ಮಲಗೋ ಮುನ್ನ ಈ ಪಾನೀಯ ಕುಡಿಯಿರಿ, ಮುಖ ಚಂದ್ರನಂತೆ ಹೊಳೆಯುವುದಲ್ಲದೆ ಜೀರ್ಣಕ್ರಿಯೆ ಚೆನ್ನಾಗಿರುತ್ತೆ

Published : Sep 27, 2025, 12:00 PM IST

Skin detox drink: ಈ ಪಾನೀಯವನ್ನು ಕುಡಿಯುವುದರಿಂದ ಮೊಡವೆಗಳು ಬರುವುದನ್ನು ತಡೆಯುತ್ತದೆ , ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮವು ಒಳಗಿನಿಂದಲೇ ದುರಸ್ತಿ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಕುರಿತು ರುಚಿತಾ ಘಾಗ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಅದೇನೆಂದು ನೋಡೋಣ ಬನ್ನಿ.. 

PREV
16
ವಾಸ್ತವಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ!

ಕೆಲವರ ಪ್ರಕಾರ, ಸುಂದರವಾಗಿರುವವರು ಎಂದರೆ ಶ್ವೇತ ವರ್ಣ ಮತ್ತು ಕ್ಲಿಯರ್ ಸ್ಕಿನ್ ಹೊಂದಿರುವ ವ್ಯಕ್ತಿ. ಆದರೆ ಇದರಲ್ಲಿ ಸ್ವಲ್ಪವೂ ಹುರುಳಿಲ್ಲ. ಏಕೆಂದರೆ ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ಸುಂದರವಾಗಿರುತ್ತಾರೆ. ಬಿಡ್ರೀ, "ಈ ಧರ್ಮೋಪದೇಶಗಳು ಓದಲು ಮಾತ್ರ ಚೆನ್ನಾಗಿರುತ್ತದೆ. ವಾಸ್ತವಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ" ಅಂತೀರಾ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಜನರು ಯಾವುದೇ ರೀತಿ ಸ್ಕಿನ್ ಕಲರ್ ಹೊಂದಿದ್ದರೂ ಸುಂದರರು ಎಂದು ನಾವು ಎಷ್ಟೇ ಹೇಳಿದರೂ ವಾಸ್ತವದೊಂದಿಗೆ ಯಾವುದೇ ಸಂಬಂಧವಿಲ್ಲ.

26
ಚರ್ಮವನ್ನು ಆರೋಗ್ಯಕರವಾಗಿಡಬೇಕು

ಎಂದಿಗೂ ನಮ್ಮ ಸ್ಕಿನ್ ಟೋನ್ ಸುಧಾರಿಸಲು ಸಾಧ್ಯವಿಲ್ಲ. ಆದರೆ ಮೊಟ್ಟಮೊದಲು ನಾವು ಚರ್ಮವನ್ನು ಆರೋಗ್ಯಕರವಾಗಿಡಬೇಕಾಗುತ್ತದೆ. ಇನ್ನು ಸರಳವಾಗಿ ಹೇಳುವುದಾದರೆ ಮುಖದಲ್ಲಿ ಮೊಡವೆಗಳು ತುಂಬಿದ್ದರೂ ಫೇರ್‌ನೆಸ್ ಕ್ರೀಮ್ ಹಚ್ಚುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅಂತಹ ಸಮಯದಲ್ಲಿ ನಿಮ್ಮ ತ್ವಚೆ ಗುಣವಾಗಲು ಸಮಯವನ್ನು ನೀಡಬೇಕಾಗುತ್ತದೆ.

36
ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಶೇರ್ ಮಾಡಿದ ರುಚಿತಾ ಘಾಗ್

ಹೌದು ನಮ್ಮ ಚರ್ಮವನ್ನು ದೇಹದ ಒಳಗಿನಿಂದಲೇ ನೋಡಿಕೊಳ್ಳಬೇಕು. ಕೇವಲ ಉತ್ಪನ್ನಗಳನ್ನು ಹಚ್ಚುವ ಮೂಲಕ ಅಲ್ಲ. ಕೆಲವು ಪದಾರ್ಥವನ್ನ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಹೌದು, ನೀವು ನೈಸರ್ಗಿಕ ಡಿಟಾಕ್ಸ್ ಪಾನೀಯವನ್ನು ಪ್ರಯತ್ನಿಸಬಹುದು. ಈ ಪಾನೀಯವನ್ನು ಕುಡಿಯುವುದರಿಂದ ಮೊಡವೆಗಳು ಬರುವುದನ್ನು ತಡೆಯುತ್ತದೆ , ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮವು ಒಳಗಿನಿಂದಲೇ ದುರಸ್ತಿ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಕುರಿತು ರುಚಿತಾ ಘಾಗ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಅದೇನೆಂದು ನೋಡೋಣ ಬನ್ನಿ.

46
ಪಾನೀಯ ತಯಾರಿಸಲು ಬೇಕಾಗಿರುವುದು

1 ಸಣ್ಣ ಚಮಚ ಸೋಂಪು ಬೀಜ
1 ಸಣ್ಣ ಚಮಚ ಜೀರಿಗೆ
1 ಸಣ್ಣ ಚಮಚ ಅಜ್ವಾನ
2 ಗ್ಲಾಸ್ ನೀರು
ಒಂದು ಚಿಟಿಕೆ ಕಪ್ಪು ಉಪ್ಪು

ಪಾನೀಯವನ್ನು ತಯಾರಿಸುವ ವಿಧಾನ
ಈ ಪಾನೀಯವನ್ನು ತಯಾರಿಸಲು ನೀವು ಎಲ್ಲಾ ಬೀಜಗಳನ್ನು 2 ಗ್ಲಾಸ್ ನೀರಿನಲ್ಲಿ ಹಾಕಬೇಕು. ಈ ನೀರನ್ನು ಕಡಿಮೆ ಉರಿಯಲ್ಲಿ 5-10 ನಿಮಿಷ ಕುದಿಸಬೇಕು. ನಂತರ ನೀರನ್ನು ಸೋಸಿ. ಈಗ ಇದಕ್ಕೆ ಕಪ್ಪು ಉಪ್ಪು ಸೇರಿಸಿ ರಾತ್ರಿ ಬಿಸಿ ಬಿಸಿಯಾಗಿ ಕುಡಿಯಿರಿ.

56
ಏನೆಲ್ಲಾ ಉಪಯೋಗವಿದೆ?

*ಈ ಪಾನೀಯವನ್ನು ಕುಡಿಯುವುದರಿಂದ ಮೊಡವೆಗಳು ಕಡಿಮೆಯಾಗುತ್ತವೆ .
*ದೇಹದಲ್ಲಿರುವ ಟಾಕ್ಸಿನ್ ಹೊರಹಾಕುತ್ತದೆ.
*ದೇಹದ ಊತ ಕಡಿಮೆಯಾಗುತ್ತದೆ.
*ನೈಸರ್ಗಿಕ ಹೊಳಪು ಹೆಚ್ಚಾಗುತ್ತದೆ.
*ಆರೋಗ್ಯಕರ ಚರ್ಮಕ್ಕಾಗಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

66
ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ

ಪಾನೀಯದಲ್ಲಿ ಬಳಸುವ ಸೋಂಪು ದೇಹದಿಂದ ಟಾಕ್ಸಿನ್ ತೆಗೆದುಹಾಕಲು ಸಹಾಯ ಮಾಡುತ್ತದೆ, ಇದು ಕ್ಲಿಯರ್ ಹಾಗೂ ಗ್ಲಾಸಿ ಸ್ಕಿನ್‌ಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ವಯಸ್ಸಾದ ಚಿಹ್ನೆಗಳನ್ನು ಮರೆಮಾಚಲು ಸಹಾಯ ಮಾಡುತ್ತದೆ ಮತ್ತು ಮೊಡವೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಜೀರಿಗೆ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿವೆ. ಅವು ಚರ್ಮದ ಸೋಂಕುಗಳು ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತವನ್ನು ಶುದ್ಧೀಕರಿಸಲು ಮತ್ತು ನೈಸರ್ಗಿಕವಾಗಿ ಚರ್ಮವನ್ನು ಕಾಂತಿಯುತವಾಗಿಸಲು ಸಹಾಯ ಮಾಡುತ್ತದೆ.

ಅಜ್ವಾನ ಕಲ್ಮಶಗಳನ್ನು ಹೊರಹಾಕಲು ಮತ್ತು ಹೆಚ್ಚುವರಿ ಎಣ್ಣೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಇದು ಮೊಡವೆಗಳು ಮತ್ತು ಕಲೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮ ಕ್ಲಿಯರ್ ಆಗಿ ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

Read more Photos on
click me!

Recommended Stories