ರಕ್ಷಾ ಬಂಧನ: ಸಹೋದರಿಗೆ ಗಿಫ್ಟ್ ನೀಡೋ ಬಗ್ಗೆ ಯೋಚ್ನೆ ಬಿಡಿ… ಇಲ್ ನೋಡಿ

First Published Aug 4, 2022, 7:14 PM IST

ಅಣ್ಣ, ತಂಗಿಯರ ಹಬ್ಬವಾದ ರಕ್ಷಾಬಂಧನ ಅಥವಾ ರಾಖಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಉಳಿದಿವೆ. ಆಗಸ್ಟ್ 11ರಂದು ರಕ್ಷಾ ಬಂಧನದ ಹಬ್ಬ ಆಚರಿಸಲಾಗುವುದು. ಅದಕ್ಕಾಗಿ ಎಲ್ಲ ತಯಾರಿ ನಡೆಯುತ್ತಿದೆ. ಈ ದಿನದಂದು, ಸಹೋದರಿ ತನ್ನ ಸಹೋದರನ ಕೈಗೆ ರಾಖಿ ಕಟ್ಟುತ್ತಾಳೆ ಮತ್ತು ಅವನ ಬಾಯಿ ಸಿಹಿ ಮಾಡ್ತಾಳೆ.  ಅದೇ ಸಮಯದಲ್ಲಿ, ಸಹೋದರ ತನ್ನ ಸಹೋದರಿಯನ್ನು ರಕ್ಷಿಸುವ ವಾಗ್ದಾನ ಮಾಡುತ್ತಾನೆ, ಹಾಗೆಯೇ ಅವಳಿಗೆ ವಿವಿಧ ಗಿಫ್ಟ್ ನೀಡುತ್ತಾನೆ. ಆದ್ರೆ ಪ್ರತಿ ಬಾರಿ ರಾಖಿ ಬಂದಾಗ ಹುಡುಗರನ್ನು ಕಾಡೋ ಪ್ರಶ್ನೆ ಎಂದರೆ, ತನ್ನ ಸಹೋದರಿಗೆ ಏನು ಉಡುಗೊರೆ ನೀಡೋದು ಎಂದು. ನೀವು ಸಹ ಇದೇ ಗೊಂದಲದಲ್ಲಿದ್ದರೆ. ಇಲ್ಲಿದೆ ನಿಮಗೆ ಸಹಾಯ ಮಾಡೋ ಟಿಪ್ಸ್. 

ಈ ಬಾರಿ ರಕ್ಷಾ ಬಂಧನ ಹಬ್ಬದ ಸಂಭ್ರಮ ಹೆಚ್ಚಿಸಲು ಮತ್ತು ಸಹೋದರಿಯ ಮುಖದಲ್ಲಿ ನಗು ಮೂಡಿಸಲು ಬಯಸಿದ್ರೆ ಈ ದಿನವನ್ನು ಈ ರೀತಿಯಾಗಿ ವಿಶೇಷವಾಗಿಸಿ. ಈ ಬಾರಿ ರಕ್ಷಾ ಬಂಧನದಂದು ನಿಮ್ಮ ಸಹೋದರಿಗೆ ನೀವು ನೀಡಬಹುದಾದ ಅಂತಹ 10 ಉಡುಗೊರೆಗಳ ಪಟ್ಟಿಯನ್ನು ನಾವಿಲ್ಲಿ ನೀಡಿದ್ದೇವೆ. ಅವುಗಳನ್ನು ಗಿಫ್ಟ್ ಆಗಿ ನೀಡಿ, ಸಹೋದರಿಯನ್ನು ಸಂತೋಷ ಪಡಿಸಿ.

ಬ್ರೇಸ್ ಲೆಟ್ (bracelet)

ನಿಮ್ಮ ಸಹೋದರಿಗೆ ಆಭರಣಗಳನ್ನು ಧರಿಸಲು ಇಷ್ಟವಿದ್ದರೆ, ರಕ್ಷಾ ಬಂಧನದಂದು ನೀವು ಅವಳಿಗೆ ಸುಂದರವಾದ ಸಣ್ಣ ಸ್ಫಟಿಕ ಅಥವಾ ಅಮೆರಿಕನ್ ವಜ್ರದ ಬ್ರೇಸ್ ಲೆಟ್ ನ್ನು ಉಡುಗೊರೆಯಾಗಿ ನೀಡಬಹುದು. ಇದು ಆಕರ್ಷಕವಾಗಿ ಕಾಣುತ್ತೆ ಮತ್ತು ಇದು 500 ರೂ.ಗಳಿಂದ ಪ್ರಾರಂಭವಾಗುತ್ತದೆ.

ಹ್ಯಾಂಡ್ ಬ್ಯಾಗ್ (hand bags)

ಹುಡುಗಿಯರು ವೈವಿಧ್ಯಮಯ ಬ್ಯಾಗ್‌ಗಳನ್ನು ತುಂಬಾ ಇಷ್ಟಪಡುತ್ತಾರೆ. ಇದು ಅವಳಿಗೆ ತುಂಬಾ ಯೂಸ್‌ಫುಲ್ ಆಗಿದೆ, ಏಕೆಂದರೆ ಅದರಲ್ಲಿ ಅವಳು ತನಗೆ ಅಗತ್ಯವಿರುವ ವಸ್ತುಗಳನ್ನು ಕ್ಯಾರಿ ಮಾಡಬಹುದು. ಹಾಗಾಗಿ ನೀವು ನಿಮ್ಮ ಸಹೋದರಿಗೆ ಹ್ಯಾಂಡ್ ಬ್ಯಾಗ್ ಗಿಫ್ಟ್ ಆಗಿ ನೀಡಬಹುದು. ಅವಳು ಶಾಲೆ ಅಥವಾ ಕಾಲೇಜಿಗೆ ಹೋಗುತ್ತಿದ್ದರೆ ನೀವು ಅವಳಿಗೆ ಶೋಲ್ಡರ್ ಬ್ಯಾಗ್ ನೀಡಬಹುದು ಅಥವಾ ಅವಳು ಕೆಲಸಕ್ಕೆ ಹೋಗುತ್ತಿದ್ದರೆ, ನೀವು ಅವಳಿಗೆ ಸುಂದರವಾದ ಹ್ಯಾಂಡ್ ಬ್ಯಾಗ್ ಉಡುಗೊರೆಯಾಗಿ ನೀಡಬಹುದು.

ಬ್ಯಾಂಬೂ ಪ್ಲ್ಯಾಂಟ್ (bamboo plants)

ರಕ್ಷಾ ಬಂಧನದಂದು ಸಹೋದರಿಗೆ ಶೋ ಪ್ಲಾಂಟ್ ನೀಡುವುದರಿಂದ ಅವಳಿಗೆ ಪರಿಸರದ ಬಗ್ಗೆ ಅರಿವು ಮೂಡುವುದು ಮಾತ್ರವಲ್ಲದೆ, ಅದು ಅವಳಿಗೆ ತುಂಬಾ ಒಳ್ಳೆ ಉಡುಗೊರೆಯಾಗಿದೆ. ನೀವು ಸಹೋದರಿಗೆ ಫೆಂಗ್ ಶುಯಿ ಬಿದಿರಿನ ಸಸ್ಯವನ್ನು ನೀಡಬಹುದು. ಇದನ್ನು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ.

ಲಂಚ್ ಬಾಕ್ಸ್ (lunch box)

ನಿಮ್ಮ ಸಹೋದರಿಗಾಗಿ ನೀವು ಕೆಲವು ಉಪಯುಕ್ತ ಉಡುಗೊರೆಗಳನ್ನು ನೀಡಲು ಬಯಸಿದ್ದರೆ, ನೀವು ಅವಳಿಗೆ ಲಂಚ್ ಬಾಕ್ಸ್ ಉಡುಗೊರೆಯಾಗಿ ನೀಡಬಹುದು. ಈ ಲಂಚ್ ಬಾಕ್ಸ್ ಅವರಿಗೆ ಶಾಲೆ, ಕಾಲೇಜು ಕಚೇರಿಗೆ ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತೆ. ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಲಂಚ್ ಬಾಕ್ಸ್ ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದರಲ್ಲಿ ನೀವು ದೀರ್ಘಕಾಲದವರೆಗೆ ಆಹಾರವನ್ನು ಬೆಚ್ಚಗೆ ಮತ್ತು ತಾಜಾವಾಗಿಡಬಹುದು.
 

ಚಾಕೊಲೇಟ್ ಬಾಕ್ಸ್ (chocolate box)

ಚಾಕೊಲೇಟ್ ತಿನ್ನಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ವಿಶೇಷವಾಗಿ ಹುಡುಗಿಯರು ಚಾಕೊಲೇಟ್ ತಿನ್ನಲು ಇಷ್ಟಪಡ್ತಾರೆ. ಹಾಗಾಗಿ, ರಕ್ಷಾ ಬಂಧನದಂದು ನೀವು ನಿಮ್ಮ ಸಹೋದರಿಗೆ ಉತ್ತಮ ಚಾಕೊಲೇಟ್ ಬಾಕ್ಸ್ ಉಡುಗೊರೆಯಾಗಿ ನೀಡಬಹುದು. ಇದು ಅನೇಕ ಫ್ಲೇವರ್ಸ್‌ನ ಟಾಫಿಗಳು ಅಥವಾ ಚಾಕೊಲೇಟ್ ಹೊಂದಿರುತ್ತವೆ.

ವಾಚ್ (watch)

ರಕ್ಷಾ ಬಂಧನದಂದು ಉಡುಗೊರೆ ನೀಡಲು ವಾಚ್ ಉತ್ತಮ ಆಯ್ಕೆಯಾಗಿದೆ. ನೀವು ನಿಮ್ಮ ಸಹೋದರಿಗೆ ಸ್ಮಾರ್ಟ್ ವಾಚ್ ಅಥವಾ ಡಿಜಿಟಲ್ ವಾಚ್ ಅಥವಾ ಸಾಂಪ್ರದಾಯಿಕ ವಾಚ್ ಉಡುಗೊರೆಯಾಗಿ ನೀಡಬಹುದು. ಇದು ಅತ್ಯುತ್ತಮ ಉಡುಗೊರೆಯಾಗಿದೆ.

ರೊಬೋಟಿಕ್ ವ್ಯಾಕ್ಯೂಮ್ ಕ್ಲೀನರ್ (robotic vocum cleaner)

ನಿಮ್ಮ ಸಹೋದರಿ ಕೆಲಸ ಮಾಡುವ ಮಹಿಳೆಯಾಗಿದ್ದರೆ ಮತ್ತು ಯಾವಾಗಲೂ ತಮ್ಮ ಮನೆಕೆಲಸದಲ್ಲಿ ನಿರತರಾಗಿದ್ದರೆ. ಅವರಿಗಾಗಿ ಅವರು ಸಮಯ ನೀಡಲು ಸಾಧ್ಯವಿರದೇ ಇದ್ದರೆ, ನೀವು ಅವರಿಗೆ ರೋಬೊಟಿಕ್ ವ್ಯಾಕ್ಯೂಮ್ ಕ್ಲೀನರ್ ಅನ್ನು ಗಿಫ್ಟ್ ಮಾಡಬಹುದು, ಅದು ಅಗತ್ಯಕ್ಕೆ ಅನುಗುಣವಾಗಿ ಮನೆಗೆ ಸಹಾಯ ಮಾಡುತ್ತೆ.

ಹೇರ್ ಸ್ಟೈಲಿಂಗ್ ಕಿಟ್ (hair styling kit)

ಸಹೋದರಿ ತನ್ನ ಕೂದಲಿನ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಸ್ಟೈಲ್ ಮಾಡಲು ಇಷ್ಟಪಟ್ಟರೆ, ನೀವು ಅವಳಿಗಾಗಿ ಫೈವ್-ಇನ್-ಒನ್ ಹೇರ್ ಸ್ಟೈಲಿಂಗ್ ಕಿಟ್ ನೀಡಬಹುದು. ಇದು ಕರ್ಲರ್ ಗಳಿಂದ ಹಿಡಿದು ಸ್ಟ್ರೈಟನರ್‌ಗಳು, ಜಿಗ್-ಜಾಗ್, ಸ್ಮೂತ್ ಕರ್ಲ್ ಎಲ್ಲವನ್ನೂ ಒಳಗೊಂಡಿದೆ. ಇದು ಸಹೋದರಿಗೆ ಬಹಳ ಉಪಯುಕ್ತ ಗಿಫ್ಟ್ ಆಗಬಹುದು.
 

ಬ್ಯೂಟಿ ಪ್ರಾಡಕ್ಟ್ (beauty product)

ಸೌಂದರ್ಯ ಉತ್ಪನ್ನಗಳನ್ನು ಬಳಸಲು ಯಾವ ಹುಡುಗಿ ಇಷ್ಟಪಡೋದಿಲ್ಲ ಹೇಳಿ? ನೀವು ನಿಮ್ಮ ತಂಗಿಗೆ ಅಥವಾ ಅಕ್ಕನಿಗೆ ವಿಶೇಷವಾದದ್ದನ್ನು ತೆಗೆದುಕೊಳ್ಳಲು ಬಯಸಿದರೆ, ಮೇಕಪ್ ಕಿಟ್ ಅಥವಾ ಬ್ಯೂಟಿ ಪ್ರಾಡಕ್ಟ್ ಗಳನ್ನು ಗಿಫ್ಟ್ ಆಗಿ ನೀಡಬಹುದು. ಇದರಿಂದ ಅವರು ಸಹ ತುಂಬಾನೆ ಖುಷಿಯಾಗುತ್ತಾರೆ. 

ಟೆಡ್ಡಿ ಬೇರ್ (teddy bear)

ರಕ್ಷಾ ಬಂಧನದಂದು ಸಹೋದರಿಯರಿಗೆ ಉಡುಗೊರೆ ನೀಡಲು ಯಾವುದೇ ಮೃದುವಾದ ಆಟಿಕೆ ಅತ್ಯುತ್ತಮ ಆಯ್ಕೆಯಾಗಿದೆ. ನಿಮ್ಮ ಸಹೋದರಿಗೆ ಟೆಡ್ಡಿ ಬೇರ್ ತುಂಬಾ ಇಷ್ಟವಿದ್ದರೆ, ನಿಮ್ಮ ಬಜೆಟ್‌ಗೆ ಅನುಗುಣವಾಗಿ ನೀವು ನಿಮ್ಮ ಸಹೋದರಿಗೆ ಸಣ್ಣ ಅಥವಾ ದೊಡ್ಡ ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡಬಹುದು ಮತ್ತು ಅವಳ ಮುಖದಲ್ಲಿ ದೊಡ್ಡ ನಗುವನ್ನು ತರಬಹುದು.

click me!