ಅಂಬಾನಿ ಸೊಸೆ ಅಂದ್ರೆ ಸುಮ್ನೇನಾ, ಗ್ರ್ಯಾಂಡ್‌ ಲೆಹಂಗಾದಲ್ಲಿ ಶ್ಲೋಕಾ ಮೆಹ್ತಾ ಬ್ಯೂಟಿ ಯಾವ ಸೆಲೆಬ್ರಿಟಿಗೂ ಕಮ್ಮಿಯಿಲ್ಲ!

First Published | Feb 18, 2024, 1:14 PM IST

ಅಂಬಾನಿ ಮನೆಯ ಮಹಿಳಾ ಮಣಿಗಳು ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಫೇಮಸ್‌. ನೀತಾ ಅಂಬಾನಿ, ಇಶಾ ಅಂಬಾನಿ, ಶ್ಲೋಕಾ ಮೆಹ್ತಾ, ರಾಧಿಕಾ ಮರ್ಚೆಂಟ್ ಆಗಾಗ ದುಬಾರಿ ಬೆಲೆಯ ಡ್ರೆಸ್‌ನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡುತ್ತಾರೆ.  ಬ್ಯೂಟಿಯಲ್ಲೂ ಸೆಲೆಬ್ರಿಟಿಗಳೂ ನಾಚುಂತಿದ್ದಾರೆ. ಅದರಲ್ಲೂ ಇತ್ತೀಚಿಗಿನ ಶ್ಲೋಕಾ ಮೆಹ್ತಾ ಫೋಟೋಸ್ ಎಲ್ಲರನ್ನೂ ಬೆರಗಾಗಿಸುವಂತಿದೆ.

ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಭಾರತದ ಅತಿದೊಡ್ಡ ಉದ್ಯಮಗಳಲ್ಲಿ ಒಂದಾಗಿದೆ. ರಿಲಯನ್ಸ್ ಹಲವಾರು ಅಂಗ ಸಂಸ್ಥೆಗಳು ಒಂದು ದಿನಕ್ಕೆ ಕೋಟಿಗಟ್ಟಲೆ ಗಳಿಸುತ್ತದೆ. ಅಂಬಾನಿ ಕುಟುಂಬವು ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದೆ. 

ಅಂಬಾನಿ ಫ್ಯಾಮಿಲಿ ಯಾವಾಗಲೂ ಗ್ರ್ಯಾಂಡ್ ಪಾರ್ಟಿ, ಪ್ರೋಗ್ರಾಂಗಳನ್ನು ಆಯೋಜಿಸುತ್ತಲೇ ಇರುತ್ತಾರೆ. ಮಾತ್ರವಲ್ಲ ಆಗಾಗ ದುಬಾರಿ ಕಾರು, ಜೆಟ್‌ಗಳನ್ನು ಖರೀದಿಸಿ ಸುದ್ದಿಯಾಗುತ್ತಾರೆ. ಅಂಬಾನಿ ಮನೆಯ ಮಹಿಳಾ ಮಣಿಗಳು ಸಹ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಫೇಮಸ್‌.

Latest Videos


ನೀತಾ ಅಂಬಾನಿ, ಇಶಾ ಅಂಬಾನಿ, ಅಂಬಾನಿ ಸೊಸೆಯರಾದ ಶ್ಲೋಕಾ ಮೆಹ್ತಾ, ರಾಧಿಕಾ ಮರ್ಚೆಂಟ್ ಆಗಾಗ ದುಬಾರಿ ಬೆಲೆಯ ಡ್ರೆಸ್‌ನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡುತ್ತಾರೆ. ಬ್ಯೂಟಿಯಲ್ಲೂ ಇವರೇನು ಹಿಂದೆ ಬಿದ್ದಿಲ್ಲ. ಸೆಲೆಬ್ರಿಟಿಗಳೂ ನಾಚುಂತಿದ್ದಾರೆ. 

ಅಂಬಾನಿ ಹಿರಿ ಸೊಸೆ ಶ್ಲೋಕಾ ಮೆಹ್ತಾ, ತಮ್ಮ ಸೊಗಸಾದ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ವಿನ್ಯಾಸಕಿ ಅನಾಮಿಕಾ ಖನ್ನಾ ಅವರ ಅತ್ಯಾಕರ್ಷಕ ಗೋಲ್ಡನ್ ಲೆಹೆಂಗಾದಲ್ಲಿ ಗಮನ ಸೆಳೆದರು.

ಸಂಕೀರ್ಣವಾದ ಕಸೂತಿ ಬಟ್ಟೆ, ಬ್ಲಶ್ ಪಿಂಕ್ ದುಪ್ಪಟ್ಟಾದೊಂದಿಗೆ ಸಾಂಪ್ರದಾಯಿಕ ಮತ್ತು ಮಾಡರ್ನ್‌ ಜ್ಯುವೆಲ್ಲರಿ ಧರಿಸಿ ಮಿಂಚಿದರು.

ಪೀಚ್ ಲೆಹಂಗಾಕ್ಕೆ ಪಚ್ಚೆ ಕಲ್ಲುಗಳನ್ನು ಹೊದಿಸಿದ ಗ್ರ್ಯಾಂಡ್ ನೆಕ್ಲೇಸ್ ಹಾಗೂ ಮ್ಯಾಚಿಂಗ್‌ ಇಯರಿಂಗ್‌ಗಳನ್ನು ಧರಿಸಿದ್ದರು. ದೊಡ್ಡದಾದ ಉಂಗುರ ಮತ್ತು ಬಳೆಗಳನ್ನು ಒಳಗೊಂಡ ಸ್ಟೇಟ್‌ಮೆಂಟ್ ಡೈಮಂಡ್ ನೆಕ್ಲೇಸ್‌ ಸಂಪೂರ್ಣ ಲುಕ್ ಅದ್ಭುತವಾಗಿ ಕಾಣುವಂತೆ ಮಾಡಿತ್ತು. 

ಶ್ಲೋಕಾ ಮೆಹ್ತಾ ಅವರ ಫ್ಯಾಶನ್ ಸೆನ್ಸ್ ಉತ್ಕೃಷ್ಟತೆಯನ್ನು ಹೊರಹಾಕುತ್ತದೆ. ಸಾಂಪ್ರದಾಯಿಕ ಲೆಹೆಂಗಾಗಳಲ್ಲಾಗಲಿ ಅಥವಾ ಮಾಡರ್ನ್‌ ಡ್ರೆಸ್‌ನಲ್ಲೂ ಅಂಬಾನಿ ಹಿರಿ ಸೊಸೆ ಸಲೀಸಾಗಿ ಗಮನ ಸೆಳೆಯುತ್ತಾರೆ.

ಬಾಲಿವುಡ್ ಸೆಲೆಬ್ರಿಟಿಗಳ ಫ್ಯಾಷನ್‌ ಕ್ರೇಜ್‌ ಮಧ್ಯೆಯೂ ಅಂಬಾನಿ ಸೊಸೆ ಶ್ಲೋಕಾ ಮೆಹ್ತಾ ಫ್ಯಾಷನ್ ಐಕಾನ್ ಆಗಿ ಗುರುತಿಸಲ್ಪಟ್ಟಿದ್ದಾರೆ.

click me!