ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಒಪಾಲಾ ಸುಚಾತಾಗೆ ಈಗ ವಿಶ್ವ ಸುಂದರಿ ಕಿರೀಟ

Published : Jun 01, 2025, 12:06 AM ISTUpdated : Jun 01, 2025, 12:07 AM IST

ವಿಶ್ವ ಸುಂದರಿ ಕಿರೀಟ ಗೆದ್ದ ಒಪಾಲ್ ಸುಚಾತಾ ಹೋರಾಟ ಎಲ್ಲರಿಗೂ ಮಾದರಿಯಾಗಿದೆ. 16ನೇ ವಯಸ್ಸಿನಲ್ಲೇ ಕ್ಯಾನ್ಸರ್‌ಗೆ ತುತ್ತಾದ ಈ ಸುಂದರಿ ಚಿಕ್ಕ ವಯಸ್ಸಿನಿಂದಲೇ ಹೋರಾಟ ಆರಂಭಿಸಿದ್ದಾಳೆ.  ಈ ಹೋರಾಟ ಇದೀಗ ವಿಶ್ವ ಸುಂದರಿ ಪಟ್ಟ ಗಿಟ್ಟಿಸಿಕೊಳ್ಳುವಲ್ಲಿ ವರೆಗೆ ಬಂದಿದೆ. 

PREV
15

2025ರ ವಿಶ್ವ ಸುಂದರಿ ಕಿರೀಟವನ್ನು ಥಾಯ್ಲೆಂಡ್‌ನ ಓಪಲ್ ಸುಚಾತಾ ಚುವಾಂಗ್‌ಸ್ರೀ ಗೆದ್ದಿದ್ದಾರೆ. ಭಾರತದ ನಂದಿನಿ ಗುಪ್ತಾ ಅಂತಿಮ 8ರ ಸುತ್ತು ಪ್ರವೇಶಿಸಲು ವಿಫಲಗೊಳ್ಳುವ ಮೂಲಕ ನಿರಾಸೆ ಮೂಡಿಸಿದರು. ಎಥಿಯೋಪಿಯಾ ಸುಂದರಿ ಫಸ್ಟ್ ರನ್ನರ್-ಅಪ್ ಆಗಿ ಮತ್ತು ಪೋಲೆಂಡ್ ಸುಂದರಿ ಮೂರನೇ ಸ್ಥಾನದಲ್ಲಿ, ಮಾರ್ಟಿನಿಕ್ ಸುಂದರಿ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡರು. ಇದೀಗ ಸುಚಾತಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

25

16ನೇ ವಯಸ್ಸಲ್ಲಿ ಕ್ಯಾನ್ಸರ್‌ನಂತಹ ಭಯಾನಕ ಕಾಯಿಲೆ ವಿರುದ್ಧ ಹೋರಾಡಿದ ಓಪಲ್ ಸುಚಾತಾ ತೀವ್ರ ಸಂಕಷ್ಟದ ದಿನಗಳನ್ನು ಎದುರಿಸಿದ್ದರು. ಓಪಲ್ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. 16 ನೇ ವಯಸ್ಸಿನಲ್ಲಿ ಅವರಿಗೆ ಮಾರಕವಲ್ಲದ ಸ್ತನ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಂತರ ಅವರು ಸ್ತನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು "ಓಪಲ್ ಫಾರ್ ಹರ್" ಅಭಿಯಾನ ಆರಂಭಿಸಿದರು.

35

ಕ್ಯಾನ್ಸರ್ ವಿರುದ್ಧ ಹೋರಾಟ ಮುಂದುವರಿಸಿದರು. ಎದೆಗುಂದಲಿಲ್ಲ. ಹಲವರು ಕೈಚೆಲ್ಲಿದರೂ ಈಕೆ ಮಾತ್ರ ದಿಟ್ಟ ಹೋರಾಟದ ಮೂಲಕ ಹೊಸ ಬದುಕು ಆರಂಭಿಸಿದ್ದರು. ಕ್ಯಾನ್ಸರ್ ಕಾಯಿಲೆ ಸುಚಾತಾಳ ಜೀವನದಲ್ಲಿ ಮಹತ್ವದ ತಿರುವು ನೀಡಿತ್ತು. ಕ್ಯಾನ್ಸರ್ ವಿರುದ್ಧದ ಹೋರಾಟ ಸುಚಾತಾಳಿಗೆ ಅದಮ್ಯ ಧೈರ್ಯ ಹಾಗೂ ಚೈತನ್ಯ ನೀಡಿತ್ತು. ಜೀವನಲ್ಲಿ ಸಾಧಿಸುವ ಛಲ ಹಾಗೂ ಉತ್ಸಾಹ ತುಂಬಿತ್ತು.

45

2003ರ ಮಾರ್ಚ್ 20 ರಂದು ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ಜನಿಸಿದ ಓಪಲ್, ಹೋಟೆಲ್ ಮಾಲೀಕರ ಮಗಳು. ಥಾಯ್, ಇಂಗ್ಲಿಷ್ ಮತ್ತು ಚೈನೀಸ್ ಭಾಷೆಗಳನ್ನು ಮಾತನಾಡಬಲ್ಲರು. ಓಪಲ್‌ಳವರ ಶಿಕ್ಷಣ ಬ್ಯಾಂಕಾಕ್‌ನ ಟ್ರೈಮ್ ಉಡೋಮ್ ಸುಕ್ಸಾ ಶಾಲೆಯಲ್ಲಿ ಆರಂಭವಾಯಿತು. ಅಲ್ಲಿ ಅವರು ಚೈನೀಸ್ ಭಾಷೆ ಕಲಿತರು. ಅಲ್ಲಿಂದ ಅವರ ಭಾಷೆ ಮತ್ತು ಅಂತಾರಾಷ್ಟ್ರೀಯ ಸಂಸ್ಕೃತಿಯ ಬಗೆಗಿನ ಆಸಕ್ತಿ ಹೆಚ್ಚಾಯಿತು. ಈಗ ಅವರು ಥಮ್ಮಸಾತ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಅಭ್ಯಾಸ ಮಾಡುತ್ತಿದ್ದಾರೆ.

55

ಮಿಸ್ ವರ್ಲ್ಡ್ ಕಿರೀಟ ಗೆದ್ದ ನಂತರ ಓಪಲ್ ಸುಚಾತಾ ಅವರ ಮೊದಲ ಮಾತುಗಳು

ಮಿಸ್ ವರ್ಲ್ಡ್ ಕಿರೀಟ ಗೆದ್ದ ನಂತರ ಓಪಲ್ ಮಾತನಾಡಿ, “ಇದು ನನ್ನ ವೈಯಕ್ತಿಕ ವಿಜಯವಲ್ಲ. ಬದಲಾವಣೆಗೆ ಶ್ರಮಿಸುವ ಪ್ರತಿಯೊಬ್ಬ ಮಹಿಳೆಯ ವಿಜಯ. ಮಿಸ್ ವರ್ಲ್ಡ್ ಪರಂಪರೆಯ ಭಾಗವಾಗಿರುವುದು ನನಗೆ ಸಂತೋಷ ತಂದಿದೆ. ಇಂದಿನಿಂದ ನನ್ನ ಸಮಯವನ್ನು ಬದಲಾವಣೆ ತರುವ ಕೆಲಸಕ್ಕೆ ಮೀಸಲಿಡುತ್ತೇನೆ” ಎಂದರು.

Read more Photos on
click me!

Recommended Stories