ಅಪ್ಪಟ ಚಿನ್ನದ ದಾರದಿಂದ ಮಾಡಿದ ಜರಿ ಬಾರ್ಡರ್ ಸೀರೆಯುಟ್ಟು ದೇವತೆಯಂತೆ ಕಂಡ ನೀತಾ ಅಂಬಾನಿ!

First Published | Apr 9, 2024, 1:54 PM IST

ಇತ್ತೀಚಿಗೆ NMACCಯ ಮೊದಲ ವಾರ್ಷಿಕೋತ್ಸವಕ್ಕಾಗಿ ನೀತಾ ಅಂಬಾನಿ ಗ್ರ್ಯಾಂಡ್‌ ಪೈಥಾನಿ ಸೀರೆ ಧರಿಸಿದ್ದರು. ನೀಲಿ ಮತ್ತು ಆರೆಂಜ್‌ ಬಣ್ಣದ ಈ ಗ್ರ್ಯಾಂಡ್ ಸೀರೆ ಕಣ್ಣು ಕೋರೈಸುವಂತಿತ್ತು .ಅಪ್ಪಟ ಚಿನ್ನದ ದಾರದಿಂದಲೇ ಸೀರೆಯ ಜರಿ ಬಾರ್ಡರ್‌ನ್ನು ಸಿದ್ಧಪಡಿಸಲಾಗಿತ್ತು.

ಬಿಲಿಯನೇರ್ ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಯಾವಾಗ್ಲೂ ದುಬಾರಿ ಸೀರೆ, ಕಾಸ್ಟ್ಲೀ ಆಭರಣಗಳನ್ನು ಧರಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಸಮಾರಂಭ, ಪಾರ್ಟಿಗಳಲ್ಲಿ ನೀತಾ ಅಂಬಾನಿಯ ಲುಕ್ ಎಲ್ಲರ ಗಮನ ಸೆಳೆಯುತ್ತದೆ.

ಇತ್ತೀಚಿಗೆ NMACCಯ ಮೊದಲ ವಾರ್ಷಿಕೋತ್ಸವಕ್ಕಾಗಿ ನೀತಾ ಅಂಬಾನಿ ಗ್ರ್ಯಾಂಡ್‌ ಪೈಥಾನಿ ಸೀರೆ ಧರಿಸಿದ್ದರು. ನೀಲಿ ಮತ್ತು ಆರೆಂಜ್‌ ಬಣ್ಣದ ಈ ಗ್ರ್ಯಾಂಡ್ ಸೀರೆ ಕಣ್ಣು ಕೋರೈಸುವಂತಿತ್ತು. ಅಪ್ಪಟ ಚಿನ್ನದ ದಾರದಿಂದಲೇ ಸೀರೆಯ ಜರಿ ಬಾರ್ಡರ್‌ನ್ನು ಸಿದ್ಧಪಡಿಸಲಾಗಿತ್ತು.

Latest Videos


ರಿಲಯನ್ಸ್ ಬ್ರ್ಯಾಂಡ್ ಸ್ವದೇಶ್ ಸಹಯೋಗದೊಂದಿಗೆ ಮಹಾರಾಷ್ಟ್ರದ ಕುಶಲಕರ್ಮಿಗಳು ಈ ದುಬಾರಿ ಸೀರೆಯನ್ನು ನೇಯ್ದಿದ್ದಾರೆ. ನವಿಲು ನೀಲಿ ಬಣ್ಣದ ಸೀರೆಯು ಶುದ್ಧ ಚಿನ್ನದ ಝರಿ ಕೆಲಸಗಳನ್ನು ಮತ್ತು ಅಜಂತಾ ಗುಹೆಗಳನ್ನು ನೆನಪಿಸುವ ಸಂಕೀರ್ಣವಾದ ಹೂವಿನ ಮತ್ತು ಪಕ್ಷಿ ವಿನ್ಯಾಸಗಳನ್ನು ಒಳಗೊಂಡಿದೆ. 

ಜೊತೆಗೆ, ಸೀರೆಯು ಕಮಲದ ಚಿತ್ರವನ್ನು ಹೊಂದಿದೆ. NMACCಯ ಮೊದಲ ವಾರ್ಷಿಕೋತ್ಸವಕ್ಕಾಗಿ ನೀತಾ ಅಂಬಾನಿ ಬನಾರಸಿ ಸೀರೆಯನ್ನು ಧರಿಸಿದ್ದರು. ಇದನ್ನು ತಯಾರಿಸಲು ಬರೋಬ್ಬರಿ 40 ದಿನದ ಸಮಯ ತಗುಲಿತ್ತು.

ಇತ್ತೀಚಿಗೆ 71ನೇ ವಿಶ್ವ ಸುಂದರಿ ಸ್ಪರ್ಧೆಯ ಸಂದರ್ಭದಲ್ಲಿ, ನೀತಾ ಅಂಬಾನಿ ಅವರನ್ನು ಪರೋಪಕಾರಿ ಕೆಲಸಕ್ಕಾಗಿ 'ಮಾನವೀಯ ಪ್ರಶಸ್ತಿ' ನೀಡಿ ಗೌರವಿಸಲಾಗಿತ್ತು.

ಈ ಸಮಾರಂಭಕ್ಕೆ ನೀತಾ ಕಪ್ಪು ವರ್ಣದ ಕೈಮಗ್ಗದ ಸೀರೆಯನ್ನು ಆರಿಸಿಕೊಂಡಿದ್ದರು. ಜೊತೆಗೆ ಮೊಘಲ್ ಚಕ್ರವರ್ತಿ ಕಾಲದ .200 ಕೋಟಿ ರೂ. ಮೌಲ್ಯದ ಬಾಜುಬಂಧ್ ಧರಿಸಿದ್ದರು.

ನೀತಾ ಅಂಬಾನಿ ಬೃಹತ್ ಸೀರೆಗಳ ಸಂಗ್ರಹವನ್ನು ಹೊಂದಿದ್ದಾರೆ. ರಿಲಯನ್ಸ್ ಔತಣಕೂಟಕ್ಕಾಗಿ, ನೀತಾ ಕೆಂಪು ಬಣ್ಣದ ಕಾಂಚೀಪುರಂ ಸೀರೆಯನ್ನು ಧರಿಸಿದ್ದರು. ಅದನ್ನು ಸ್ವದೇಶ್ ಕುಶಲಕರ್ಮಿಗಳು ರಚಿಸಿದ್ದರು. ಇದು ಅದ್ಧೂರಿ ಕಸೂತಿಯನ್ನು ಒಳಗೊಂಡಿತ್ತು. ದೇವನಾಗರಿಯಲ್ಲಿ ಬರೆದಿರುವ ಅನಂತ್ ಮತ್ತು ರಾಧಿಕಾ ಅವರ ಹೆಸರಿನ ಮೊದಲಕ್ಷರ ಸೆರಗಲ್ಲಿತ್ತು.

ಗುಜರಾತ್‌ನ ಜಾಮ್ನಾನಗರದಲ್ಲಿ ನಡೆದ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲೂ ನೀತಾ ಅಂಬಾನಿ ದುಬಾರಿ ಸೀರೆಗಳನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದರು.

click me!