ಸೋಶಿಯಲ್ ನೇಷನ್ ಫ್ಯಾಷನ್ ಶೋದಲ್ಲಿ ಹಲ್ ಚಲ್ ಸೃಷ್ಟಿಸಿದ ಉರ್ಫಿ ಲುಕ್‌ಗೆ ಫ್ಯಾನ್ಸ್ ಫಿದಾ

First Published | Apr 23, 2024, 3:30 PM IST

ಸದಾ ಚಿತ್ರ ವಿಚಿತ್ರ ಡ್ರೆಸ್‌ಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುದ ನಟಿ ಉರ್ಫಿ ಜಾವೇದ್ ಇತ್ತೀಚೆಗೆ ಫ್ಯಾಷನ್‌ ಶೋವೊಂದರಲ್ಲಿ ಭಾಗವಹಿಸುವ ಮೂಲಕ ಎಲ್ಲರ ಹೃದಯ ಕದ್ದಿದ್ದಾರೆ.
 

ಸದಾ ಚಿತ್ರ ವಿಚಿತ್ರ ಡ್ರೆಸ್‌ಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುದ ನಟಿ ಉರ್ಫಿ ಜಾವೇದ್ ಇತ್ತೀಚೆಗೆ ಫ್ಯಾಷನ್‌ ಶೋವೊಂದರಲ್ಲಿ ಭಾಗವಹಿಸುವ ಮೂಲಕ ಎಲ್ಲರ ಹೃದಯ ಕದ್ದಿದ್ದಾರೆ.

ಸೋಶಿಯಲ್ ನೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್ ಮೇಲೆ ಸೈಡ್ ಒಪನ್ ಇರುವ ಲಾಂಗ್ ಗವನ್ ಧರಿಸಿ ಉರ್ಫಿ ಹೆಜ್ಜೆ ಹಾಕಿದ್ದು, ಉರ್ಫಿಯ ಈ ಧಿರಿಸು ಎಲ್ಲರ ಗಮನ ಸೆಳೆದಿದೆ. 

Tap to resize

ಥಾಯ್ ಹೈ ಸ್ಲಿಟ್ ಇದ್ದಂತಹ ಈ ಧಿರಿಸಿನ ಜೊತೆ ಹೈ ಹೀಲ್ ಧರಿಸಿ ಉರ್ಫಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಇಟ್ಟಿದ್ದು, ಸದಾ ಚಿತ್ರ ವಿಚಿತ್ರ ಬಟ್ಟೆಗಳಲ್ಲಿ ಆಕೆಯನ್ನು ನೋಡುತ್ತಿದ್ದ ಅಭಿಮಾನಿಗಳು ಈ ಧಿರಿಸಿಗೆ ಫಿದಾ ಆಗಿದ್ದಾರೆ. 

ಗ್ಲೌಸಿ ಮೇಕಪ್ ಮಾಡಿದ್ದ ಉರ್ಫಿ ತಮ್ಮ ಕೂದಲನ್ನು ಕೂಡ ಈ ಶೋಗಾಗಿ ಬಹಳ ಸುಂದರವಾಗಿ ಸೆಟ್ ಮಾಡಿದ್ದರು.  ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಉರ್ಫಿ ತಮ್ಮ ವಿಚಿತ್ರ ಧಿರಿಸಿನಿಂದಲೇ ಸಖತ್ ಫೇಮಸ್ ಆಗಿದ್ದಾರೆ.

ಬಿಗ್‌ಬಾಸ್ ಹಿಂದಿ ಓಟಿಟಿಯಲ್ಲಿ ಭಾಗವಹಿಸುವ ಮೂಲಕ ಪ್ರಸಿದ್ಧಿ ಪಡೆದ ಉರ್ಫಿ ಸ್ಟೈಲ್ ಸ್ಟಂಟ್ ಸದಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾನೆ ಇರುತ್ತದೆ. 

ಸೋಶಿಯಲ್ ನೇಷನ್ ಆಯೋಜಿಸಿದ್ದ ಈ ಫ್ಯಾಷನ್ ಶೋಗೆ ನಟ ಸಲ್ಮಾನ್ ಖಾನ್ ಕೂಡ ಭಾರಿ ಭದ್ರತೆಯೊಂದಿಗೆ ಆಗಮಿಸಿದ್ದರು. ಇದರ ಜೊತೆಗೆ ಹಿಂದಿ ಬಿಗ್‌ಬಾಸ್ ವಿನ್ನರ್ ಮುನಾವರ್ ಫಾರುಕಿ, ಪ್ರಜಕ್ತ ಕೊಹ್ಲಿ, ಅನನ್ಯಾ ಪಾಂಡೆ, ಸನ್ಯಾ ಮಲ್ಹೋತ್ರಾ ಮುಂತಾದವರು ಭಾಗವಹಿಸಿದ್ದರು. 

ಇತ್ತ ಉರ್ಫಿಯನ್ನ ಈ ಕೆಂಪು ಬಣ್ಣದ ಸುಂದರ ಡ್ರೆಸ್‌ನಲ್ಲಿ ನೋಡಿದ ಅನೇಕ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಇಷ್ಟು ದಿವಸಗಳಲ್ಲಿ ಉರ್ಫಿ ಧರಿಸಿದ್ದ ಡ್ರೆಸ್‌ಗಳಲ್ಲಿ ತುಂಬಾ ಇಷ್ಟವಾದ ಡ್ರೆಸ್ ಇದು ಎಂದು ನೋಡುಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮೊದಲ ಬಾರಿ ಆಕೆ ಸುಂದರವಾಗಿದ್ದಾಳೆ ಎನಿಸಿತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

Latest Videos

click me!