ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಿದ ವೈಷ್ಣವಿ ಗೌಡ; ರಾಮ ಹಾಸ್ಪಿಟಲ್‌ನಲ್ಲಿದ್ದಾನೆ, ನಿಮ್ದೇನು ಹೊಸ ಲುಕ್ ಎಂದ ಫ್ಯಾನ್ಸ್!

First Published Feb 28, 2024, 2:31 PM IST

ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀತಾರಾಮ ಸೀರಿಯಲ್ ಪ್ರೇಕ್ಷಕರ ಫೇವರಿಟ್‌. ಅದರಲ್ಲೂ ಸೀತಾ ಸರಳತೆ, ಸಾಂಪ್ರದಾಯಿಕ ಲುಕ್‌ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ. ರಿಯಲ್ ಲೈಫ್‌ನಲ್ಲೂ ಸೀರೆಯನ್ನು ಇಷ್ಟಪಡೋ ವೈಷ್ಣವಿ ಗೌಡ ಇನ್‌ಸ್ಟಾಗ್ರಾಂನಲ್ಲಿ ಗ್ರೀನ್‌ ಸ್ಯಾರಿಯುಟ್ಟ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀತಾರಾಮ ಸೀರಿಯಲ್ ಪ್ರೇಕ್ಷಕರ ಫೇವರಿಟ್‌. ಅದರಲ್ಲೂ ಸೀತಾ ಸರಳತೆ, ಸಾಂಪ್ರದಾಯಿಕ ಲುಕ್‌ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ. ರಿಯಲ್ ಲೈಫ್‌ನಲ್ಲೂ ಸೀರೆಯನ್ನು ಇಷ್ಟಪಡೋ ವೈಷ್ಣವಿ ಗೌಡ ಇನ್‌ಸ್ಟಾಗ್ರಾಂನಲ್ಲಿ ಗ್ರೀನ್‌ ಸ್ಯಾರಿಯುಟ್ಟ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಕಿರುತೆರೆ ನಟಿ ವೈಷ್ಣವಿ ಗೌಡ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್‌. ಆಗಾಗ ತಮ್ಮ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಗ್ರೀನ್‌ ಕಲರ್ ಸೀರೆಯುಟ್ಟು ಮುದ್ದಾಗಿ ಸ್ಮೈಲ್ ಕೊಟ್ಟು ಫೋಟೋಗೆ ಫೋಸ್ ನೀಡಿದ್ದಾರೆ.

ರೆಡ್‌ ಬಾರ್ಡರ್‌ ಇರೋ ಪ್ಯಾರೋಟ್ ಗ್ರೀನ್ ಕಲರ್, ರೆಡ್ ಕಲರ್‌ ಬ್ಲೌಸ್ ಹಾಕ್ಕೊಂಡು ಸೀರಿಯಲ್ ಸೀತಾ ಮಿಂಚಿದ್ದಾರೆ. ಜೊತೆಗೆ ಇದಕ್ಕೆ ದೊಡ್ಡ ಹರಳಿನ ನೆಕ್ಲೇಸ್ ಹಾಕ್ಕೊಂಡಿದ್ದು, ಮುದ್ದಾಗಿ ಕಾಣುತ್ತಿದ್ದಾರೆ.

ವೈಷ್ಣವಿ ಗೌಡ ಹೊಸ ಫೋಟೋಸ್‌ಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಸಹ ಮಾಡಿದ್ದಾರೆ. ಕ್ಯೂಟ್, ಗಾರ್ಜಿಯಸ್‌, ಬ್ಯೂಟಿಫುಲ್ ಎಂದೆಲ್ಲಾ ಹೊಗಳಿದ್ದಾರೆ. ಒಬ್ಬ ಅಭಿಮಾನಿ, 'ಹಸಿರು ಸೀರೆಯಲ್ಲಿ ಬೊಂಬೆ ಹುಡುಗಿ ರಾಜಕುಮಾರಿ ದೃಷ್ಟಿ ಆಗುತ್ತೆ' ಎಂದು ಕಾಮೆಂಟ್ ಮಾಡಿದ್ದಾರೆ.

ಅಭಿಮಾನಿಗಳು, ಡ್ರೀಮ್ ಕ್ವೀನ್, ಗಾರ್ಜಿಯಸ್ ಇನ್ ಗ್ರೀನ್‌ ಎಂದು ಹೊಗಳಿದ್ದಾರೆ. ಇನ್ನೊಬ್ಬ ಅಭಿಮಾನಿ, 'ರಾಮ ಹಾಸ್ಪಿಟಲ್‌ನಲ್ಲಿದ್ದಾನೆ, ನಿಮ್ದೇನು ಹೊಸ ಲುಕ್; ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲೂ ನಟಿ ವೈಷ್ಣವಿ ಗೌಡ ಸಖತ್ ಆಕ್ಟಿವ್‌. ಆಗಾಗ ತಮ್ಮ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿರುತ್ತಾರೆ. ಮಾಡರ್ನ್‌, ಟ್ರೆಡಿಶನಲ್ ಲುಕ್‌ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. 

ಮಾತ್ರವಲ್ಲ ಸೀರಿಯಲ್‌ಗಾಗಿ ಸುಂದರವಾಗಿ ರೆಡಿಯಾದಾಗಲ್ಲೆಲ್ಲಾ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಫೋಟೋಸ್ ಮಾತ್ರವಲ್ಲ, ಸೀರಿಯಲ್ ಟೀಮ್‌ ಜೊತೆ ಮಾಡಿದ ರೀಲ್ಸ್ ಸಹ ಶೇರ್ ಮಾಡಿಕೊಳ್ಳುತ್ತಾರೆ.

ಸೀರಿಯಲ್‌ ಪ್ರಿಯರಿಗೂ ವೈಷ್ಣವಿ ಅಚ್ಚುಮೆಚ್ಚು. ಅದರಲ್ಲೂ ಇತ್ತೀಚಿಗೆ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿಯಲ್ಲಿ ನಟಿಯ ಪಾತ್ರ ಹಾಗೂ ಅಭಿನಯ ಎಲ್ಲರಿಗೂ ಇಷ್ಟವಾಗಿದೆ. ಮುಗ್ದೆ ಸೀತೆಯ ಪಾತ್ರವನ್ನು ಎಲ್ಲರೂ ಕೊಂಡಾಡುತ್ತಾರೆ.

ವೈಷ್ಣವಿ ಗೌಡ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿ. ಅದಾದ ಬಳಿಕ ಬಿಗ್ ಬಾಸ್ ನಲ್ಲೂ ಕೂಡ ಸಕ್ಕತ್ತಾಗಿ ಆಟ ಆಡಿದ್ದಾರೆ.

click me!