Hair Care Tips: ತಲೆಹೊಟ್ಟು ಸಾಮಾನ್ಯ ಸಮಸ್ಯೆ ಎಂದು ಪರಿಗಣಿಸಿ ನಿರ್ಲಕ್ಷಿಸುತ್ತಾರೆ. ಆದರೆ ಅದು ಕ್ರಮೇಣ ನೆತ್ತಿಯ ಸೋಂಕು ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ?. ಆದ್ದರಿಂದ ಆರಂಭದಲ್ಲಿಯೇ ಈ ಸಮಸ್ಯೆಯನ್ನು ಪರಿಹರಿಸುವುದು ಮುಖ್ಯ.
ಅನೇಕ ಜನರು ತಲೆಹೊಟ್ಟು ಸಾಮಾನ್ಯ ಸಮಸ್ಯೆ ಎಂದು ಪರಿಗಣಿಸಿ ನಿರ್ಲಕ್ಷಿಸುತ್ತಾರೆ. ಆದರೆ ಅದು ಕ್ರಮೇಣ ನೆತ್ತಿಯ ಸೋಂಕು ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ?. ಇದು ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಆರಂಭದಲ್ಲಿಯೇ ಈ ಸಮಸ್ಯೆಯನ್ನು ಪರಿಹರಿಸುವುದು ಮುಖ್ಯ.
27
ಗಾಳಿಯಲ್ಲಿ ಒಣಗಲು ಬಿಡಿ
ನಿಮ್ಮ ಒದ್ದೆಯಾದ ಕೂದಲನ್ನು ರಬ್ಬರ್ ಬ್ಯಾಂಡ್‌ನಿಂದ ಕಟ್ಟಬೇಡಿ. ಏಕೆಂದರೆ ಇದು ಶಿಲೀಂಧ್ರದ ಬೆಳವಣಿಗೆಗೆ ಕಾರಣವಾಗಬಹುದು. ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಒಣಗಲು ಬಿಡುವುದು ಬಹಳ ಮುಖ್ಯ. ಹೇರ್ ಡ್ರೈಯರ್ ಬಳಸುವ ಬದಲು ನೀವು ಮೊದಲು ಅದನ್ನು ಟವೆಲ್‌ನಿಂದ ನಿಧಾನವಾಗಿ ಒಣಗಿಸಿ ಗಾಳಿಯಲ್ಲಿ ಒಣಗಲು ಬಿಡಬೇಕು.
37
ತಲೆಹೊಟ್ಟಿನ ನಿವಾರಣೆಗೆ ಮನೆಮದ್ದು
ಕೊಬ್ಬರಿಎಣ್ಣೆ
ಕೊಬ್ಬರಿ ಎಣ್ಣೆಯಲ್ಲಿ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ನಿಮ್ಮ ನೆತ್ತಿಗೆ ಮಸಾಜ್ ಮಾಡಿ. 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತೊಳೆಯಿರಿ. ಇದು ತಲೆಹೊಟ್ಟು ಕಡಿಮೆ ಮಾಡುತ್ತದೆ. ನೆತ್ತಿಯನ್ನು ಹೈಡ್ರೇಟ್ ಮಾಡುತ್ತದೆ.
ತಾಜಾ ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ನಿಮ್ಮ ನೆತ್ತಿಗೆ ಹಚ್ಚಿ. ಅರ್ಧ ಗಂಟೆ ಹಾಗೆಯೇ ಬಿಡಿ. ನಂತರ ನಿಮ್ಮ ಕೂದಲನ್ನು ತೊಳೆಯಿರಿ. ಇದು ನೆತ್ತಿಯ ಕಿರಿಕಿರಿ ಮತ್ತು ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
57
ಆಪಲ್ ಸೈಡರ್ ವಿನೆಗರ್
ಆಪಲ್ ಸೈಡರ್ ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ಸ್ನಾನ ಮಾಡುವ ಮೊದಲು ನಿಮ್ಮ ನೆತ್ತಿಗೆ ಹಚ್ಚಿ. 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತೊಳೆಯಿರಿ. ಇದು ತಲೆಹೊಟ್ಟು ಕಡಿಮೆ ಮಾಡಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
67
ಮೆಂತ್ಯ ಬೀಜ
ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಿ. ಬೆಳಗ್ಗೆ ಅದನ್ನು ಪೇಸ್ಟ್ ಮಾಡಿ ನಿಮ್ಮ ನೆತ್ತಿಗೆ ಹಚ್ಚಿ. ಅರ್ಧ ಗಂಟೆಯ ನಂತರ ನಿಮ್ಮ ಕೂದಲನ್ನು ತೊಳೆಯುವುದರಿಂದ ತಲೆಹೊಟ್ಟು ಮತ್ತು ತುರಿಕೆ ನಿವಾರಣೆಯಾಗುತ್ತದೆ. ಇದು ನಿಮ್ಮ ಕೂದಲನ್ನು ಪೋಷಿಸುತ್ತದೆ.
77
ಟೀ ಟ್ರೀ ಆಯಿಲ್
ನಿಮ್ಮ ಶಾಂಪೂವಿನಲ್ಲಿ ಟೀ ಟ್ರೀ ಆಯಿಲ್ ಬೆರೆಸಿ. ನಿಮ್ಮ ನೆತ್ತಿಗೆ ಹಚ್ಚಿ. ಇದರಲ್ಲಿ ಶಿಲೀಂಧ್ರ ವಿರೋಧಿ ಗುಣಗಳಿವೆ. ಇದು ನೈಸರ್ಗಿಕವಾಗಿ ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ.
(ಗಮನಿಸಿ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ತಜ್ಞರ ಸಲಹೆ ಮೇಲೆ ಇವುಗಳನ್ನು ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ, ನೀವು ತಜ್ಞರನ್ನು ಸಂಪರ್ಕಿಸಿ)