ಅಬ್ಬಬ್ಬಾ..ನಟ ಮಹೇಶ್ ಬಾಬು ಪತ್ನಿ ಧರಿಸಿರೋ ಕೋಟ್ ಬೆಲೆ ಇಷ್ಟೊಂದಾ?

Published : Jun 08, 2023, 09:50 AM ISTUpdated : Jun 08, 2023, 10:02 AM IST

ಸೆಲೆಬ್ರಿಟಿಗಳೇ ಹಾಗೇ ಬಟ್ಟೆಗಳಿಗಾಗಿ ನೀರಿನಂತೆ ಹಣ ಖರ್ಚು ಮಾಡ್ತಾರೆ. ಹಾಗೆಯೇ ಸದ್ಯ ದಕ್ಷಿಣ ಭಾರತದ ಖ್ಯಾತ ನಟ ಮಹೇಶ್ ಬಾಬು, ಪತ್ನಿ ನಮ್ರತಾ ಶಿರೋಡ್ಕರ್ ಧರಿಸಿರೋ ಕೋಟ್‌ ಎಲ್ಲರ ಗಮನ ಸೆಳೆದಿದೆ. ಅತ್ಯಾಕರ್ಷಕವಾಗಿರುವ ಕೋಟ್ ಬೆಲೆಯೆಷ್ಟು ಗೊತ್ತಾ?

PREV
18
ಅಬ್ಬಬ್ಬಾ..ನಟ ಮಹೇಶ್ ಬಾಬು ಪತ್ನಿ ಧರಿಸಿರೋ ಕೋಟ್ ಬೆಲೆ ಇಷ್ಟೊಂದಾ?

ದಕ್ಷಿಣ ಭಾರತದ ಖ್ಯಾತ ನಟ ಮಹೇಶ್ ಬಾಬು ಅವರು ಇತ್ತೀಚೆಗೆ ತಮ್ಮ ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ಮಗಳು ಸಿತಾರಾ ಅವರೊಂದಿಗೆ ಟಾಲಿವುಡ್‌ನ ಫ್ಯಾಷನ್ ಡಿಸೈನರ್ ಶ್ರೀಯಾ ಭೂಪಾಲ್ ಅವರ ಬೇಬಿ ಶವರ್‌ನಲ್ಲಿ ಭಾಗವಹಿಸಿದ್ದರು. ದಂಪತಿಗಳು ಈ ವಿಶೇಷ ಸಂದರ್ಭದಲ್ಲಿ ಭಾಗಿಯಾಗಿದ್ದು ಎಲ್ಲರ ಗಮನ ಸೆಳೆಯಿತು. ಅದರಲ್ಲೂ  ನಮ್ರತಾ ಶಿರೋಡ್ಕರ್ ಧರಿಸಿದ್ದ ಕೋಟ್ ಎಲ್ಲರೂ ನಿಬ್ಬೆರಗಾಗಿ ನೋಡಿದರು.
 

28

Instagramನಲ್ಲಿ ನಮ್ರತಾ ಶಿರೋಡ್ಕರ್ (@namratashirodkar) ಅವರು ಹಂಚಿಕೊಂಡ ಪೋಸ್ಟ್‌ನಲ್ಲಿ ಈ ಕೋಟ್‌ನ್ನು ನೋಡಬಹುದಾಗಿದೆ. ನಮ್ರತಾ ಮತ್ತು ಮಹೇಶ್ ಇಬ್ಬರೂ ಪಾರ್ಟಿಯ ಹಲವಾರು ಒಳಗಿನ ಗ್ಲಿಂಪ್ಸ್‌ಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ನಮ್ರತಾ ಶಿರೋಡ್ಕರ್ ಅವರು ಜಾರ್ಜಿಯೊ ಅರ್ಮಾನಿ ಅವರ ಗ್ರಾಫಿಕ್ ಪ್ರಿಂಟ್ ಸಿಂಗಲ್ ಚೆಸ್ಟೆಡ್‌ ಕೋಟ್‌ನಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. 

38

ನಮ್ರತಾ ಶಿರೋಡ್ಕರ್ ಐಷಾರಾಮಿ ಫ್ಯಾಷನ್‌ ಎಲ್ಲರ ಗಮನ ಸೆಳೆದಿದೆ. ಈ ಸೊಗಸಾದ ಮತ್ತು ಅತ್ಯಾಧುನಿಕ ಕೋಟ್‌ ಬೆಲೆ ಬರೋಬ್ಬರಿ 3.99 ಲಕ್ಷ ರೂ.  ವಿನ್ಯಾಸ ಮತ್ತು ಉತ್ತಮ ಗುಣಮಟ್ಟದ ಕರಕುಶಲತೆಗೆ ಹೆಸರುವಾಸಿಯಾದ ಕೋಟ್‌ನ ಪ್ರಿಂಟ್‌ಗೆ ಎಲ್ಲರೂ ಮೆಚ್ಚುಗೆ ಸೂಚಿಸಿದರು.

48

ಮಹೇಶ್ ಬಾಬು, ಪತ್ನಿ ನಮೃತಾ ಮತ್ತು ಮಗಳು ಸಿತಾರಾ ಜೊತೆ ಪೋಟೋಗೆ ಫೋಸ್ ಕೊಟ್ಟರು. ನಮ್ರತಾ ಪತಿ ಬ್ಲ್ಯಾಕ್ ಮತ್ತು ಮಗಳು ಸಿತಾರಾ ಪಿಂಕ್ ಬಟ್ಟೆಯಲ್ಲಿ ಮಿಂಚಿದ್ದಾರೆ.

58

ಫ್ಯಾಷನ್ ಡಿಸೈನರ್ ಶ್ರೀಯಾ ಭೂಪಾಲ್ ಬೇಬಿ ಶವರ್ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳು ಆಗಮಿಸಿದ್ದರು. ಅದರಲ್ಲಿ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಅವರ ಉಪಸ್ಥಿತಿಯು ಆಚರಣೆಗೆ ಗ್ಲಾಮರ್ ಸ್ಪರ್ಶವನ್ನು ನೀಡಿತು.

68

ಜಾರ್ಜಿಯೊ ಅರ್ಮಾನಿ ಸಿಲ್ಕ್‌ ಕೋಟ್ ಧರಿಸಿ, ವಜ್ರದ ಕಿವಿಯೋಲೆಗಳನ್ನು ಧರಿಸಿ ಸರಳವಾದ ಮೇಕಪ್‌ನಲ್ಲಿ ನಮ್ರತಾ ಶಿರೋಡ್ಕರ್ ಮಿಂಚಿದರು. ಸುಂದರವಾದ ನಗು ಅವರು ಅತ್ಯುತ್ತಮವಾಗಿ ಕಾಣುವಂತೆ ಮಾಡಿತು.

78

ನಮ್ರತಾ ಶಿರೋಡ್ಕರ್, ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಪತ್ನಿ. ಮಹೇಶ್‌ ಬಾಬು ಪತ್ನಿಯಾಗುವ ಮೊದಲು ಅವರು ಟಾಪ್ ಮಾಡೆಲ್ ಮತ್ತು ನಟಿ.  'ವಂಶಿ' ಚಿತ್ರದ ಸಮಯದಲ್ಲಿ ಮಹೇಶ್-ನಮ್ರತಾ ಪ್ರೀತಿಸುತ್ತಿದ್ದರು ಮತ್ತು 2005 ರಲ್ಲಿ ವಿವಾಹವಾದರು. ಆ ನಂತರ ನಮ್ರತಾ ನಟನೆಯನ್ನು ತೊರೆದರು ಮತ್ತು ಸಂಪೂರ್ಣ ಗಮನವನ್ನು ತಮ್ಮ ಕುಟುಂಬಕ್ಕೆ ಕೊಟ್ಟರು. ಮಹೇಶ್ ಮತ್ತು ನಮ್ರತಾ ಅವರಿಗೆ ಗೌತಮ್ ಮತ್ತು ಸಿತಾರಾ ಎಂಬ ಇಬ್ಬರು ಮಕ್ಕಳಿದ್ದಾರೆ.

88

ನಮ್ರತಾ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ರಜಾದಿನಗಳಲ್ಲಿ ತಮ್ಮ ಕುಟುಂಬದ ಕ್ಲಿಕ್‌ಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ನಮ್ರತಾ, ಮಹೇಶ್ ಮತ್ತು ಸಿತಾರಾ ಇತ್ತೀಚೆಗಷ್ಟೇ ಬೇಬಿ ಶವರ್ ಪಾರ್ಟಿಯಲ್ಲಿ ಪಾಲ್ಗೊಂಡು ತಾವು ತುಂಬಾ ಮಜಾ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇಡೀ ಕುಟುಂಬ ಸುಂದರವಾಗಿ ಕಾಣುತ್ತಿದ್ದು, ಪಾರ್ಟಿಯಲ್ಲಿ ನಮ್ರತಾ ತೊಟ್ಟಿದ್ದ ಸಿಲ್ಕ್ ಕುರ್ತಾ ಫ್ಯಾಶನ್ ಪ್ರಿಯರನ್ನು ಆಕರ್ಷಿಸಿದೆ.

Read more Photos on
click me!

Recommended Stories