ಬ್ಲ್ಯಾಕ್‌ ಆ್ಯಂಡ್ ವೈಟ್ ಸ್ಯಾರಿಯಲ್ಲಿ ಮಿಂಚಿದ ನಮ್ರತಾ ಗೌಡ ಸ್ನೇಹಿತ್‌ ಒಳ್ಳೆ ಹುಡ್ಗ ಎಂದ ಫ್ಯಾನ್ಸ್‌!

First Published Feb 28, 2024, 10:13 AM IST

ಕಿರುತೆರೆ ನಟಿ ನಮ್ರತಾ ಗೌಡ, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಬ್ಲ್ಯಾಕ್ ಆಂಡ್ ವೈಟ್‌ ಸೀರೆಯುಟ್ಟ ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ. ಸ್ನೇಹಿತ್, ಕಾರ್ತಿಕ್ ಹೆಸರು ಹೇಳಿ ಕಾಲೆಳೆಯುತ್ತಿದ್ದಾರೆ.

ಕಿರುತೆರೆ ನಟಿ ನಮ್ರತಾ ಗೌಡ, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಬ್ಲ್ಯಾಕ್ ಆಂಡ್ ವೈಟ್‌ ಸೀರೆಯುಟ್ಟ ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.

ಬ್ಲ್ಯಾಕ್‌ನಲ್ಲಿ ವೈಟ್ ಪೋಲ್ಕಾ ಡಾಟ್ ಇರುವ ಬ್ಲೌಸ್ ಹಾಗೂ ಕಂಪ್ಲೀಟ್ ವೈಟ್ ಕಲರ್ ಸೀರೆಯುಟ್ಟು ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ. ಇದಕ್ಕೆ ಒಪ್ಪುವಂತೆ ಆಕ್ಸಿಡೈಸ್ಡ್‌ ಚೋಕರ್ ಸೆಟ್ ಸಹ ಧರಿಸಿದ್ದಾರೆ. 

ನಮ್ರತಾ, ಇನ್‌ಸ್ಟಾಗ್ರಾಂನಲ್ಲಿ ಮಾಡರ್ನ್‌, ಟ್ರೆಡಿಶನಲ್ ಲುಕ್‌ನಲ್ಲಿ ತಮ್ಮ ಸ್ಟೈಲಿಶ್ ಪೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಹಾಗೆಯೇ ಇತ್ತೀಚಿಗೆ ಶೇರ್ ಮಾಡಿರೋ ಬ್ಲ್ಯಾಕ್ ಆಂಡ್ ವೈಟ್‌ ಸ್ಯಾರಿ ಫೋಟೋಸ್‌ಗೆ ನೆಟ್ಟಿಗರು ವಾವ್ ಅಂದಿದ್ದಾರೆ.

ಬ್ಯೂಟಿಫುಲ್‌, ಕ್ಯೂಟ್ ಎಂದೆಲ್ಲಾ ಹೊಗಳಿದ್ದಾರೆ. ಮತ್ತೆ ಕೆಲವರು, 'ಸ್ನೇಹಿತ್ ಒಳ್ಳೆ ಹುಡುಗ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಕಾರ್ತಿಕ್ ನೀವು ಫಿಲ್ಮ್ ಮಾಡಿ ಮೇಡಂ' ಎಂದಿದ್ದಾರೆ. ಇನ್ನೊಬ್ಬರು, 'ವೈಟಿಂಗ್ ಫಾರ್ ಕಾರ್ತಿಕ್ ಅಂಡ್ ನಿಮ್ಮ ರೀಲ್ಸ್‌' ಎಂದು ತಿಳಿಸಿದ್ದಾರೆ. 

ಮತ್ತೊಬ್ಬರು, 'ಸ್ವಾಭಿಮಾನಿ ನಮ್ರತಾ ಮತ್ತು ಸ್ನೇಹಜೀವಿ ಸ್ನೇಹಿತ್' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಸ್ನೇಹಕ್ಕೆ ಉದಾಹರಣೆ ಸ್ನೇಹಿತ್‌, ಅಂದಕ್ಕೆ ಉದಾಹರಣೆ. ಸಂಗೀತ' ಎಂದು ಹೇಳಿದ್ದಾರೆ.

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ. ಇದೀಗ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾದ ಬಳಿಕ ಬಿಗ್ ಬಾಸ್ ನಮ್ಮು ಎಂದೇ ಫೇಮಸ್ ಆಗಿದ್ದಾರೆ. ಹಲವಾರು ಅಭಿಮಾನಿಗಳನ್ನು ಗಳಿಸಿದ್ದಾರೆ.

ನಮ್ರತಾ ಗೌಡ 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ನಮ್ರತಾ ಗೌಡ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ 'ಪುಟ್ಟ ಗೌರಿ' ಮದುವೆ ಧಾರಾವಾಹಿಯಲ್ಲಿ ಹಿಮ ಪಾತ್ರದಲ್ಲಿ ಮಿಂಚಿದ್ದರು. 

Namrutha Gowda

ಕನ್ನಡ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ, ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ. ತಮ್ಮ ಉತ್ತಮ ನಟನೆಯಿಂದ ಮನೆ ಮಾತಾಗಿದ್ದರು. 

ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಕಿರುತೆರೆ, ಯೂಟ್ಯೂಬ್​ ಚಾನೆಲ್​ನಲ್ಲಿ ಸದ್ದು ಮಾಡ್ತಿದ್ದ ನಮ್ರತಾ ಗೌಡ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.

click me!