ರೇಷ್ಮೆ ಸೀರೆಯುಟ್ಟು ಮಲ್ಲಿಗೆ ಮುಡಿದ ತನಿಷಾ ಕುಪ್ಪಂಡ, ದೇವಲೋಕದ ಅಪ್ಸರೆ ನೀನೆಂದು ಹೊಗಳಿದ ಫ್ಯಾನ್ಸ್‌

Published : Apr 24, 2024, 05:24 PM IST

ಕನ್ನಡ ಕಿರುತೆರೆ ನಟಿ ತನಿಷಾ ಕುಪ್ಪಂಡ ಬಿಗ್ ಬಾಸ್ ಸೀಸನ್ 10ಕ್ಕೆ ಹೋಗಿ ಬಂದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ  ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡುತ್ತಾರೆ. ಇತ್ತೀಚಿಗೆ ರೇಷ್ಮೆ ಸೀರೆಯುಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದ್ದಾರೆ.

PREV
19
ರೇಷ್ಮೆ ಸೀರೆಯುಟ್ಟು ಮಲ್ಲಿಗೆ ಮುಡಿದ ತನಿಷಾ ಕುಪ್ಪಂಡ, ದೇವಲೋಕದ ಅಪ್ಸರೆ ನೀನೆಂದು ಹೊಗಳಿದ ಫ್ಯಾನ್ಸ್‌

ಕನ್ನಡ ಕಿರುತೆರೆ ನಟಿ ತನಿಷಾ ಕುಪ್ಪಂಡ ಬಿಗ್ ಬಾಸ್ ಸೀಸನ್ 10ಕ್ಕೆ ಹೋಗಿ ಬಂದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ  ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡುತ್ತಾರೆ. ಇತ್ತೀಚಿಗೆ ರೇಷ್ಮೆ ಸೀರೆಯುಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದ್ದಾರೆ.

29
Tanisha kuppanada

ಕೆಂಪು ಬಣ್ಣದ ರೇಷ್ಮೆ ಸೀರೆಗೆ ತನಿಷಾ, ಹಸಿರು ಬಣ್ಣದ ಬ್ಲೌಸ್ ತೊಟ್ಟಿದ್ದು ಮುಡಿ ತುಂಬಾ ಮಲ್ಲಿಗೆ ಮುಡಿದಿದ್ದಾರೆ. ಮಾತ್ರವಲ್ಲ ಸಾಂಪ್ರದಾಯಿಕ ಆಭರಣಗಳನ್ನು ಧರಿಸಿ ಸುಂದರವಾಗಿ ಕಾಣಿಸುತ್ತಿದ್ದಾರೆ.

39

ತನಿಷಾ ಟ್ರೆಡಿಶನಲ್‌ ಲುಕ್‌ಗೆ ನೆಟ್ಟಿಗರು ಲೈಕ್ಸ್‌, ಹಾರ್ಟ್‌ ಎಮೋಜಿ ಸೆಂಡ್ ಮಾಡಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಕಳೆದು ಹೋಗಬೇಕು ನಾ, ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತಾ' ಎಂದಿದ್ದಾರೆ.

49

ಇನ್ನೊಬ್ಬ ಅಭಿಮಾನಿ, 'ದೇವಲೋಕದಿಂದ ಬಂದ ಅಪ್ಸರೆಯೇ ನೀನು.
ನಂಬಲಾಗುತ್ತಿಲ್ಲ ಇದು ನೀನೇನಾ ಎಂದು' ಎಂದು ಹೊಗಳಿದ್ದಾರೆ. ಇನ್ನು ಕೆಲ ಅಭಿಮಾನಿಗಳು, ಬೆಂಕಿ, ಸೂಪರ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

59

ತನಿಷಾ ಕುಪ್ಪಂಡ ಸೀರಿಯಲ್‌ಗಳಲ್ಲಿ ನಟಿಸಿ ಫೇಮಸ್ ಆಗಿದ್ದರು. ಬಿಗ್ ಬಾಸ್ ಗೂ ಮುಂಚೆ ಹೆಚ್ಚಿನ ಜನಕ್ಕೆ ಪರಿಚಿತರಾಗಿಲ್ಲದ ತನಿಷಾ, ಬಿಗ್ ಬಾಸ್ ಮೂಲಕ ರಾಜ್ಯದ ಜನರಿಗೆ ಹೆಚ್ಚು ಪರಿಚಿತರಾದರು.

69

ತನಿಷಾ ಅವರಿಗಾಗಿ ಬೆಂಕಿ ಬಂತು ಬೆಂಕಿ ಎನ್ನುವ ಹಾಡನ್ನು ಸಹ ಬಿಡುಗಡೆ ಮಾಡಲಾಗಿತ್ತು. ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿದ್ದರು ತನಿಷಾ.

79

ಇತ್ತಿಚಿಗೆ ತನಿಷಾ ತಮ್ಮದೇ ಆದ ಜ್ಯುವೆಲ್ಲರಿ ಶಾಪ್‌ನ್ನು ಸಹ ಓಪನ್ ಮಾಡಿದ್ದಾರೆ. ಅದಕ್ಕೆ ಬಿಗ್‌ಬಾಸ್‌ನ ಎಲ್ಲಾ ಸ್ಪರ್ಧಿಗಳನ್ನು ಸಹ ಆಹ್ವಾನಿಸಿದ್ದಾರೆ.

89

ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ತನಿಷಾ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ತನಿಷಾ ಜನರ ಜೊತೆ ಮತ್ತಷ್ಟು ಕನೆಕ್ಟ್ ಆಗಲು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

99

ನಟಿ ತನಿಷಾ ಕುಪ್ಪಂಡ ಆರ್‌ಆರ್‌ ನಗರದಲ್ಲಿ ನಾನ್‌ವೆಜ್ ಹೊಟೆಲ್‌ ನಡೆಸ್ತಾ ಇದಾರೆ. ಅವರು ತಮ್ಮ ಮೇಕಪ್‌ಗಾಗಿಯೇ ದಿನಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾನೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

Read more Photos on
click me!

Recommended Stories