ನೀತಾ ಅಂಬಾನಿ ಐಷಾರಾಮಿ ಕಾರುಗಳ ಮೇಲಿನ ಪ್ರೀತಿಯಿಂದಲೇ ಸಾಕಷ್ಟು ಜನಪ್ರಿಯರಾಗಿದ್ದಾರೆ. ಜರ್ಮಿನಿಯ ಪ್ರತಿಷ್ಠಿತ ಆಡಿ ಕಾರ್ ಕಂಪನಿಯ ವಿಶೇಷ ಮಾಡೆಲ್ ಕಾರಾಗಿರುವ ಆಡಿ ಎ9 ಕೆಮಿಲಿಯನ್ ಖರೀದಿಸಿದಾಗ ಇಡೀ ಜಗತ್ತನ್ನು ಸ್ಥಗಿತಗೊಳಿಸಿದ್ದರು. ಇದರ ಅಂದಾಜು ಬೆಲೆ 90 ಕೋಟಿ ರೂ. ಭಾರತಕ್ಕೆ ಈ ಕಾರು ತಲುಪುವ ವೇಳೆಗೆ ಒಟ್ಟು ತೆರಿಗೆಗಳು ಎಲ್ಲವೂ ಸೇರಿ ಒಟ್ಟು 100 ಕೋಟಿ ರೂ. ಆಗಿದೆಯಂತೆ. ಇದಲ್ಲದೇ ನೀತಾ ಅಂಬಾನಿ ಬಳಿ ಮರ್ಸಿಡೀಸ್ ಬೆಂಜ್ ಎಸ್ ಕ್ಲಾಸ್, ಬೆಂಟಲೆ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್, ರೋಲ್ಸ್ ರಾಯ್ ಫೆಂಟಮ್ ಹಾಗೂ ಬಿಎಂಡಬ್ಲ್ಯೂ 7 ಸಿರೀಸ್ ನಂತಹ ಹಲವು ಐಶಾರಾಮಿ ಕಾರುಗಳ ಕಲೆಕ್ಚನ್ ಇದೆ.
ಅಂಬಾನಿ ಕುಟುಂಬದ ಒಬ್ಬೊಬ್ಬರ ಬಳಿ ಒಂದೊಂದು ರೀತಿಯ ದುಬಾರಿ ಆಭರಣಗಳಿವೆ. ನೀತಾ ಅಂಬಾನಿ ಬಳಿ ಪ್ರಾಚೀನ ವಜ್ರದ ನೆಕ್ಲೇಸ್‌ಗಳು, ಸಾಂಪ್ರದಾಯಿಕ ಚಿನ್ನದ ಆಭರಣಗಳು ಮತ್ತು ಅಪರೂಪದ ವಜ್ರದ ಉಂಗುರಗಳೊಂದಿಗೆ ನೂರಾರು ಕೋಟಿ ಮೌಲ್ಯದ ಹಲವಾರು ಆಭರಣಗಳು ಸುಮಾರು 90 ಕ್ಯಾರಟ್ ನ 40 ಕೋಟಿ ರೂ.
ಬೆಲೆಬಾಳುವ ವಜ್ರದ ಉಂಗರವಿದೆ. ತಮ್ಮ ಸೊಸೆಗೆ ಅವರು 300 ಕೋಟಿ ಬೆಲೆ ಬಾಳುವು ವಜ್ರದ ಸೆಟ್ ಉಡುಗೊರೆ ನೀಡಿದ್ದರು. ನೀತಾ ಅಂಬಾನಿ ಬಳಿ ಸಾವಿರಾರು ಕೋಟಿ ಬೆಲೆ ಬಾಳುವ ಆಭರಣಗಳಿವೆ. ಒಂದೊಂದು ಆಭರಣದ ಬೆಲೆ 100 ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ.
2007 ರಲ್ಲಿ ಪತಿ ಮುಖೇಶ್ ಅಂಬಾನಿ, ಪತ್ನಿಯ 54ನೇ ಹುಟ್ಟುಹಬ್ಬದ ಉಡುಗೊರೆಯಾಗಿ ಆಧುನಿಕ ಸೌಲಭ್ಯಗಳು ಉಳ್ಳ, ಮಿನಿ ಅರಮನೆಯಂತಹ 240 ಕೋಟಿ ರೂ. ಗಳ ಬೆಲೆ ಬಾಳುವ ಐಶಾರಾಮೀ ವಿಮಾನವನ್ನು ಕಾಣಿಕೆಯಾಗಿ ನೀಡಿದರು.
ಸಾಂಪ್ರದಾಯಿಕ ಬಟ್ಟೆ, ವಿಶೇಷವಾಗಿ ಸೀರೆಯಲ್ಲಿ ನೀತಾ ಅಂಬಾನಿಯನ್ನು ಮೀರಿಸುವುದು ಅಸಾಧ್ಯ. ಅವರ ಬಟ್ಟೆಗಳ ಆಯ್ಕೆ ಅತ್ಯಂತ ಬೆರಗುಗೊಳಿಸುತ್ತದೆ. ಯಾವ ನಟಿಯರಿಗೂ ಕಮ್ಮಿ ಇಲ್ಲ. ನೀತಾ ಒಮ್ಮೆ 40 ಲಕ್ಷ ರೂ. ಮೌಲ್ಯದ ಸೀರೆಯನ್ನು ಧರಿಸಿದ್ದರು. ಇದು ವಿಶ್ವದ ಅತ್ಯಂತ ದುಬಾರಿ ಸೀರೆಗಳಲ್ಲಿ ಒಂದಾಗಿದೆ. ಈ ಸೀರೆ ಕೆಲವು ನೈಜ ವಜ್ರ ಮತ್ತು ಚಿನ್ನದ ಹೊದಿಕೆ ಹೊಂದಿತ್ತು. ಕೈಯಿಂದ ನೇಯ್ದು ತಯಾರಿಸಿದ ಸೀರೆಯಾಗಿತ್ತು. ಮಾತ್ರವಲ್ಲ ಸೀರೆಯು ಮಾಣಿಕ್ಯ, ಪುಖರಾಜ್, ಪಚ್ಚೆ, ಮುತ್ತುಗಳು ಮತ್ತು ಇನ್ನೂ ಅನೇಕ ಅಪರೂಪದ ರತ್ನಗಳನ್ನು ಒಳಗೊಂಡಿತ್ತು. ಸೀರೆಯ ರವಿಕೆಯನ್ನು ಕೃಷ್ಣನ ಸುಂದರವಾದ ಚಿತ್ರವನ್ನು ಹೊಂದಿತ್ತು. ಸೀರೆಯನ್ನು ಚೆನ್ನೈ ಸಿಲ್ಕ್ಸ್‌ನ ನಿರ್ದೇಶಕ ಶಿವಲಿಂಗಂ ವಿನ್ಯಾಸಗೊಳಿಸಿದ್ದರು.
ಅನೇಕ ಜನರಿಗೆ ಈ ವಿಚಾರ ತಿಳಿದಿಲ್ಲ. ನೀತಾ ಅಂಬಾನಿ ಒಮ್ಮೆ ಧರಿಸಿದ ಚಪ್ಪಲಿ, ಬೂಟುಗಳನ್ನು ಎಂದಿಗೂ ಮತ್ತೆ ಪುನರಾವರ್ತಿಸುವುದಿಲ್ಲವಂತೆ ಮಾತ್ರವಲ್ಲ ಅವರ ಬಳಿ ಅತ್ಯಂತ ದುಬಾರಿ ಪಾದರಕ್ಷೆಗಳ ಸಂಗ್ರಹವಿದೆ. ಪೆಡ್ರೊ, ಜಿಮ್ಮಿ ಚೂ, ಗಾರ್ಸಿಯಾ ಮತ್ತು ಮಾರ್ಲಿನ್‌ನಂತಹ ಬ್ರ್ಯಾಂಡ್‌ಗಳಿಂದ, ನೀತಾ ಅಂಬಾನಿಯವರ ಅತಿರಂಜಿತ ಶೂ ಸಂಗ್ರಹ ಹೊಂದಿದ್ದಾರೆ. ಇವೆಲ್ಲವೂ 50 ಸಾವಿರ ದಿಂದ 1 ಲಕ್ಷ ಬೆಲೆ ಬಾಳುತ್ತವೆ.
ನೀತಾ ಅಂಬಾನಿ ಅವರಿಗೆ ಪುರಾತನ ಮತ್ತು ಅಪರೂಪದ ವಸ್ತುಗಳ ಸಂಗ್ರಹದ ಮೇಲೆ ಪ್ರೀತಿ ಹೆಚ್ಚು. ಜಪಾನ್‌ನ ಅತ್ಯಂತ ಹಳೆಯ ಸಾಂಪ್ರಾದಾಯಿಕ ಕ್ರಾಂಕರಿ ಬ್ರಾಂಡ್ ನೊರಿಟೆಕ್ ಕಪ್ ತಯಾರಕರಾದ ನೊರಿಟೇಕ್‌ನಿಂದ ಅಪರೂಪದ ಚಹಾ ಸೆಟ್ ಅನ್ನು ಅವರು ಖರೀದಿಸಿದ್ದಾರೆ. ಈ ಟೀ ಸೆಟ್ ಅನ್ನು ಐಕಾನಿಕ್ ತಯಾರಕರಿಂದ ಅಂದಾಜು 1.5 ಕೋಟಿ. ಬೆಲೆಗೆ ಖರೀದಿಸಿದ್ದಾರೆ. ಇದು 22-ಕ್ಯಾರೆಟ್ ಚಿನ್ನದ ಲೇಪಿತ ಹೊಂದಿದೆ. ಒಂದು ಕಪ್ ನ ಬೆಲೆ 6ಲಕ್ಷವಂತೆ.
ನೀತಾ ಅಂಬಾನಿ ಅವರು ವಿವಿಧ ಡಿಸೈನರ್ ಲೇಬಲ್‌ಗಳಿಂದ ಅತ್ಯಂತ ದುಬಾರಿ ಕೈ ಚೀಲ ಹೊಂದಿದ್ದಾರೆ. ಜಿಮ್ಮಿ ಚೂ, ಹರ್ಮ್ಸ್, ಮಲ್ಬೆರಿ, ಫೆಂಡಿ, ಪ್ರಾಡಾ ಸೇರಿ ವಿಶ್ವದ ಅತ್ಯಂತ ದುಬಾರಿ ಕೈಚೀಲಗಳನ್ನು ಹೊಂದಿದ್ದಾರೆ. ಅಂದಾಜು 3 ಕೋಟಿ ಬೆಲೆಯ ಹ್ಯಾಂಡ್ ಬ್ಯಾಗ್ ಸಂಗ್ರಹ ಇವರ ಬಳಿ ಇದೆಯಂತೆ. ಇನ್ನು ಕೈಗಡಿಯಾರಗಳ ವಿಷಯಕ್ಕೆ ಬಂದರೆ ಬುಲ್ಗಾರಿ, ಕಾರ್ಟಿಯರ್, ರ್ಯಾಡೋ, ಕೆಲ್ವಿನ್ ನಂತಹ ದುಬಾರಿ ಬ್ರಾಂಡ್ ನ ಕೈಗಡಿಯಾರಗಳನ್ನು ನೀತಾ ಧರಿಸುತ್ತಾರೆ. ಇದರ ಆರಂಭಿಕ ಬೆಲೆಯು ಎರಡು ಲಕ್ಷವಾಗಿರುತ್ತದೆ.
ಪರೋಪಕಾರಿ ನೀತಾ ಅಂಬಾನಿ ರಿಲಯನ್ಸ್ ಫೌಂಡೇಶನ್, ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಸಂಸ್ಥಾಪಕರು ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕರಾಗಿದ್ದಾರೆ. ಅವರ ಪತಿ ಮುಖೇಶ್ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ ಮತ್ತು 83.4 ಬಿಲಿಯನ್ ಡಾಲರ್‌ಗಳ ನಿವ್ವಳ ಮೌಲ್ಯದೊಂದಿಗೆ ವಿಶ್ವದ 9ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ನೀತಾ ಕೇವಲ 20 ವರ್ಷದವಳಿದ್ದಾಗ 1985 ರಲ್ಲಿ ಇಬ್ಬರೂ ವಿವಾಹವಾದರು. ಮುಖೇಶ್ ಮತ್ತು ನೀತಾ ಅಂಬಾನಿಗೆ ಆಕಾಶ್, ಇಶಾ ಮತ್ತು ಅನಂತ್ ಎಂಬ ಮೂವರು ಮಕ್ಕಳಿದ್ದಾರೆ.