ಈ 3 ಪದಾರ್ಥ ಸಾಕು.. ಮೂರೇ ತಿಂಗಳಲ್ಲಿ ಒಂದು ಕಪ್ಪು ಕಲೆ ಉಳಿಯದೆ ಬಂಗು ಕ್ಲಿಯರ್ ಆಗುತ್ತೆ!

Published : Aug 27, 2026, 02:52 PM IST

Melasma treatment at home: ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ರಾಸಾಯನಿಕ ಉತ್ಪನ್ನಗಳ ಮೊರೆ ಹೋಗುವ ಬದಲು, ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಈ ಬಂಗು ಹೇಗೆ ಹೋಗಲಾಡಿಸಬಹುದು ಎಂಬ ಉಪಯುಕ್ತ ಮಾಹಿತಿ ಇಲ್ಲಿದೆ.

PREV
15
ನೈಸರ್ಗಿಕ ಪದಾರ್ಥಗಳೇ ಹೆಚ್ಚು ಪರಿಣಾಮಕಾರಿ

ನೈಸರ್ಗಿಕ ಪದಾರ್ಥಗಳೇ ಹೆಚ್ಚು ಪರಿಣಾಮಕಾರಿ
ಇಂದಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ, ಮಾಲಿನ್ಯ ಮತ್ತು ಸೂರ್ಯನ ಕಿರಣಗಳ ನೇರ ಪ್ರಭಾವದಿಂದಾಗಿ ಅನೇಕರಲ್ಲಿ 'ಬಂಗು' (Melasma) ಅಥವಾ ಹೈಪರ್‌ಪಿಗ್ಮೆಂಟೇಶನ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಮುಖದ ಅಂದವನ್ನು ಕೆಡಿಸುವ ಈ ಕಪ್ಪು ಕಲೆಗಳನ್ನು ಹೋಗಲಾಡಿಸಲು ದುಬಾರಿ ಸೌಂದರ್ಯವರ್ಧಕಗಳಿಗಿಂತ ಮನೆಯಲ್ಲಿರುವ ನೈಸರ್ಗಿಕ ಪದಾರ್ಥಗಳೇ ಹೆಚ್ಚು ಪರಿಣಾಮಕಾರಿ ಎನ್ನುತ್ತಾರೆ ಡಾ. ಸೌಮ್ಯ ಕೆ.

25
ಏನಿದು ಮನೆಮದ್ದು?

ಏನಿದು ಮನೆಮದ್ದು?
ನಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಕಡ್ಲೆ ಹಿಟ್ಟು, ಅರಿಶಿನ ಮತ್ತು ನಿಂಬೆ ರಸದ ಮಿಶ್ರಣವು ಚರ್ಮದ ಕಾಂತಿಯನ್ನು ಹೆಚ್ಚಿಸಲು ಮತ್ತು ಕಲೆಗಳನ್ನು ಹೋಗಲಾಡಿಸಲು ರಾಮಬಾಣದಂತೆ ಕೆಲಸ ಮಾಡುತ್ತದೆ.

35
ಪದಾರ್ಥಗಳ ವಿಶೇಷತೆ

ಪದಾರ್ಥಗಳ ವಿಶೇಷತೆ
ಡಾ. ಸೌಮ್ಯ ಪ್ರಕಾರ, ಈ ಪ್ರತಿಯೊಂದು ಪದಾರ್ಥವು ಚರ್ಮಕ್ಕೆ ಪೂರಕವಾದ ಅಂಶಗಳನ್ನು ಹೊಂದಿದೆ..

ಕಡ್ಲೆ ಹಿಟ್ಟು: ಇದರಲ್ಲಿರುವ ಜಿಂಕ್ (Zinc) ಮತ್ತು ಸ್ಯಾಪೋನಿನ್ಸ್ (Saponins) ಅಂಶಗಳು ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸಿ (Deep Cleansing), ಸತ್ತ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.

ಅರಿಶಿನ: ಅರಿಶಿನದಲ್ಲಿರುವ ಕರ್ಕ್ಯುಮಿನ್ (Curcumin) ಅಂಶವು ಪ್ರಬಲ ಆಂಟಿ-ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡಿ ಕಲೆಗಳನ್ನು ತಿಳಿಗೊಳಿಸುತ್ತದೆ.

ನಿಂಬೆ ರಸ: ಇದರಲ್ಲಿ ಸಮೃದ್ಧವಾಗಿರುವ ವಿಟಮಿನ್ ಸಿ (Vitamin C) ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೈಪರ್‌ಪಿಗ್ಮೆಂಟೇಶನ್ ಕಡಿಮೆ ಮಾಡಲು ನೆರವಾಗುತ್ತದೆ.

45
ಬಳಸುವ ವಿಧಾನ

ಬಳಸುವ ವಿಧಾನ
ಸ್ವಲ್ಪ ಕಡಲೆಹಿಟ್ಟು, ಚಿಟಿಕೆ ಅರಿಶಿನ, 4-5 ಹನಿಯಷ್ಟು ನಿಂಬೆರಸ.. ಈ ಮೂರು ಪದಾರ್ಥಗಳನ್ನು ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ನಿಧಾನವಾಗಿ ಹಚ್ಚಿ, 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ಫೇಸ್ ಪ್ಯಾಕ್ ಪೂರ್ತಿಯಾಗಿ ಒಣಗಿ ಚರ್ಮ ಎಳೆಯುವಂತಾಗುವ (Cracking stage) ಮುನ್ನವೇ ಅದನ್ನು ತೊಳೆಯುವುದು ಉತ್ತಮ. ಇದನ್ನು ನಿಯಮಿತವಾಗಿ 1 ರಿಂದ 3 ತಿಂಗಳವರೆಗೆ ಪಾಲಿಸಿದರೆ ಮಾತ್ರ ಚರ್ಮದ ಮೇಲಿನ ಕಲೆಗಳು ಕ್ರಮೇಣ ಕಡಿಮೆಯಾಗಿ ಮುಖದಲ್ಲಿ ನೈಸರ್ಗಿಕ ಬದಲಾವಣೆ ಕಾಣಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.

55
ಎಚ್ಚರಿಕೆ

ಎಚ್ಚರಿಕೆ
ಯಾವುದೇ ಮನೆಮದ್ದನ್ನು ಬಳಸುವ ಮೊದಲು ಪ್ಯಾಚ್ ಟೆಸ್ಟ್ ಮಾಡಿಕೊಳ್ಳುವುದು ಉತ್ತಮ. ಒಂದು ವೇಳೆ ಚರ್ಮವು ಹೆಚ್ಚು ಸೂಕ್ಷ್ಮವಾಗಿದ್ದರೆ ಅಥವಾ ಸಮಸ್ಯೆ ತೀವ್ರವಾಗಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories