ಕಿರುತೆರೆ ನಟಿ ವೈಷ್ಣವಿ ಗೌಡ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಆಗಾಗ ತಮ್ಮ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ವೈಟ್ ಕಲರ್ ಸೀರೆಯುಟ್ಟು ಮುದ್ದಾಗಿ ಸ್ಮೈಲ್ ಕೊಟ್ಟು ಫೋಟೋಗೆ ಫೋಸ್ ನೀಡಿದ್ದಾರೆ.
ಬಿಳಿ ಬಣ್ಣದಲ್ಲಿ ಬುಟ್ಟಾ ಇರುವ ಬಾರ್ಡರ್ ಸೀರೆಯನ್ನು ವೈಷ್ಣವಿ ಉಟ್ಟಿದ್ದಾರೆ. ಇದಕ್ಕೆ ಒಪ್ಪುವಂತೆ ಪರ್ಲ್ಸ್ ನೆಕ್ಲೇಸ್ ಸೆಟ್‌ನ್ನು ಸಹ ಧರಿಸಿದ್ದಾರೆ. ವೈಟ್ ಸೀರೆಯಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ. ಆದ್ರೆ ಫ್ಯಾನ್ಸ್ ಮಾತ್ರ ಪ್ರೇಮಿಗಳ ದಿನ ವೈಟ್ ಕಲರ್ ಸೀರೆಯುಟ್ಟಿದ್ಯಾಕೆ ಅಂತ ಕೇಳ್ತಿದ್ದಾರೆ.
ವೈಷ್ಣವಿ ಗೌಡ ಹೊಸ ಫೋಟೋಸ್‌ಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಸಹ ಮಾಡಿದ್ದಾರೆ. ಕ್ಯೂಟ್, ಗಾರ್ಜಿಯಸ್, ಬ್ಯೂಟಿಫುಲ್ ಎಂದೆಲ್ಲಾ ಹೊಗಳಿದ್ದಾರೆ. ಮತ್ತೆ ಕೆಲವರು, ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ಶುಭಾಶಯ ಕೋರಿದ್ದಾರೆ.
ಒಬ್ಬ ಅಭಿಮಾನಿ, 'ರಾಜಕುಮಾರಿ ಬಿಳಿ ಸೀರೆಯ ಬೊಂಬೆ ಹುಡುಗಿ. ದೃಷ್ಟಿ ಆಗುತ್ತೆ ವ್ಯಾಲೆಂಟೈನ್ ಮುದ್ದಾದ ಬೊಂಬೆಗೆ ಪ್ರೇಮಿಗಳ ದಿನದ ಶುಭಾಶಯಗಳು' ಎಂದಿದ್ದಾರೆ. ಇನ್ನೊಬ್ಬರು 'ದೇಸಿ ಸಿಂಡ್ರೆಲ್ಲಾ' ಎಂದು ಹೊಗಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲೂ ನಟಿ ವೈಷ್ಣವಿ ಗೌಡ ಸಖತ್ ಆಕ್ಟಿವ್. ಆಗಾಗ ತಮ್ಮ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿರುತ್ತಾರೆ. ಮಾಡರ್ನ್, ಟ್ರೆಡಿಶನಲ್ ಲುಕ್‌ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ.
ಮಾತ್ರವಲ್ಲ ಸೀರಿಯಲ್‌ಗಾಗಿ ಸುಂದರವಾಗಿ ರೆಡಿಯಾದಾಗಲ್ಲೆಲ್ಲಾ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಸೀರಿಯಲ್ ಪ್ರಿಯರಿಗೂ ವೈಷ್ಣವಿ ಅಚ್ಚುಮೆಚ್ಚು. ಅದರಲ್ಲೂ ಇತ್ತೀಚಿಗೆ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿಯಲ್ಲಿ ನಟಿಯ ಪಾತ್ರ ಹಾಗೂ ಅಭಿನಯ ಎಲ್ಲರಿಗೂ ಇಷ್ಟವಾಗಿದೆ. ಮುಗ್ದೆ ಸೀತೆಯ ಪಾತ್ರವನ್ನು ಎಲ್ಲರೂ ಕೊಂಡಾಡುತ್ತಾರೆ.
ವೈಷ್ಣವಿ ಗೌಡ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿ. ಅದಾದ ಬಳಿಕ ಬಿಗ್ ಬಾಸ್ ನಲ್ಲೂ ಕೂಡ ಸಕ್ಕತ್ತಾಗಿ ಆಟ ಆಡಿದ್ದಾರೆ.
ವೈಷ್ಣವಿ ಗೌಡ, ಇದೀಗ ಸೀತಾ ರಾಮ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದು, ಇದು ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ರಾಮ-ಸೀತಾ, ಸಿಹಿಯ ಕಥೆ ಎಲ್ಲರ ಮನ ಗೆಲ್ಲುತ್ತಿದೆ.