ಸೀರಿಯಲ್‌ ಬಿಟ್ಟು ರೈತ ಮಹಿಳೆಯಾದ್ರಾ ಕನ್ನಡತಿ ರಂಜನಿ ರಾಘವನ್‌, ಅಭಿಮಾನಿಗಳಿಗೆ ಫುಲ್‌ ಕನ್‌ಫ್ಯೂಶನ್‌!

Published : Jan 16, 2024, 11:39 AM ISTUpdated : Jan 16, 2024, 12:05 PM IST

ಪುಟ್ಟಗೌರಿ ಮದುವೆ, ಕನ್ನಡತಿ ಸೀರಿಯಲ್‌ನಿಂದ ಫೇಮಸ್ ಆದ ನಟಿ ರಂಜಿನಿ ರಾಘವನ್‌. ಆದ್ರೆ ಹಳ್ಳಿ ಹುಡುಗಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಯಾನ್ಸ್‌, ಕನ್ನಡತಿಯ ಭುವಿ ಸೀರಿಯಲ್‌ನ್ನು ಬಿಟ್ಟು ರೈತ ಮಹಿಳೆಯಾದ್ರಾ ಕನ್‌ಫ್ಯೂಸ್ ಆಗಿದ್ದಾರೆ.

PREV
19
ಸೀರಿಯಲ್‌ ಬಿಟ್ಟು ರೈತ ಮಹಿಳೆಯಾದ್ರಾ ಕನ್ನಡತಿ ರಂಜನಿ ರಾಘವನ್‌, ಅಭಿಮಾನಿಗಳಿಗೆ ಫುಲ್‌ ಕನ್‌ಫ್ಯೂಶನ್‌!

ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್‌ ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರ್ತಾರೆ. ತಮ್ಮ ಸೀರಿಯಲ್, ಸಿನಿ ಜೀವನದ ಅಪ್‌ಡೇಟ್‌ಗಳನ್ನು ಮಾಡುತ್ತಿರುತ್ತಾರೆ.

29

ಹಾಗೆಯೇ ತಮ್ಮ ಅಭಿಮಾನಿಗಳಿಗೆ ಪ್ರತಿ ಹಬ್ಬಕ್ಕೆ ಶುಭಾಶಯಗಳನ್ನು ತಿಳಿಸೋದನ್ನು ಮರೆಯೋದಿಲ್ಲ. ಹಾಗೆಯೇ ಸದ್ಯ ನಟಿ ರೈತ ಮಹಿಳೆಯ ಲುಕ್‌ನಲ್ಲಿ ತಮ್ಮ ಫ್ಯಾನ್ಸ್‌ಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

39

ಸೂರ್ಯ ಬೆಳೆ ತಣಿಸಿ, ಬೆಳೆಗಳು ರಾರಾಜಿಸಿ, ಕೃಷಿಕರ ಸಂತೋಷದ ಕೂಗು ಎಲ್ಲೆಲ್ಲೂ ಪಸರಿಸಲಿ. ಸಂಕ್ರಾಂತಿ ನಮ್ಮ ಆತ್ಮಗಳನ್ನು ಬಂಗಾರದ ಫಸಲಿನಿಂದ ಭರಿಸಲಿ. ಶ್ರಮ, ಸೂರ್ಯ ಹಾಗೂ ಹೇಳದ ಕಥೆಗಳ ಸಮ್ಮಿಳನ ನಮ್ಮೀ ಸಂಕ್ರಾಂತಿ. ನನ್ ಈ ಲುಕ್ ಎಲ್ಲಾ ರೈತ ಮಕ್ಕಳಿಗೆ ಅರ್ಪಣೆ. ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.

49

ರಂಜನಿ ರಾಘವನ್‌ ಹಳ್ಳಿ ಲುಕ್‌ಗೆ ಅಭಿಮಾನಿಗಳು ಸಹ ಫಿದಾ ಆಗಿದ್ದಾರೆ. 'ನಿಮ್ಮ ಈ ವಿಶಿಷ್ಟ ಮತ್ತು ವಿಭಿನ್ನ ರೀತಿಯ ಪ್ರಯತ್ನ ನಮಗೇ ಖುಷಿ..ನಿಮ್ಮ ಎಲ್ಲಾ ಹೊಸ ಯೋಜನೆಗೆ ಶುಭವಾಗಲಿ' ಎಂದು ಶುಭ ಹಾರೈಸಿದ್ದಾರೆ.

59

ಪಕ್ಕಾ ಹಳ್ಳಿ ಹುಡುಗಿ, ಸೋ ಬ್ಯೂಟಿಫುಲ್‌, ರಿಯಲ್ ವಂಡರ್ ವುಮೆನ್‌, ಜಸ್ಟ್ ಲುಕ್ಕಿಂಗ್ ಲೈಕ್ ಎ ವ್ಹಾವ್‌ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಸೊಂಟದ ವಿಷ್ಯ ಬೇಡವೋ ಶಿಷ್ಯ ಎಂದು ಹೇಳಿದ್ದಾರೆ.

69

ಕನ್ನಡತಿಯ ಭುವಿಯಾಗಿ ಜನಮನ ಗೆದ್ದಿದ್ದ ನಟಿ ರಂಜನಿ ರಾಘವನ್, ಸದ್ಯ ನಟನೆಯಿದ್ದ ಕೊಂಚ ದೂರವೇ ಉಳಿದಿದ್ದು, ಟ್ರಾವೆಲ್ ಮಾಡುತ್ತಾ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಅಲ್ಲೆ ಬ್ಯುಸಿಯಾಗಿಬಿಟ್ಟಿದ್ದಾರೆ. 

79

ರಂಜಿನಿ ರಾಘವನ್ ಕನ್ನಡತಿ ಸೀರಿಯಲ್ ನಂತರ ಟಕ್ಕರ್, ಕ್ಷಮಿಸಿ ನನ್ನ ಖಾತೆಯಲ್ಲಿ ಹಣವಿಲ್ಲ ಸಿನಿಮಾಗಳಲ್ಲಿ ನಟಿಸಿದ್ದರು. ಅಲ್ಲದೇ ಸತ್ಯಂ, ನೈಟ್ ಕರ್ಫ್ಯೂ, ಜೊತೆಗೆ ನಟ ಆದಿತ್ಯನ ಜೊತೆ ಹೊಸ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ. 

89

ಇದಕ್ಕೂ ಮೊದಲು ಪುಟ್ಟ ಗೌರಿ ಮದುವೆಯಲ್ಲಿ ರಂಜಿನಿ ನಟಿಸಿದ್ದು, ಈ ಪಾತ್ರದ ಮೂಲಕ ಕರ್ನಾಟಕದಲ್ಲಿ ಹೆಚ್ಚು ಫೇಮಸ್ ಆಗಿದ್ದಾರೆ.

99

ರಂಜಿನಿ ರಾಘವನ್‌ ಕೇವಲ ನಟಿಯಾಗಿ ಮಾತ್ರವಲ್ಲದೆ ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅವರ ಕತೆ ಡಬ್ಬಿ, ಸ್ವೈಪ್‌ ರೈಟ್‌ ಪುಸ್ತಕಗಳು ಈಗಾಗಲೇ ಬಿಡುಗಡೆಯಾಗಿವೆ.

Read more Photos on
click me!

Recommended Stories