National Handloom Day: ಕೈಮಗ್ಗದ ಸೀರೆಯಲ್ಲಿ ಮಿಂಚಿದ ಬಾಲಿವುಡ್ ತಾರೆಯರು

First Published Aug 8, 2022, 12:09 PM IST

ಭಾರತದ ಯಾವುದೇ ರಾಜ್ಯಕ್ಕೆ ಪ್ರಯಾಣಿಸಿದರೂ ನಾವು ಅತ್ಯಂತ ಸುಂದರವಾದ ಕೈಮಗ್ಗ ಜವಳಿಗಳನ್ನು ನೋಡಬಹುದು. ಭಾರತೀಯ ಸಂಸ್ಕೃತಿಯಲ್ಲಿ ಮಗ್ಗದ ಬಟ್ಟೆಗಳಿಗೆ ಅತಿ ಹೆಚ್ಚಿನ ಪ್ರಾಶಸ್ತ್ಯವುದೆ. ಪ್ರತಿ ವರ್ಷ ಆಗಸ್ಟ್ 7 ರಂದು, ನಾವು ಎಲ್ಲಾ ಭಾರತೀಯ ಕರಕುಶಲ ಸಮುದಾಯಗಳ ಅಚಲ ಮನೋಭಾವವನ್ನು ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಆಚರಿಸುತ್ತೇವೆ. 1905ರಲ್ಲಿ ಈ ದಿನಾಂಕದಂದು ಪ್ರಾರಂಭವಾದ ಸ್ವದೇಶಿ ಆಂದೋಲನವನ್ನು ಸ್ಮರಿಸುತ್ತೇವೆ. 

ವಿದ್ಯಾ ಬಾಲನ್
ವಿದ್ಯಾಬಾಲನ್ ಅವರ ವೈಯುಕ್ತಿಕ ಶೈಲಿಯೇ ಆಕೆ ಪರಮ ಸೀರೆ ಪ್ರೇಮಿ ಎಂಬುದಾಗಿದೆ. ಆಕೆ ಯಾವಾಗಲೂ ಸ್ಟೈಲಿಶ್ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. 2021 ರ ರಾಷ್ಟ್ರೀಯ ಕೈಮಗ್ಗ ದಿನದ ನೆನಪಿಗಾಗಿ, ಅವರು ಹೌಸ್ ಆಫ್ ಉರ್ಮಿಯಿಂದ ಈ ಗುಲಾಬಿ ಬಣ್ಣದ ಚೆಕ್ಡ್ ರಾ ಸಿಲ್ಕ್ ಟೆಂಪಲ್ ಬಾರ್ಡರ್ ಸೀರೆಯನ್ನು ಧರಿಸಿರುವುದನ್ನು ನೋಡಬಹುದು.

ದೀಪಿಕಾ ಪಡುಕೋಣೆ
ಫ್ಯಾಷನ್ ಜಗತ್ತಿನಲ್ಲಿ ದೀಪಿಕಾ ಪಡುಕೋಣೆ ಹೆಚ್ಚು ಹೆಸರು ಪಡೆದುಕೊಂಡಿದ್ದಾರೆ. ಸೀರೆಗಳ ವಿಷಯಕ್ಕೆ ಬಂದಾಗ, ದೀಪಿಕಾ ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಕೈಮಗ್ಗದ ಕಾಂಜೀವರಂ ಸೀರೆಗಳೊಂದಿಗೆ ಆಗಾಗ್ ಫೋಸ್ ಕೊಡುತ್ತಾರೆ. ದಿ ಹೌಸ್ ಆಫ್ ಅಂಗಡಿಯ ಹ್ಯಾಂಡ್‌ಲೂಮ್‌ ಸಾಂಪ್ರದಾಯಿಕ ವಸ್ತ್ರದಲ್ಲಿ, ದೀಪಿಕಾ ರಾಯಲ್‌ ಲುಕ್‌ ಎಲ್ಲರನ್ನೂ ಸೆಳೆದಿತ್ತು.

ರೇಖಾ
ಕೈಮಗ್ಗದ ಸೀರೆಗಳ ವಿಷಯಕ್ಕೆ ಬಂದಾಗ ಬಾಲಿವುಡ್ ದಿವಾ ರೇಖಾರನ್ನು ಉಲ್ಲೇಖಿಸದೆ ಇರಲು ಸಾಧ್ಯವಿಲ್ಲ. ಸಾಂಪ್ರದಾಯಿಕ ಮತ್ತು ಅತ್ಯಂತ ಸಂಕೀರ್ಣವಾದ ಕಾಂಜೀವರಂ ಕೈಮಗ್ಗದ ಸೀರೆಗಳನ್ನು ರೇಖಾ ಆಗಾಗ ಉಟ್ಟು ಮಿಂಚುತ್ತಾರೆ. ಹ್ಯಾಂಡ್‌ಲೂಮ್ ಸೀರೆಗಳಿಗೂ ಅವರು ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ.

ಶ್ರದ್ಧಾ ಕಪೂರ್
ಶ್ರದ್ಧಾ ಕಪೂರ್ ಹೆಚ್ಚಾಗಿ ಮಾಡರ್ನ್‌ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಇತ್ತೀಚಿಗೆ ಅವರು ಧರಿಸಿದ ಹ್ಯಾಂಡ್‌ಲೂಮ್ ಸ್ಯಾರಿ ಎಲ್ಲರ ಗಮನ ಸೆಳೆದಿತ್ತು. 
ಶ್ರದ್ಧಾ ಕಪೂರ್ ಮಹಾರಾಷ್ಟ್ರದ ಸೊಬಗನ್ನು ಬೆರಗುಗೊಳಿಸುವ ನೇರಳೆ ಸಾಂಪ್ರದಾಯಿಕ ಪೈಥಾನಿ ಸೀರೆಯೊಂದಿಗೆ ಕಾಣಿಸಿಕೊಂಡಿದ್ದರು.

ದಿಯಾ ಮಿರ್ಜಾ
ಕೈಮಗ್ಗದ ನೇಯ್ಗೆ ದಿಯಾ ಮಿರ್ಜಾ ಫೇವರಿಟ್ ಆಗಿದೆ. ಸುಸ್ಥಿರ ಫ್ಯಾಷನ್ ಮತ್ತು ಸಾಂಪ್ರದಾಯಿಕ ಎಥ್ನಿಕ್ ವೇರ್‌ ಹಲವಿದ್ದರೂ ದಿಯಾ ಅತ್ಯಂತ ಸುಂದರವಾದ ಕರಕುಶಲ ರೇಷ್ಮೆಗಳು, ಬನಾರಸಿ ಮೊದಲಾದ ರೀತಿಯ ಸೀರೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅದರಲ್ಲೂ ಸಾಂಪ್ರದಾಯಿಕ ಕೆಂಪು ಬನಾರಸಿ ರೇಷ್ಮೆ ಸೀರೆಯಲ್ಲಿ ಚಿನ್ನದ ಝರಿಯೊಂದಿಗೆ ಮಾವಿನ ಹಣ್ಣಿನ ಡಿಸೈನ್‌ನ ಸೀರೆ ಹೆಚ್ಚು ಅತ್ಯಾಕರ್ಷಕವಾಗಿದೆ

click me!