ಸೀರೆಯುಟ್ಟು, ಆಭರಣ ತೊಟ್ಟು ಮಿಂಚಿದ ನಟಿ ಪ್ರಣೀತಾ, ಸನಾತನದ ಧರ್ಮದ ಪ್ರತೀಕ ಎಂದು ಹೊಗಳಿದ ಫ್ಯಾನ್ಸ್‌

Published : Apr 03, 2024, 01:09 PM ISTUpdated : Apr 03, 2024, 01:29 PM IST

ನಟಿ ಪ್ರಣೀತಾ ಸುಭಾಷ್‌, ಸೋಷಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ತಮ್ಮ ಟ್ರೆಡಿಶನಲ್‌ ಮತ್ತು ಮಾಡರ್ನ್‌ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಹಾಗೆಯೇ ಇತ್ತೀಚಿಗೆ ಗ್ರ್ಯಾಂಡ್ ರೇಷ್ಮೆ ಸೀರೆಯುಟ್ಟು, ಆಭರಣಗಳನ್ನು ತೊಟ್ಟು ಸಖತ್ತಾಗಿ ಮಿಂಚಿದ್ದಾರೆ. ಫ್ಯಾನ್ಸ್ ಈ ಲುಕ್ ನೋಡಿ ವಾವ್ಹ್ ಎಂದಿದ್ದಾರೆ.

PREV
18
ಸೀರೆಯುಟ್ಟು, ಆಭರಣ ತೊಟ್ಟು ಮಿಂಚಿದ ನಟಿ ಪ್ರಣೀತಾ, ಸನಾತನದ ಧರ್ಮದ ಪ್ರತೀಕ ಎಂದು ಹೊಗಳಿದ ಫ್ಯಾನ್ಸ್‌

ಕನ್ನಡವೂ ಸೇರಿದಂತೆ ಹಲವು ಸೌತ್ ಇಂಡಿಯನ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ನಟಿ ಪ್ರಣೀತಾ ಸುಭಾಷ್. ಒಂದು ಮಗುವಿನ ತಾಯಿಯಾಗಿದ್ರೂ ಇನ್ನೂ ಇಪ್ಪತ್ತರ ತರುಣಿಯಂತೆ ಸುಂದರವಾಗಿ ಮಿಂಚ್ತಿರೋ ನಟಿ. ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ.

28

ಪ್ರಣೀತಾ ಸುಭಾಷ್‌, ಸೋಷಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ತಮ್ಮ ಟ್ರೆಡಿಶನಲ್‌ ಮತ್ತು ಮಾಡರ್ನ್‌ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಹಾಗೆಯೇ ಇತ್ತೀಚಿಗೆ ಗ್ರ್ಯಾಂಡ್ ರೇಷ್ಮೆ ಸೀರೆಯುಟ್ಟು, ಆಭರಣಗಳನ್ನು ತೊಟ್ಟು ಸಖತ್ತಾಗಿ ಮಿಂಚಿದ್ದಾರೆ.

38

ಡಾರ್ಕ್‌ ಗ್ರೀನ್ ಸೀರೆ ಹಾಗೂ ರೆಡ್‌ ಕಲರ್ ಬ್ಲೌಸ್ ತೊಟ್ಟ ಪ್ರಣೀತಾ, ಇದಕ್ಕೆ ಟೆಂಪಲ್‌ ನೆಕ್ಲೇಸ್ ಜ್ಯುವೆಲ್ಲರಿಯನ್ನು ಪೇರ್ ಮಾಡಿದ್ದಾರೆ. ರೇಷ್ಮೆ ಲಂಗ-ರವಿಕೆ ತೊಟ್ಟ ಮಗಳ ಜೊತೆ ಫೋಟೋಗೆ ಫೋಸ್ ನೀಡಿದ್ದಾರೆ.

48

ನಟಿ ಪ್ರಣೀತಾ ಒಂದು ಕಾಲದಲ್ಲಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂಬ ಬೇಧವಿಲ್ಲದೇ ಎಲ್ಲಾ ಕಡೆ ಸಲ್ಲುವ ನಟಿ ಎನಿಸಿಕೊಂಡಿದ್ದರು. ತಾವು ಎಣಿಸಿದಂತೆ ಬಾಲಿವುಡ್‌ನಲ್ಲಿ ತಮಗೆ ಹೆಚ್ಚಿನ ಅವಕಾಶ ಅರಸಿ ಬಾರದಿರಲು ನಟಿ ಪ್ರಣೀತಾ ಸೌತ್ ಇಂಡಸ್ಟ್ರಿ ಕಡೆ ಮುಖ ಮಾಡಿ ಇಲ್ಲಿ ಹಲವು ಅವಕಾಶ ಗಿಟ್ಟಸಿಕೊಂಡರು.

58

ಆದರೆ ಅವರಿಗೆ ಅವಕಾಶಗಳ ಕೊರತೆ ಎದುರಾದಾಗ ಧೈರ್ಯಗೆಡದೇ ಬಿಸಿನೆಸ್‌ ಕಡೆ ಕೂಡ ಮುಖ ಮಾಡಿದ್ದರು. ಕಳೆದ ವರ್ಷ ಮದುವೆಯಾಗಿ ಇದೀಗ ಒಂದು ಮಗುವಿಗೆ ತಾಯಿಯೂ ಆಗಿರುವ ಪ್ರಣೀತಾ ಈಗ ಸಾಂಸಾರಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಸಖತ್ ಮಿಂಚುತ್ತಲೇ ಇರುತ್ತಾರೆ.

68

ಅಂದಹಾಗೆ, ನಟಿ ಪ್ರಣೀತಾ ಕನ್ನಡದಲ್ಲಿ ಸ್ನೇಹಿತರು, ಭೀಮಾ ತೀರದಲ್ಲಿ ಹಾಗೂ ಮಿಸ್ಟರ್ 420 ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬು ಹಾಗೂ ಕನ್ನಡದಲ್ಲಿ ದರ್ಶನ್ ಅವರಂಥ ಘಟಾನುಘಟಿ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. 

78

ಇತ್ತೀಚೆಗೆ ಮಗುವಿನ ತಾಯಿಯೂ ಆಗಿರುವ ಪ್ರಣೀತಾ, ಅಮ್ಮನಾಗಿದ್ದರೂ ತಮ್ಮ ಫಿಟ್‌ನೆಸ್ ಕಾಪಾಡಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಮಗುವಿನ ಫೋಟೋವನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

88

ಒಟ್ಟಿನಲ್ಲಿ ಈಗ ಬಾಲಿವುಡ್ ತಾರೆಗಳ ಜತೆ ನವರಾತ್ರಿ ಹಬ್ಬವನ್ನು ಆಚರಿಸಿ ಖುಷಿಯಿಂದ ಅದರ ಫೋಟೋಗಳನ್ನು ತಮ್ಮ ಫ್ಯಾನ್ಸ್‌ಗಳಿಗೆ ಶೇರ್ ಮಾಡಿದ್ದಾರೆ. 

Read more Photos on
click me!

Recommended Stories