ಶ್ರಾವಣ ಮಾಸ ತುಂಬಾ ಸುಂದರವಾದ ತಿಂಗಳು. ಈ ತಿಂಗಳಲ್ಲಿ ಮೇಲಿಂದ ಮೇಲೆ ಹಬ್ಬಗಳು ಬರುವುದರಿಂದ ಹೆಣ್ಮಕ್ಕಳು ಮನೆ ಸ್ವಚ್ಛಗೊಳಿಸುವುದು, ಪೂಜೆ, ತ್ವಚೆ ಆರೈಕೆ, ಅಲಂಕಾರ ಮಾಡಿಕೊಳ್ಳುವತ್ತ ಗಮನಹರಿಸುತ್ತಾರೆ. ಸಾಮಾನ್ಯವಾಗಿ ಈ ತಿಂಗಳು ಹೆಂಗಳೆಯರು ಪೂಜೆ ಪುನಸ್ಕಾರ ಮಾಡುವ ಸಮಯದಲ್ಲಿ ಹಸಿರು ಬಣ್ಣದ ಬಳೆಗಳನ್ನು ಧರಿಸುವುದನ್ನು ನೀವು ನೋಡಬಹುದು.
ಈ ವರ್ಷ ಜುಲೈ 25ರಂದು ಶ್ರಾವಣ ಮಾಸ ಪ್ರಾರಂಭವಾಗುವುದು. ಈ ತಿಂಗಳೇನಾದರೂ ನೀವು ಶಾಪಿಂಗ್‌ಗೆಂದು ತೆರಳುತ್ತಿದ್ದರೆ, ಅದರಲ್ಲೂ ಹಸಿರು ಬಳೆಗಳನ್ನು ಖರೀದಿಸುತ್ತಿದ್ದರೆ ಅದಕ್ಕೆ ಹೊಂದುವಂತಹ ಸೈಡ್ ಬ್ಯಾಂಗಲ್ ಸೆಟ್ ಇಲ್ಲಿದೆ ನೋಡಿ. ಈ ಸೈಡ್ ಬ್ಯಾಂಗಲ್ ವಿನ್ಯಾಸ ತುಂಬಾ ವಿಶೇಷವಾಗಿದೆ. ಕುಂದನ್ ಸ್ಟೋನ್‌ನಿಂದ ಮಾಡಿದ ಈ ಬಳೆಗಳನ್ನು ನೀವು ಹಸಿರು ಬಳೆಗಳ ಜೊತೆ ಹೊಂದಿಸಿ ಸ್ಟೈಲಿಶ್ ಲುಕ್ ಪಡೆಯಬಹುದು. ಇಲ್ಲಿ ಕುಂದನ್ ಬಳೆಗಳ ಡಿಸೈನ್ ಕೊಡಲಾಗಿದ್ದು, ಪ್ರತಿ ವಾರ ಮತ್ತು ಸಂದರ್ಭಕ್ಕೆ ತಕ್ಕಂತೆ ಮ್ಯಾಚ್ ಮಾಡಬಹುದು.
25
ಗೋಲ್ಡ್ ಕಲರ್ ಬ್ಯಾಂಗಲ್ ಮೇಲೆ ಕುಂದನ್ ಸ್ಟೋನ್ ಮತ್ತು ಹಸಿರು ಬಳೆ
ಚಿನ್ನದ ದಾರಗಳಿಂದ ಅಲಂಕೃತವಾದ ಈ ಸೈಡ್ ಬ್ಯಾಂಗಲ್ ತುಂಬಾ ಸುಂದರವಾಗಿವೆ. ಈ ರೀತಿಯ ಕುಂದನ್ ಬಳೆಗಳನ್ನು ಹಸಿರು ಬಣ್ಣದ ಬಳೆಗಳ ಜೊತೆ ಹೊಂದಿಸಿ ಪರ್‌ಫೆಕ್ಟ್ ಮತ್ತು ಕ್ಲಾಸಿ ಲುಕ್ ಪಡೆಯಬಹುದು.
35
ಕಡು ಮತ್ತು ತಿಳಿ ಹಸಿರು ಕುಂದನ್ ಬಳೆ ಸೆಟ್
ಕಡು ಮತ್ತು ತಿಳಿ ಹಸಿರು ಬಣ್ಣದ ಈ ಕುಂದನ್ ಬಳೆ ಸೆಟ್ ತುಂಬಾ ಸುಂದರವಾಗಿದೆ. ಸೀರೆಗೆ ಸಖತ್ ಮ್ಯಾಚ್ ಆಗುತ್ತದೆ.
45
ನವ ವಧುಗಳಿಗೆ ಕುಂದನ್ ಬಳೆ ಸೆಟ್
ಈ ಸುಂದರವಾದ ಕುಂದನ್ ಬಳೆ ಸೆಟ್ ನವ ವಧುಗಳಿಗಾಗಿಯೇ. ಈ ವರ್ಷ ಮದುವೆಯಾದ ಹುಡುಗಿಯರು ಶ್ರಾವಣದಲ್ಲಿ ಸುಂದರವಾಗಿ ಕಾಣಲು ಬಯಸಿದರೆ, ಈ ರೀತಿಯ ಹೆವಿ ಬಳೆ ಸೆಟ್‌ಗಳನ್ನು ಆರಿಸಿಕೊಳ್ಳಬಹುದು. ಈ ಬಳೆಗಳಲ್ಲಿ ಮುತ್ತು ಮತ್ತು ಕುಂದನ್ ವರ್ಕ್ ಅದ್ಭುತವಾಗಿ ಕಾಣುತ್ತದೆ.
55
ಗಾಜಿನ ಬಳೆಗಳ ಜೊತೆ ಕುಂದನ್ ಬಳೆಗಳು
ಗಾಜಿನ ಬಳೆಗಳ ಈ ಸುಂದರ ವಿನ್ಯಾಸ ಎಲ್ಲರ ಬಳಿಯೂ ಇರುತ್ತದೆ, ಆದರೆ ನಿಮ್ಮ ಬಳಿ ಇಂತಹ ಕುಂದನ್ ವರ್ಕ್‌ನ ಬಳೆಗಳು ಇದೆಯೇ? ಇಲ್ಲದಿದ್ದರೆ, ಈ ಸೆಟ್ ಅನ್ನು ಖರೀದಿಸಿ ಮತ್ತು ನಿಮ್ಮ ಕೈಗಳ ಸೌಂದರ್ಯವನ್ನು ಹೆಚ್ಚಿಸಿ.