ಬಟ್ಟೆ ವಾಷ್ ಮಾಡುತ್ತಿದ್ದೀರಾ? ವೈಟ್ ವಿನೆಗರ್ ಬಳಸಿ ಹಲವು ಸಮಸ್ಯೆ ನಿವಾರಿಸಿ

First Published | Mar 24, 2021, 6:29 PM IST

ವಾಷಿಂಗ್ ಮಷೀನ್ಗೆ ಎಂದಾದರೂ ವೈಟ್ ವಿನೆಗರ್  ಸೇರಿಸಿದ್ದೀರಾ? ಇಲ್ಲವೇ? ಈಗ ಪ್ರಾರಂಭಿಸಲು ಬಯಸಿದ್ದರೆ, ಇವತ್ತೇ ಟ್ರೈ ಮಾಡಿ. ಲಾಂಡ್ರಿ ಮತ್ತು ವಾಷಿಂಗ್ ಮಷೀನ್ ಎರಡಕ್ಕೂ ವಿನೆಗರ್ ನಿಜವಾಗಿಯೂ ಒಳ್ಳೆಯದು, ಜೊತೆಗೆ, ವಿನೆಗರ್ ಅಗ್ಗ. ಯಾಕೆ ವಿನೆಗರ್ ಅನ್ನು ಲಾಂಡ್ರಿಗೆ ಬಳಸುತ್ತಾರೆ ಎಂದು ಯೋಚನೆ ಮಾಡುತ್ತಿದ್ದೀರಾ? ವಾಷಿಂಗ್ ಮಷಿನ್‌ಗೆ ವಿನೆಗರ್ ಸೇರಿಸುವ ಉತ್ತಮ ಪ್ರಯೋಜನಗಳ ಪಟ್ಟಿ ಇಲ್ಲಿದೆ...

ವಾಷಿಂಗ್ ಮಷೀನ್ ಕ್ಲೀನಿಂಗ್ವಾಷಿಂಗ್ ಮಷಿನ್ನ ಪ್ಲಾಸ್ಟಿಕ್ ಅಂಚುಗಳನ್ನು ಒರೆಸಲು ಬಿಳಿ ವಿನೆಗರ್ ಮತ್ತು ಸ್ವಚ್ಛ ಬಟ್ಟೆಯನ್ನು ಬಳಸಿ. ಹಾಗೆ ಮಾಡುವುದರಿಂದ ಕೊಳಕುವಾಸನೆ, ಹೊಲಸು ಮತ್ತು ಕಲೆಗಳನ್ನು ತೆಗೆದುಹಾಕುತ್ತದೆ.
ವಾಷಿಂಗ್ ಮಷೀನ್‌ಗೆ ಅರ್ಧ ಬಾಟಲ್ ವಿನೆಗರ್ ಸುರಿಯಿರಿ ಮತ್ತು ಅದನ್ನು ಹೈಯೆಸ್ಟ್ ಸೈಕ್‌ನಲ್ಲಿ ಚಲಾಯಿಸಲು ಬಿಡಿ. ಇದು ಯಂತ್ರವನ್ನು ಸೋಂಕು ರಹಿತಗೊಳಿಸುತ್ತದೆ ಮತ್ತು ವಾಸನೆಯನ್ನು ತೊಡೆದುಹಾಕುತ್ತದೆ.
Tap to resize

ಮಗುವಿನ ಬಟ್ಟೆಗಳುಮಗುವಿನ ಚರ್ಮವು ತುಂಬಾ ಸೂಕ್ಷ್ಮ. ಆದುದರಿಂದ ಮಗುವಿನ ಕೋಮಲ ಚರ್ಮವನ್ನು ರಕ್ಷಿಸುವುದು ಮುಖ್ಯ. ಅದಕ್ಕಾಗಿ ಮಗುವಿನ ಬಟ್ಟೆಗಳನ್ನು ತೊಳೆಯುವಾಗ ವಾಷಿಂಗ್ ಮಷಿನ್‌ಗೆ ಒಂದು ಕಪ್ ಬಿಳಿ ವಿನೆಗರ್ ಹಾಕಿ.
ಬಟ್ಟೆಯಲ್ಲಿ ಸಾಕಷ್ಟು ಕಲೆಗಳಿದ್ದರೆ, ಅವುಗಳನ್ನು ಡಿಶ್ ಪ್ಯಾನಲ್ಲಿ ಸಮಾನ ಭಾಗಗಳ ಬೆಚ್ಚಗಿನ ನೀರು ಮತ್ತು ವಿನೆಗರ್ ಮತ್ತು ಒಂದು ಟೀಸ್ಪೂನ್ ಅಡಿಗೆ ಸೋಡಾದೊಂದಿಗೆ ನೆನೆಸಬಹುದು. ವಿನೆಗರ್ ಮೂತ್ರದ ವಾಸನೆಯನ್ನು ಸಹ ತೆಗೆದುಹಾಕುತ್ತದೆ.
ಪ್ರಾಣಿಗಳ ಕೂದಲುವಾಷಿಂಗ್ ಮಷೀನ್‌ಗೆ ವಿನೆಗರ್ ಸೇರಿಸುವ ಮೂಲಕ, ಪ್ರಾಣಿಗಳ ಕೂದಲುಗಳು ಬಟ್ಟೆಗಳಿಗೆ ಸುಲಭವಾಗಿ ಅಂಟಿಕೊಳ್ಳುವುದನ್ನು ತಡೆಯುತ್ತದೆ. ನಾಯಿ ಅಥವಾ ಬೆಕ್ಕಿನಂತಹ ಸಾಕುಪ್ರಾಣಿಗಳಿದ್ದರೆ ಇದು ಸೂಕ್ತವಾಗಿದೆ.
ಮೃದುವಾದ ಕಂಬಳಿ ಮತ್ತು ಪ್ಯಾಂಟ್ವೈಟ್ ವಿನೆಗರ್ ಉತ್ತಮ ಪ್ಯಾಬ್ರಿಕ್ ಕ್ಲೀನರ್. ಸ್ವಲ್ಪ ಸ್ಟಿಫ್ ಆಗಿರುವ ಹೊಸ ಜೋಡಿ ಜೀನ್ಸ್ ಹೊಂದಿದ್ದೀರಾ? ಅವುಗಳನ್ನು ವಾಷಿಂಗ್ ಮಷಿನ್‌ನಲ್ಲಿ ತೊಳೆಯಿರಿ ಮತ್ತು ವಿನೆಗರ್ ಅನ್ನು ಫ್ಯಾಬ್ರಿಕ್ ಮೆದುಗೊಳಿಸುವಿಕೆಯಾಗಿ ಬಳಸಿ. ಹೀಗೆ ಮಾಡಿದರೆ ಜೀನ್ಸ್ ಧರಿಸಲು ಹೆಚ್ಚು ಆರಾಮದಾಯಕವಾಗುತ್ತದೆ.
ವಾಷಿಂಗ್ ಮಷೀನ್‌ಗೆ ಸ್ವಲ್ಪ ವಿನೆಗರ್ ಸೇರಿಸಿದರೆ ಕಂಬಳಿ ಸಹ ಸುಂದರವಾಗಿರುತ್ತವೆ ಮತ್ತು ಮೃದುವಾಗುತ್ತವೆ. ವಿನೆಗರ್ ಯಾವುದೇ ವಾಸನೆಯನ್ನು ಬಿಡುವುದಿಲ್ಲ, ಅಂದರೆ ಲಾಂಡ್ರಿ ವಾಸನೆಯನ್ನು ತಾಜಾ ಮಾಡುತ್ತದೆ!
ಒಳವಸ್ತ್ರಗಳನ್ನು ತೊಳೆಯುವಾಗಬ್ರಾ, ಲೇಸ್ ಪ್ಯಾಂಟಿ ಮತ್ತು ಸಾಕ್ಸ್‌ಗಳನ್ನುಹ್ಯಾಂಡ್ ವಾಷ್ ಮೂಲಕ ತೊಳೆಯಿರಿ. ಸೌಮ್ಯವಾದ ಕೈ ತೊಳೆಯುವ ಡಿಟರ್ಜೆಂಟ್ ಮತ್ತು ಎರಡು ಟೀ ಚಮಚ ವಿನೆಗರ್‌ನೊಂದಿಗೆ ಸ್ವಲ್ಪ ಸಾಬೂನು ನೀರನ್ನು ಸೇರಿಸಿ.
ವಿನೆಗರ್ ಎಲ್ಲ ವಾಸನೆಯನ್ನು ತೆಗೆದುಹಾಕುತ್ತದೆ ಮತ್ತು ಯಾವುದೇ ಸೋಪ್ ಶೇಷವು ಬಟ್ಟೆಯ ಮೇಲೆ ಉಳಿಯದಂತೆ ನೋಡಿಕೊಳ್ಳುತ್ತದೆ.
ಕಲೆಗಳುಹಳದಿಬಟ್ಟೆಗಳನ್ನು, ಕಾಫಿ ಅಥವಾ ಮೂತ್ರದಿಂದಾದ ಕಲೆಗಳನ್ನು ವಿನೆಗರ್ ನಿವಾರಿಸುತ್ತದೆ. ಸಮಾನ ಭಾಗಗಳ ನೀರು ಮತ್ತು ವಿನೆಗರ್ ಮಿಶ್ರಣದಲ್ಲಿ ರಾತ್ರಿಯಿಡೀ ಕಲೆಯಾದ ಬಟ್ಟೆಗಳನ್ನು ನೆನೆಸಲು ಬಿಡಿ. ನಂತರ ವಾಷಿಂಗ್ ಮಷೀನ್ ಮೂಲಕ ಬಟ್ಟೆಗಳನ್ನು ಕ್ಲೀನ್ ಮಾಡಿ.

Latest Videos

click me!