ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ಮಿಂಚುತ್ತಿರುವ ನಟಿ ಚಾರು ಉರ್ಫ್ ಮೌನ ಗುಡ್ಡೆಮನೆ. ಯಾವಾಗ್ಲೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಡಿಶನಲ್ ಹಾಗೂ ಮಾಡರ್ನ್ ಡ್ರೆಸ್ನಲ್ಲಿ ಫೋಟೋಗಳನ್ನು ಶೇರ್ ಮಾಡ್ತಿರ್ತಾರೆ.
ಇತ್ತೀಚಿಗೆ ಬ್ಲ್ಯಾಕ್ ಅಂಡ್ ರೆಡ್ ಕಲರ್ ಸೀರೆಯುಟ್ಟು ಮುದ್ದಾಗಿ ಫೋಸ್ ಕೊಟ್ಟಿದ್ದಾರೆ. ನೆಟ್ಟಿಗರು ಈ ಫೋಟೋಸ್ಗೆ ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿಕೊಟ್ಟಿದ್ದಾರೆ. ಕ್ಯೂಟ್, ಬ್ಯೂಟಿಫುಲ್, ಪ್ರೆಟ್ಟಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಇನ್ನು ಕೆಲವು ಅಭಿಮಾನಿಗಳು, 'ಸೂಪರ್ ಫೋಟೋ ಮತ್ತು ಫೋಟೋಗ್ರಾಫರ್, ಹಾಗೆಯೇ ರಿತ್ವಿಕ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡಿ' ಎಂದು ಹೇಳಿದ್ದಾರೆ. ಮತ್ತೊಬ್ಬರು, 'ಚಾರು-ಚಾರಿ ಫೋಟೋ ಹಾಕಿ ಪ್ಲೀಸ್' ಎಂದು ಕೇಳಿದ್ದಾರೆ.
ಮತ್ತೊಬ್ಬ ಅಭಿಮಾನಿ, 'ರಿತ್ವಿಕ್ ಜೊತೆ ರಿಯಲ್ ಆಗಿ ಮದುವೆ ಆಗಿ. ನಿಮ್ ಜೋಡಿ ಸೂಪರ್' ಎಂದು ಹೊಗಳಿದ್ದಾರೆ. ಸೀರಿಯಲ್ನಲ್ಲಿ ರಿತ್ವಿಕ್ ಕೃಪಾಕರ್ ರಾಮಾಚಾರಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ರಾಮಾಚಾರಿ ಸೀರಿಯಲ್ ನಾಯಕಿ ಚಾರು ಆಲಿಯಾನ್ ಮೌನ ಗುಡ್ಡೆಮನೆ, ತಮ್ಮ ನಟನೆಯಿಂದ, ಮುಗ್ಧ ಪಾತ್ರದ ಮೂಲಕ ಸಿಕ್ಕಾಪಟ್ಟೆ ಜನರ ಫೇವರಿಟ್ ನಟಿ ಅನಿಸಿಕೊಂಡಿದ್ದಾರೆ.
ಮೊದಲು ಐಷಾರಾಮಿ ಜೀವನ ನಡೆಸುತ್ತಾ, ರಾಮಾಚಾರಿ ಮನೆ ಮುರಿಯೋಕೆ ಕಾಯ್ತಿದ್ದ ಚಾರು ಈಗ ಸಂಪೂರ್ಣ ಬದಲಾಗಿ ಗಂಡನ ಹಾಗೂ ಮನೆಯವರ ಒಳಿತಿಗಾಗಿ ಏನು ಬೇಕಾದಾರೂ ಮಾಡುವಂತಹ ಅಪ್ಪಟ್ಟ ಮನೆ ಮಗಳು ಚಾರು ಆಗಿದ್ದಾಳೆ.
ನಾರಾಯಣಾಚಾರ್ಯರ ಮನೆಯ ಸೊಸೆ ಆಗಿರೋದ್ರಿಂದ ಚಾರು ತನ್ನ ಹಿಂದಿನ ಮಾಡರ್ನ್ ಜೀವನವನ್ನು ದೂರ ಮಾಡಿ, ಯಾವಾಗಲೂ ಸೀರೆಯನ್ನೆ ಉಡುತ್ತಿದ್ದಾರೆ.
ಪ್ರೇಕ್ಷಕರು ಸಹ ಮಾಡರ್ನ್ ಚಾರುಗಿಂತ ಹೆಚ್ಚಾಗಿ, ಸೀರೆಯಲ್ಲಿ ಮುದ್ದು ಮುದ್ದಾಗಿ ಕಾಣಿಸುವ ಚಾರುವನ್ನು ಇಷ್ಟಪಟ್ಟಿದ್ದಾರೆ.
ಇನ್ನು ಸೀರಿಯಲ್ ವಿಷಯಕ್ಕೆ ಬಂದ್ರೆ ಸದ್ಯ ರಾಮಾಚಾರಿಯನ್ನು ಹೋಲುವ ಕಿಟ್ಟಿ ಎಂಟ್ರಿಯಾಗಿದೆ. ರಾಮಾಚಾರಿಯ ಜಾಗದಲ್ಲಿ ಕಿಟ್ಟಿಯನ್ನು ನಿಲ್ಲಿಸಲು ಮಾನ್ಯತಾ ಏನೇನೋ ಕಿತಾಪತಿ ಮಾಡ್ತಿದ್ದಾಳೆ. ಮುಂದೆ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.