ಪ್ರತಿದಿನ ಬೆಳಗ್ಗೆ ನಿಮ್ಮ ಸ್ಕಿನ್ ಫ್ರೆಶ್ ಆಗಿ ಹೊಳಿತಾ ಇರಬೇಕೆಂದ್ರೆ ಯಾವುದೇ ದುಬಾರಿ ಸ್ಕಿನ್ ಪ್ರಾಡಕ್ಸ್ಟ್ ಬಳಸುವ ಅಗತ್ಯವಿಲ್ಲ. ಆಯುರ್ವೇದ ಅಥವಾ ಮನೆಮದ್ದನ್ನು ಫಾಲೋ ಮಾಡುವ ಮೂಲಕ ತ್ವಚೆ ಮೃದುವಾಗಿ, ಹೊಳೆಯುವಂತೆ ಮಾಡಬಹುದು. ಅಂದಹಾಗೆ ರಾತ್ರಿ ಮಲಗುವ ಮೊದಲು ಉಗುರು ಬೆಚ್ಚಗಿನ ನೀರಿನ ಜೊತೆಗೆ ಕೆಲವು ನೈಸರ್ಗಿಕ ಪದಾರ್ಥ ಸೇವಿಸುವುದರಿಂದ ದೇಹವು ಡಿಟಾಕ್ಸಿಫೈ ಆಗುತ್ತದೆ. ತ್ವಚೆಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಈ ವಿಧಾನವು ಸುಲಭ ಮಾತ್ರವಲ್ಲದೆ, ತುಂಬಾ ಪರಿಣಾಮಕಾರಿಯಾಗಿದೆ. ಇದು ಮುಖವನ್ನು ಫಳ ಫಳ ಹೊಳೆಯುವಂತೆ ಮಾಡುವುದಲ್ಲದೆ, ತ್ವಚೆಯೂ ಆರೋಗ್ಯಕರವಾಗಿರುತ್ತದೆ. ಹಾಗಾದ್ರೆ ಯಾವ ಪದಾರ್ಥಗಳು ನಿಮ್ಮ ಮುಖವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತವೆ, ಅದನ್ನು ರಾತ್ರಿ ಯಾವುದರ ಜೊತೆ ಕುಡಿಯಬೇಕು ನೋಡೋಣ..
26
ಉಗುರು ಬೆಚ್ಚಗಿನ ನೀರಿನೊಂದಿಗೆ ಏನು ತೆಗೆದುಕೊಳ್ಳಬೇಕು?
ನೀವು ಒಂದು ಚಮಚ ತುಪ್ಪ, ನಿಂಬೆ ರಸ ಅಥವಾ ಜೇನುತುಪ್ಪ...ಇವುಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಬೆರೆಸಿ ಉಗುರು ಬೆಚ್ಚಗಿನ ನೀರನಲ್ಲಿ ಕುಡಿಯಬಹುದು. ಈ ಮೂರು ಪದಾರ್ಥಗಳು ಚರ್ಮಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಹೇಳಲಾಗಿದೆ.
36
ಇವುಗಳ ಕೆಲಸವೇನು?
ತುಪ್ಪ: ಚರ್ಮವನ್ನು ಒಳಗಿನಿಂದ ಪೋಷಿಸುತ್ತದೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ನಿಂಬೆಹಣ್ಣು: ವಿಟಮಿನ್ ಸಿ ಯಿಂದ ಸಮೃದ್ಧವಾಗಿದ್ದು, ಇದು ಚರ್ಮವನ್ನು ಕಾಂತಿಯುತವಾಗಿಸುತ್ತದೆ. ಜೇನುತುಪ್ಪ: ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಚರ್ಮವನ್ನು ಹೊಳೆಯುವಂತೆ ನೋಡಿಕೊಳ್ಳುತ್ತದೆ.
46
ಮುಖದಲ್ಲಿ ಹೊಳಪು ಬರುವುದು ಹೇಗೆ?
ರಕ್ತ ಪರಿಚಲನೆ ಸುಧಾರಣೆ: ಉಗುರು ಬೆಚ್ಚಗಿನ ನೀರು ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಆಮ್ಲಜನಕ ಮತ್ತು ಪೋಷಕಾಂಶಗಳು ಚರ್ಮವನ್ನು ಸುಲಭವಾಗಿ ತಲುಪಲು ಅನುವು ಮಾಡಿಕೊಡುತ್ತದೆ. ಹೊರಹೋಗುತ್ತವೆ ವಿಷಕಾರಿ ವಸ್ತುಗಳು: ಇದು ದೇಹವನ್ನು ನಿರ್ವಿಷಗೊಳಿಸುತ್ತದೆ. ಚರ್ಮವನ್ನು ಸ್ವಚ್ಛ ಮಾಡಿ ಹೊಳೆಯುವಂತೆ ಮಾಡುತ್ತದೆ. ಜೀರ್ಣಕ್ರಿಯೆ ಸುಧಾರಣೆ: ಹೊಟ್ಟೆ ಶುದ್ಧವಾಗಿದ್ದಾಗ ಅದರ ಪರಿಣಾಮ ಮುಖದ ಮೇಲೂ ಗೋಚರಿಸುತ್ತದೆ, ಮೊಡವೆಗಳು ಮತ್ತು ಮಂದತೆ ಕಡಿಮೆಯಾಗುತ್ತದೆ. ಚೆನ್ನಾಗಿರುತ್ತದೆ ನಿದ್ರೆ : ಒಳ್ಳೆಯ ನಿದ್ರೆ ತ್ವಚೆಯನ್ನ ಸರಿಪಡಿಸುತ್ತೆ ಮತ್ತು ಮುಖವು ಫ್ರೆಶ್ ಆಗಿ ಕಾಣುತ್ತದೆ.
56
ಸೇವಿಸುವುದು ಹೇಗೆ?
ರಾತ್ರಿ ಮಲಗುವ 30 ನಿಮಿಷಗಳ ಮೊದಲು ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯಿರಿ. ತುಪ್ಪ, ನಿಂಬೆ ಅಥವಾ ಜೇನುತುಪ್ಪ...ಇದು ನಿಮ್ಮ ಆಯ್ಕೆ. ಯಾವುದಾದರೂ ಒಂದನ್ನ ಸೇರಿಸಿ. ಚಹಾದಂತೆ ನಿಧಾನವಾಗಿ ಕುಡಿಯಿರಿ. ಇದರ ನಂತರ ಯಾವುದೇ ಹೆವಿ ಫುಡ್ ಸೇವಿಸಬೇಡಿ.
66
ದುಬಾರಿ ಉತ್ಪನ್ನಗಳ ಅಗತ್ಯವಿಲ್ಲ
ಹೊಳೆಯುವ ಚರ್ಮವನ್ನು ಪಡೆಯಲು ದುಬಾರಿ ಉತ್ಪನ್ನಗಳ ಅಗತ್ಯವಿಲ್ಲ, ಕೇವಲ ಒಂದು ಲೋಟ ಉಗುರು ಬೆಚ್ಚಗಿನ ನೀರು ಮತ್ತು ಅದಕ್ಕೆ ಸೇರಿಸಲಾದ ನೈಸರ್ಗಿಕ ಪದಾರ್ಥವು ನಿಮ್ಮ ಚರ್ಮವನ್ನು ಒಳಗಿನಿಂದ ಹೊಳೆಯುವಂತೆ ಮಾಡುತ್ತದೆ. ಈ ವಿಧಾನವು ಸುಲಭ ಮಾತ್ರವಲ್ಲ, ಸುರಕ್ಷಿತ ಮತ್ತು ಪರಿಣಾಮಕಾರಿಯೂ ಆಗಿದೆ.