1 ತಿಂಗಳಲ್ಲೇ ಉದ್ದ, ದಪ್ಪ ಕೂದಲು ಬೇಕೇ; ಇಲ್ಲಿದೆ ನ್ಯೂಟ್ರಿಶನಿಸ್ಟ್ ಶೇರ್ ಮಾಡಿದ ಸೀಕ್ರೆಟ್ ಹೇರ್ ಆಯಿಲ್

Published : Aug 13, 2025, 04:58 PM IST

ಕೆಲವು ಮನೆಮದ್ದುಗಳು ಮಾತ್ರ ಸೂಪರ್ ಆಗಿ ಕೆಲಸ ಮಾಡ್ತವೆ. ಇವು ಸಾಬೀತು ಕೂಡ ಆಗಿವೆ. ಅದರಲ್ಲಿ ಒಂದು ನಾವೀಗ ಹೇಳುತ್ತಿರುವ ಈ ವಿಶೇಷ ಆಯುರ್ವೇದ ಎಣ್ಣೆ. ಇದು ನಿಮಗೆ ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ.

PREV
17

Ayurveda for Hair Loss: ಪ್ರತಿಯೊಬ್ಬರೂ ಉದ್ದ ಕೂದಲು ಬಯಸುತ್ತಾರೆ. ನಿಮಗೂ ಸಹ ಉದ್ದವಲ್ಲದಿದ್ದರೂ, ದಪ್ಪ ಕೂದಲಾದರೂ ಇರಬೇಕೆಂದು ಬಯಸಿದರೆ ಒಂದು ಎಣ್ಣೆ ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ. ಅದನ್ನು ಹೇಗೆ ತಯಾರಿಸಬೇಕೆಂದು ತಿಳಿಯೋಣ.

27

ಉದ್ದ ಮತ್ತು ದಪ್ಪ ಕೂದಲು ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರೂ ಬಯಸುವುದು ಅದನ್ನೇ. ಆದರೆ ಮಾಲಿನ್ಯ, ಕೆಟ್ಟ ಆಹಾರ ಪದ್ಧತಿ, ಜೀವನಶೈಲಿ ಮತ್ತು ಕೆಟ್ಟ ನಿದ್ರೆಯ ಚಕ್ರದಿಂದಾಗಿ ಇದು ಸಾಧ್ಯವಾಗೋದೇ ಇಲ್ಲ.

37

ಕೂದಲು ಉದುರುವುದು ಈಗೀಗ ಸಾಮಾನ್ಯ ಸಮಸ್ಯೆಯಾಗುತ್ತಿದೆ. ಎಲ್ಲರೂ ಇದರ ಬಗ್ಗೆ ಮಾತನಾಡುವುದು ಕಾಮನ್ ಆಗಿದೆ. ಹಾಗಾಗಿ ಹೀಗಾಗದಂತೆ ನೋಡಿಕೊಳ್ಳಲು ವಿವಿಧ ರೀತಿಯ ಉತ್ಪನ್ನಗಳನ್ನು ಬಳಸುತ್ತೇವೆ ಮತ್ತು ಸಾಕಷ್ಟು ಹಣವನ್ನು ಖರ್ಚು ಮಾಡುತ್ತೇವೆ. ಇಷ್ಟೆಲ್ಲಾ ಮಾಡಿದ್ರೂ ಯಾವುದೂ ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ.

47

ಆದರೆ ಕೆಲವು ಮನೆಮದ್ದುಗಳು ಮಾತ್ರ ಸೂಪರ್ ಆಗಿ ಕೆಲಸ ಮಾಡ್ತವೆ. ಇವು ಸಾಬೀತು ಕೂಡ ಆಗಿವೆ. ಅದರಲ್ಲಿ ಒಂದು ನಾವೀಗ ಹೇಳುತ್ತಿರುವ ಈ ವಿಶೇಷ ಆಯುರ್ವೇದ ಎಣ್ಣೆ. ಇದು ನಿಮಗೆ ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ. ಇತ್ತೀಚೆಗಷ್ಟೇ ನ್ಯೂಟ್ರಿಶನಿಸ್ಟ್ ಶ್ವೇತಾ ಶಾ ತಮ್ಮ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಈ ಎಣ್ಣೆಯ ಬಗ್ಗೆ ಶೇರ್ ಮಾಡಿದ್ದು, ಅದನ್ನು ತಯಾರಿಸುವುದು ಹೇಗೆಂದು ನೋಡೋಣ..

57

ಇಲ್ಲಿದೆ ನೋಡಿ ಪೋಸ್ಟ್ 

ಈ ಎಣ್ಣೆಯನ್ನು ತಯಾರಿಸಲು ಮೊದಲು ಕೊಬ್ಬರಿ ಮತ್ತು ಹರಳೆಣ್ಣೆ ತೆಗೆದುಕೊಂಡು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ನಂತರ ಇದಕ್ಕೆ ಕರ್ಪೂರ, ಕಚ್ರಿ ಪುಡಿ (ಈಗ ಎಲ್ಲಾ ಸೂಪರ್ ಮಾರ್ಕೆಟ್‌ನಲ್ಲೂ ಲಭ್ಯ) ಮತ್ತು ಮೆಂತ್ಯ ಬೀಜಗಳನ್ನು ಸೇರಿಸಿ. ಈಗ ಇವೆಲ್ಲವನ್ನೂ 5 ರಿಂದ 7 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬಿಸಿ ಮಾಡಿ.

67

ನಂತರ ಅದಕ್ಕೆ ರೋಸ್ಮರಿ ಎಲೆ ಅಥವಾ ಸಾರಭೂತ ಎಣ್ಣೆ (essential oil) ಸೇರಿಸಿ 30 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ಇದು ತಣ್ಣಗಾದ ನಂತರ ಶೋಧಿಸಿ ಗಾಜಿನ ಬಾಟಲಿಯಲ್ಲಿ ತುಂಬಿಡಿ.

77

ಈಗ ಅದನ್ನು ಕೂದಲಿಗೆ ಹೇಗೆ ಹಚ್ಚಬೇಕೆಂದು ತಿಳಿದುಕೊಳ್ಳುವುದು ಸಹ ಮುಖ್ಯ. ಮೊದಲಿಗೆ ಎಣ್ಣೆಯನ್ನು ನೆತ್ತಿಗೆ ಹಗುರವಾದ ಕೈಗಳಿಂದ ಹಚ್ಚಿ. ಸುಮಾರು 5 ರಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಿ. ಈಗ ಅದನ್ನು ಕನಿಷ್ಠ 2 ರಿಂದ 3 ಗಂಟೆಗಳ ಕಾಲ ಬಿಡಿ. ಈಗ ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಬೇಕು. ಹೀಗೆ ಇದನ್ನು ವಾರಕ್ಕೆ 2 ರಿಂದ 3 ಬಾರಿ ಮಾಡಬಹುದು.

Read more Photos on
click me!

Recommended Stories