ಬ್ಲ್ಯಾಕ್ ಸೀರೆಯಲ್ಲಿ ಮಿಂಚಿದ ನಮ್ರತಾ ಗೌಡ, ಬಿಗ್‌ಬಾಸ್ ಕ್ವೀನ್ ಎಂದು ಹೊಗಳಿದ ಫ್ಯಾನ್ಸ್

First Published Apr 16, 2024, 4:29 PM IST

ಕಿರುತೆರೆ ನಟಿ ನಮ್ರತಾ ಗೌಡ, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಬ್ಲ್ಯಾಕ್‌ ಸೀರೆಯುಟ್ಟು ಮುದ್ದಾಗಿ ನಗೆ ಬೀರಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
 

ಕಿರುತೆರೆ ನಟಿ ನಮ್ರತಾ ಗೌಡ, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಬ್ಲ್ಯಾಕ್‌ ಸೀರೆಯುಟ್ಟು ಮುದ್ದಾಗಿ ನಗೆ ಬೀರಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
 

ಬ್ಲ್ಯಾಕ್ ನೆಟ್ಟೆಡ್ ಬ್ಲೌಸ್ ಹಾಗೂ ಪ್ರೈನ್ ಕಪ್ಪು ಸೀರೆಯನ್ನು ನಮ್ರತಾ ಗೌಡ ಧರಿಸಿದ್ದಾರೆ. ನಮ್ರತಾ ಗೌಡ ಸ್ಯಾರಿ ಲುಕ್‌ಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಲೈಕ್ಸ್, ಹಾರ್ಟ್‌ ಎಮೋಜಿ ಸೆಂಡ್ ಮಾಡಿದ್ದಾರೆ. 

ಬ್ಯೂಟಿಫುಲ್‌, ಕ್ಯೂಟ್ ಎಂದೆಲ್ಲಾ ಹೊಗಳಿದ್ದಾರೆ. ಗಾರ್ಜಿಯಸ್, ಬಿಗ್‌ಬಾಸ್ ಕ್ವೀನ್‌, ಬ್ಯೂಟಿಫುಲ್ ಎಂದೆಲ್ಲಾ ಹೊಗಳಿದ್ದಾರೆ. ಮತ್ತೆ ಕೆಲವರು ಬ್ರ್ಯಾಂಡ್ ಅಂಬಾಸಿಡರ್ ಆಫ್ ಚಮ್ಚಾ ಎಂದು ಕಾಲೆಳೆದಿದ್ದಾರೆ.

ನಮ್ರತಾ ಗೌಡ 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ನಮ್ರತಾ ಗೌಡ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ 'ಪುಟ್ಟ ಗೌರಿ' ಮದುವೆ ಧಾರಾವಾಹಿಯಲ್ಲಿ ಹಿಮ ಪಾತ್ರದಲ್ಲಿ ಮಿಂಚಿದ್ದರು. 

ಕನ್ನಡ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ, ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ. ತಮ್ಮ ಉತ್ತಮ ನಟನೆಯಿಂದ ಮನೆ ಮಾತಾಗಿದ್ದರು. 

ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಕಿರುತೆರೆ, ಯೂಟ್ಯೂಬ್​ ಚಾನೆಲ್​ನಲ್ಲಿ ಸದ್ದು ಮಾಡ್ತಿದ್ದ ನಮ್ರತಾ ಗೌಡ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ನಾಗಿಣಿ 2, ಬಿಗ್ ಬಾಸ್ ಸೀಸನ್ 10 ಶೋ ಮೂಲಕ ಗಮನ ಸೆಳೆದ ನಮ್ರತಾ ಗೌಡ ಇತ್ತೀಚಿಗಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ದುಬಾರಿ ಕಾರು ಖರೀದಿಸುವ ಮೂಲಕ ನಟಿ ಸಂಭ್ರಮಿಸಿದ್ದಾರೆ.‌ 

click me!