಜ್ (Seven Raj) ಎಂದೇ ಹೆಸರಿಟ್ಟರಂತೆ, ಈ ಸೆವೆನ್ ನಂಬರ್ ಹಾಗೂ ಕೆಂಪು ಬಿಳಿ ಬಣ್ಣದ ಮೇಲೆ ಈ ಸೆವೆನ್ ರಾಜ್ ಅವರಿಗೆ ಇನ್ನಿಲ್ಲದ ವ್ಯಾಮೋಹ, ಈ ವ್ಯಾಮೋಹದ ಕಾರಣದಿಂದಲೇ ಅವರು ನಗರದಲ್ಲಿ ಸಖತ್ ಫೇಮಸ್ ಆಗಿದ್ದು, ಕೆಂಪು ಬಿಳಿ ಬಣ್ಣದ ಮೇಲಿನ ಅವರ ವ್ಯಾಮೋಹ ಎಂಥದ್ದು ಎಂಬುದನ್ನು ಅವರ ಮನೆಗೆ ಭೇಟಿ ನೀಡಿದವರೆಲ್ಲರೂ ತಿಳಿಯಬಹುದಾಗಿದೆ. ಏಕೆಂದರೆ ಅವರ ಮನೆಯಲ್ಲಿ ಕೆಂಪು ಬಿಳಿಯ ಬದಲು ಬೇರಾವ ಬಣ್ಣವೂ ಇಲ್ಲ. 

Latest Videos


sevenraj

ಅವರ ರಿಯಲ್ ಎಸ್ಟೇಟ್‌ ಏಜೆನ್ಸಿಯ  ಮಾರ್ಕೆಟಿಂಗ್‌ಗಾಗಿ (Marketing) ಸ್ಥಾಪಿಸಿದ ಕಚೇರಿಗೆ ಅವರು ಮೊದಲ ಬಾರಿಗೆ ಕೆಂಪು ಹಾಗೂ ಬಿಳಿ ಬಣ್ಣದ ಪೇಂಟ್ ಅನ್ನು ಮೊದಲ ಬಾರಿ ಮಾಡಿದ್ದರು. ಇದಾದ ನಂತರ ಇವರಿಗೆ ಈ ಎರಡು ಬಣ್ಣಗಳ ಸಂಯೋಜನೆ ಮೇಲೆ ಇನ್ನಿಲ್ಲದ ಸೆಳೆತ ಶುರುವಾಯ್ತು. 

sevenraj

ಹೀಗಾಗಿ ಇದರ ನಂತರ ಅವರು ಪ್ರತಿಯೊಂದಕ್ಕೂ ಬಿಳಿ ಹಾಗೂ ಕೆಂಪು ಬಣ್ಣವನ್ನೇ ಆಯ್ಕೆ ಮಾಡಲು ಶುರು ಮಾಡಿದರು, ಮನೆಯ ಪೇಟಿಂಗ್‌ನಿಂದ ಹಿಡಿದು ಒಳಾಂಗಣ ಅಲಂಕಾರ ಪಾತ್ರ ಸಾಮಾನಿನಿಂದ ಶುರುವಾಗಿ ಧರಿಸುವ ಧಿರಿಸಿನವರೆಗೂ ಇಲ್ಲಿ ಎಲ್ಲವೂ ಕೆಂಪು ಬಿಳುಪು, ಮನೆ ಕಾರು, ಸ್ಕೂಟರ್, ಮನೆಯ ಪೀಠೋಪಕರಣಗಳು, ಬಟ್ಟೆಗಳು ಹೀಗೆ ಇಲ್ಲಿರುವ ಪ್ರತಿಯೊಂದು ಕೂಡ ಕೆಂಪು ಬಿಳುಪಿನ ಸಂಯೋಜನೆಯಾಗಿದೆ. 

sevenraj

ಇದರ ಜೊತೆಗೆ ಸೆವೆನ್ ರಾಜ್ ಅವರು ಸಂಖ್ಯೆ 7 ರ ಬಗ್ಗೆಯೂ ಅತೀಯಾದ ಪ್ರೀತಿ ಹೊಂದಿದ್ದು, ಇವರು 7 ಭಾಷೆಗಳನ್ನು ಸುಲಲಿತವಾಗಿ ಮಾತನಾಡಬಲ್ಲವರಾಗಿದ್ದಾರೆ.  ಅಲ್ಲದೇ ಇವರು ತಾವು ಧರಿಸುವ ಕೋಟ್‌ನಲ್ಲಿರುವ ಬಟನ್‌ ಅನ್ನು 7 ಇರುವಂತೆ ಕಸ್ಟಮೈಸ್ ಮಾಡಿದ್ದಾರೆ. (ಸಾಮಾನ್ಯವಾಗಿ ಕೋಟ್‌ 2 ರಿಂದ 3 ಬಟನ್‌ಗಳಿರುತ್ತವೆ.) ಇದರ ಜೊತೆಗೆ ಇವರ ಫೋನ್ ನಂಬರ್ ಕೂಡ 7777 ಸಂಖ್ಯೆಯಿಂದ ಕೊನೆಗೊಳ್ಳುತ್ತದೆ. ಅಲ್ಲದೇ ಇದರ ಜೊತೆಗೆ ಇವರ ಹೆಸರು ಕೂಡ ಸಂಖ್ಯೆಯಿಂದಲೇ ಕೂಡಿವೆ. ಒಟ್ಟಿನಲ್ಲಿ ಕೆಂಪು ಬಿಳಿ ಬಣ್ಣ ಹಾಗೂ ಸೆವೆನ್‌  ನಂಬರ್‌ಗೆ ಇವರು ಮಾರು ಹೋಗಿದ್ದು, ವಿಚಿತ್ರ ಎನಿಸುತ್ತಿದೆ. 

click me!