ಎರಡು ಹೊಲಿಗೆ ಯಂತ್ರಗಳಿಂದ ಆರಂಭಿಸಿ 1000 ಕೋಟಿ ಒಡೆತಿಯರಾದ ಭಾರತದ ಶೇಷ್ಠ ಫ್ಯಾಷನ್ ಡಿಸೈನರ್

First Published | Mar 12, 2024, 6:04 PM IST

ಸ್ಟೈಲ್ ವಿಷಯಕ್ಕೆ ಬಂದಾಗ, ನಟಿಯರ ಫೋಟೋಗಳು ನೆನಪಿಗೆ ಬರುತ್ತವೆ. ಆದರೆ ಅವರು ಧರಿಸುವ ಬಟ್ಟೆಗಳ ವಿನ್ಯಾಸಕರು ನಿಜವಾದ ಚಪ್ಪಾಳೆಗೆ ಅರ್ಹರು ಅಲ್ವಾ? ತಮ್ಮ ಅದ್ಭುತ ವಿನ್ಯಾಸಗಳಿಂದ ಯಾರಿಗಾದರೂ ಸುಂದರವಾದ ಲುಕ್ ನೀಡುವ 5 ಭಾರತೀಯ ಫ್ಯಾಷನ್ ಡಿಸೈನರ್ ಪಟ್ಟಿಯನ್ನು ನಾವು ತಂದಿದ್ದೇವೆ. ಸಣ್ಣ ಬ್ಯುಸಿನೆಸ್‌ನಿಂದ ಆರಂಭವಾಗಿ, ದೊಡ್ಡ ಬ್ಯುಸಿನೆಸ್ ವುಮೆನ್ ಆಗಿ ಬೆಳೆಯುವವರೆಗೆ ಇವರ ಸಾಧನೆ ಬಗ್ಗೆ ತಿಳಿಯೋಣ. 
 

ಕಾರ್ಪೊರೇಟ್ ವಲಯ ಅಥವಾ ಸರ್ಕಾರಿ ಉದ್ಯೋಗಗಳಿಂದ ಹಿಡಿದು ಫ್ಯಾಷನ್ ಡಿಸೈನಿಂಗ್ ವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಈಗ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸುತ್ತಿದ್ದಾರೆ. ಮಹಿಳೆಯರು ಸ್ಮಾರ್ಟ್, ನವೀನ, ಸೃಜನಶೀಲ (Creative) ಮತ್ತು ಸಂವೇದನಾಶೀಲರಾಗುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಗುರುತನ್ನು ಮಾಡಿದ್ದಾರೆ. ಇವತ್ತು ನಾವು ಫ್ಯಾಷನ್ ಕ್ಷೇತ್ರದಲ್ಲಿ (fashion industry)ಸಾಧನೆ ಮಾಡಿದ ಮಹಿಳೆಯರ ಬಗ್ಗೆ ತಿಳಿಯೋಣ. 

ಭಾರತದ ಈ ಫ್ಯಾಷನ್ ಡಿಸೈನರ್ ಗಳು (fashion designer) ವಿಶ್ವಾದ್ಯಂತ ಖ್ಯಾತಿ ಗಳಿಸಿದ್ದಾರೆ, ಕೋಟಿಗಳ ನಿವ್ವಳ ಮೌಲ್ಯವನ್ನು ಗಳಿಸಿದ ಡಿಸೈನರ್ಸ್ ಇವರು. ಆದರೆ ಅವರು ಇದೆಲ್ಲವನ್ನೂ ಸುಲಭವಾಗಿ ಗಳಿಸಿಲ್ಲ. ಅವರೆಲ್ಲರೂ ತಮ್ಮ ಕೆಲಸಕ್ಕೆ ಮಾನ್ಯತೆ ಪಡೆಯಲು ಬಹಳಷ್ಟು ಶ್ರಮಿಸಿದ್ದಾರೆ. ಇತರರು ಸಹ ಈ ಮಹಿಳೆಯರಿಂದ ಸ್ಫೂರ್ತಿ ಪಡೆಯಲು ಇದು ಕಾರಣ. ಅಂತಹ 5 ಪ್ರಸಿದ್ಧ ಮತ್ತು ಸ್ಪೂರ್ತಿದಾಯಕ ಫ್ಯಾಷನ್ ಡಿಸೈನರ್ ಬಗ್ಗೆಯೂ ನಿಮಗೆ ತಿಳಿದಿದೆ. 

Tap to resize

ರಿತು ಕುಮಾರ್ (Ritu Kumar)
ಖ್ಯಾತ ಫ್ಯಾಷನ್ ಡಿಸೈನರ್ ರಿತು ಕುಮಾರ್ ಮಹಿಳಾ ಡಿಸೈನರ್ (fasshion designer) ಆಗಿದ್ದು, ಅವರು ಭಾರತೀಯ ಸಂಸ್ಕೃತಿಗೆ ಹೊಸ ಲುಕ್ ನೀಡಿದ್ದಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದ್ದಾರೆ. ಕೋಲ್ಕತ್ತಾದ ಸಣ್ಣ ಪಟ್ಟಣದಿಂದ ಕೇವಲ 50 ಸಾವಿರ ರೂಪಾಯಿಗಳೊಂದಿಗೆ ವ್ಯವಹಾರ ಪ್ರಾರಂಭಿಸಿದ ರಿತು ಕುಮಾರ್ ಇಂದು ಕೋಟಿಗಳನ್ನು ಗಳಿಸುತ್ತಿದ್ದಾರೆ.

ಈ ಪ್ರಸಿದ್ಧ ಡಿಸೈನರ್ ಉಡುಪುಗಳು ಅನೇಕ ಫ್ಯಾಷನ್ ಶೋಗಳು ಮತ್ತು ರೆಡ್ ಕಾರ್ಪೆಟ್ ಗಳಲ್ಲಿ ಕಂಡುಬರುತ್ತವೆ. ಅವರ ಕ್ಲೈಂಟ್ ಲಿಸ್ಟ್ ನಲ್ಲಿ ಮಾಧುರಿ ದೀಕ್ಷಿತ್ ನೇನೆ, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ, ಕೃತಿ ಸನೋನ್, ತಾಪ್ಸಿ ಪನ್ನು ಮತ್ತು ವಿದ್ಯಾ ಬಾಲನ್ ಅವರಂತಹ ನಟಿಯರು ಸೇರಿದ್ದಾರೆ. ಅಷ್ಟೇ ಅಲ್ಲ, ಬ್ರಿಟನ್ ರಾಜಕುಮಾರಿ ಡಯಾನಾ ರಿತು ಕುಮಾರ್ ಅವರ ವಿನ್ಯಾಸದ ಬಟ್ಟೆಗಳ ಅಭಿಮಾನಿಯಾಗಿದ್ದರು. ಇಂಟರ್ನೆಟ್ ಪ್ರಕಾರ, ಈ ಫ್ಯಾಷನ್ ಡಿಸೈನರ್ ನಿವ್ವಳ ಮೌಲ್ಯವು 3 ಸಾವಿರ ಕೋಟಿ ರೂ.ಗಿಂತ ಹೆಚ್ಚಾಗಿದೆ. 
 

ಮಸಾಬಾ ಗುಪ್ತಾ (Masaba Gupta)
ಹಿಂದಿ ಚಿತ್ರರಂಗದ ಖ್ಯಾತ ನಟಿ ನೀನಾ ಗುಪ್ತಾ ಅವರ ಪುತ್ರಿ ಮಸಾಬಾ ಗುಪ್ತಾ ಪ್ರಸಿದ್ಧ ಫ್ಯಾಷನ್ ಡಿಸೈನರ್. ಚಲನಚಿತ್ರಗಳಲ್ಲಿ ನಟಿಸುವ ಕನಸು ಕಂಡಿದ್ದ ಈ ಸ್ಟಾರ್ಕಿಡ್, ಫ್ಯಾಷನ್ ಜಗತ್ತಿಗೆ ಕಾಲಿಡಲು ನಿರ್ಧರಿಸಿದಾಗ, ಅದು ಅವಳಿಗೆ ಸುಲಭವಾಗಿರಲಿಲ್ಲ. ಇಂದು ಮಸಾಬಾ ದೇಶಾದ್ಯಂತ ಮಳಿಗೆಗಳನ್ನು ಹೊಂದಿದ್ದಾರೆ ಮತ್ತು ಅವರ ಗ್ರಾಹಕರ ಪಟ್ಟಿಯಲ್ಲಿ ಅನೇಕ ತಾರೆಯರಿದ್ದಾರೆ. ಈ ಜನಪ್ರಿಯತೆಯು ಅವರನ್ನು 100 ಕೋಟಿ ರೂ.ಗಿಂತ ಹೆಚ್ಚಿನ ನಿವ್ವಳ ಮೌಲ್ಯದ ಮಾಲೀಕರನ್ನಾಗಿ ಮಾಡಿದೆ.

ನೀತಾ ಲುಲ್ಲಾ (Neeta Lulla)
ಕೋಟಿ ನಿವ್ವಳ ಮೌಲ್ಯವನ್ನು ಹೊಂದಿರುವ ನೀತಾ ಲುಲ್ಲಾ ಪ್ರಸಿದ್ಧ ಭಾರತೀಯ ಫ್ಯಾಷನ್ ಡಿಸೈನರ್ ಆಗಿದ್ದು, 'ನೀತಾ ಲುಲ್ಲಾ ಫ್ಯಾಷನ್ ಲೇಬಲ್' ಸ್ಥಾಪಕರಾಗಿದ್ದಾರೆ. ಹೆಚ್ಚಿನ ಬಾಲಿವುಡ್ ನಟಿಯರು ನೀತಾ ಅವರ ಡಿಸೈನರ್ ಬಟ್ಟೆಗಳನ್ನು ಧರಿಸಿ ಚಿತ್ರದಲ್ಲಿ ಗ್ಲಾಮರಸ್ ಆಗಿ ಕಾಣೋದನ್ನು ನೀವೂ ಕಾಣಬಹುದು. ನೀತಾ ಈವರೆಗೆ 300ಕ್ಕೂ ಹೆಚ್ಚು ಚಿತ್ರಗಳಿಗೆ ವಸ್ತ್ರವಿನ್ಯಾಸ (Fashion Design) ಮಾಡಿದ್ದಾರೆ. ನೀತಾಳ ವಿನ್ಯಾಸಗಳು ಜನರಿಗೆ ತುಂಬಾನೆ ಇಷ್ಟವಾಗಿವೆ. ಐಶ್ವರ್ಯಾ ರೈ ಅವರ ಮದುವೆಯ ಸೀರೆಯನ್ನು ಕೂಡ ನೀತಾ ಸಿದ್ಧಪಡಿಸಿದ್ದು.

ಅನಾಮಿಕಾ ಖನ್ನಾ (Anamika Khanna)
ರಾಜಸ್ಥಾನ ಮೂಲದ ಅನಾಮಿಕಾ ಖನ್ನಾ ಕೂಡ ಫ್ಯಾಷನ್ ಉದ್ಯಮದ ಪ್ರಸಿದ್ಧ ಡಿಸೈನರ್ ಪಟ್ಟಿಯಲ್ಲಿ ಸೇರಿದ್ದಾರೆ. ಅನಾಮಿಕಾ ತನ್ನ ವಿನ್ಯಾಸಗಳಿಗೆ ರಾಯಲ್ ಟಚ್ ನೀಡಲು ಪ್ರಸಿದ್ಧ. ಬಾಲಿವುಡ್ನ ಖ್ಯಾತ ನಟಿಯರಿಂದ ಹಿಡಿದು ಅಂಬಾನಿ ಕುಟುಂಬದ ಮಹಿಳೆಯರವರೆಗೆ, ಇವರ ಡಿಸೈನರ್ ವೇರ್ ಹೆಚ್ಚಿನ ಜನರ ಅಚ್ಚುಮೆಚ್ಚು. 
 

ಅನಾಮಿಕಾ ಖನ್ನಾ ಮೌಸಮ್, ಫ್ಯಾಶನ್, ಆಯೆಷಾ ಮತ್ತು ಭಾಗ್ ಮಿಲ್ಖಾ ಭಾಗ್ ನಂತಹ ಅನೇಕ ಚಲನಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಇಂದು, ಅನಾಮಿಕಾ ಭಾರತದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಒಂದು ಹೆಸರು. ಈ ಆಧಾರದ ಮೇಲೆ, ಅವರ ನಿವ್ವಳ ಮೌಲ್ಯವು 600 ಕೋಟಿ ರೂ.ಗಿಂತ ಹೆಚ್ಚಾಗಿದೆ. 
 

ಅನಿತಾ ಡೋಂಗ್ರೆ (Anita Dongre)
ದೇಶದ ಅತ್ಯಂತ ಪ್ರಸಿದ್ಧ ಮತ್ತು ಶ್ರೀಮಂತ ಫ್ಯಾಷನ್ ವಿನ್ಯಾಸಕರಲ್ಲಿ ಒಬ್ಬರಾದ ಅನಿತಾ ಡೋಂಗ್ರೆ ವಿನ್ಯಾಸಗೊಳಿಸಿದ ಬಟ್ಟೆಗಳು ಅಂಬಾನಿ ಅಥವಾ ಬಾಲಿವುಡ್ ನಟಿಯರಾಗಿರಲಿ ಅಥವಾ ಅಂತಾರಾಷ್ಟ್ರೀಯ ಪಾಪ್ ಗಾಯಕಿ ಬೆಯೋನ್ಸ್  ಅವರಿಗೂ ಬಹಳ ಇಷ್ಟ. 1995 ರಲ್ಲಿ, ಅನಿತಾ ತನ್ನ ಫ್ಯಾಷನ್ ಲೇಬಲ್ ಅನಿತಾ ಡೋಂಗ್ರೆ ಲಿಮಿಟೆಡ್ ಅನ್ನು ಸ್ಥಾಪಿಸಿದರು. ಕೇವಲ ಎರಡು ಹೊಲಿಗೆ ಯಂತ್ರಗಳೊಂದಿಗೆ ತನ್ನ ಪ್ರಯಾಣ ಪ್ರಾರಂಭಿಸಿದ ಅನಿತಾ, ಇಂದು 1000 ಕೋಟಿಗೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. 
 

Latest Videos

click me!