ಬಿಗ್‌ಬಾಸ್ ಖ್ಯಾತಿಯ ದೀಪಿಕಾ ದಾಸ್ ಇತ್ತೀಚಿಗಷ್ಟೇ ಮದ್ವೆಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮದ್ವೆಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ ಇತ್ತೀಚಿಗೆ ಗ್ರೀನ್ ಕಲರ್‌ನ ಮಾಡರ್ನ್ ಡ್ರೆಸ್‌ನಲ್ಲಿ ಬೋಲ್ಡ್ ಪೋಟೋಸ್ ಶೇರ್ ಮಾಡಿದ್ದಾರೆ.
ಬಿಗ್ ಬಾಸ್ ಸ್ಫರ್ಧಿ, ನಟಿ ದೀಪಿಕಾ ದಾಸ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು, ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸೀರೆ ಹಾಗೂ ಮಾಡರ್ನ್ ಲುಕ್‌ನಲ್ಲಿ ಫೋಟೋಸ್ ಪೋಸ್ಟ್ ಮಾಡುತ್ತಾರೆ. ಇತ್ತೀಚಿಗೆ ಗ್ರೀನ್ ಕಲರ್ ಹೈ ಸ್ಲಿಟ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡ್ಕೊಂಡಿದ್ದಾರೆ.
ತೊಡೆ ಕಾಣಿಸೋ ಗ್ರೀನ್ ಡ್ರೆಸ್‌ಗೆ ಪಕ್ಕದಲ್ಲಿ ಹಕ್ಕಿಯ ಗರಿಯಂತೆ ಡಿಸೈನ್ ಮಾಡಲಾಗಿದೆ. ದೀಪಿಕಾ ಡಿಫರೆಂಟ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ವ್ಹಾವ್, ಸೂಪರ್, ಪ್ರೆಟ್ಟೀ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಮತ್ತೆ ಕೆಲವರು, 'ಹಾವು ಹೋಗಿ ಚಿಟ್ಟೆ ಆಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಸೂಪರ್, ಬಟ್ ಈಗ ನಾಗಪರಿ' ಎಂದಿದ್ದಾರೆ. ಇನ್ನು ಕೆಲವು ಅಭಿಮಾನಿಗಳು, ದೇವತೆ, ನಿಮ್ಮ ನಾಗಿಣಿ ಸೀರಿಯಲ್‌ನ್ನು ತಪ್ಪದೇ ನೋಡಿದ್ದೇವೆ ಎಂದೆಲ್ಲಾ ಹೊಗಳಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ದೀಪಿಕಾ ದಾಸ್ ಫೇಮಸ್ ಆಗಿದ್ದಾರೆ. ಇದೀಗ ದೀಪಿಕಾ ಲೇಟೆಸ್ಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
ಆಗಾಗ ವಿದೇಶಿ ಪ್ರವಾಸಗಳ ಫೋಟೋಗಳನ್ನು ಹಂಚಿಕೊಳ್ಳುವ ದೀಪಿಕಾ ದಾಸ್, ಇದೀಗ ಪರ್ಪಲ್ ಲೆಹಂಗಾ ತೊಟ್ಟು ಟ್ರೆಡಿಷನಲ್ ಲುಕ್‌ನಲ್ಲಿ ಕ್ಯಾಮೆರಾಗೆ ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದಾರೆ.
ನಟಿ ದೀಪಿಕಾ ದಾಸ್ ಇತ್ತೀಚಿಗಷ್ಟೇ ಸೀಕ್ರೆಟ್ ಆಗಿ ಮದುವೆಯಾಗಿದ್ದರು. ಕಡಲ ತೀರದಲ್ಲಿ ದುಬೈನ ಉದ್ಯಮಿ ದೀಪಕ್ ಜೊತೆ ಹಸೆಮಣೆ ಏರಿದ್ದರು. ಇವರಿಬ್ಬರದ್ದು ಲವ್ ಮ್ಯಾರೇಜ್ ಅಂತಲೂ ಹೇಳಲಾಗ್ತಿದೆ. ಯಾಕಂದ್ರೆ ದೀಪಿಕಾ ದಾಸ್ ಆಗಾಗ ದುಬೈಗೆ ಹಾರುತ್ತಿದ್ರು. ಅಲ್ಲಿನ ಫೋಟೋಗಳನ್ನೂ ಹಂಚಿಕೊಳ್ಳುತ್ತಿದ್ರು. ಹೀಗಾಗಿ ಇಬ್ಬರ ಮಧ್ಯೆ ಪ್ರೀತಿ ಬೆಳೆದು ಈಗ ಹಸೆಮಣೆ ಏರಿ ಕರಿಮಣಿ ಕಟ್ಟಿ ಸಂಸಾರ ಶುರು ಮಾಡಿದ್ದಾರೆ ಎನ್ನಲಾಗ್ತಿದೆ.
ನಟಿ ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 07 ಮತ್ತು 09ರಲ್ಲಿ ಮಿಂಚಿದ್ರು. 2 ಸೀಸಸ್‍ನಲ್ಲೂ ಟಾಪ್ 5ರ ತನಕ ಬಂದಿದ್ರು. ತಮ್ಮ ಆಟ, ನೋಟಗಳ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ. ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ದೀಪಿಕಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಹಲವು ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅಭಿಮಾನಿಗಳು ಸಹ ಅವನ್ನು ಮೆಚ್ಚಿಕೊಳ್ತಾರೆ. ದೀಪಿಕಾ ದಾಸ್ 1.4 ಮಿಲಿಯನ್ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ. ಇಲ್ಲಿಯವರೆಗೆ 2,306 ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ.