ತ್ವಚೆಯನ್ನು ಸುಂದರವಾಗಿ ಮತ್ತು ಸ್ವಚ್ಛವಾಗಿಡಲು ನಾವು ಅನೇಕ ರೀತಿಯ ಕ್ರೀಂಗಳು ಮತ್ತು ಮನೆಮದ್ದುಗಳನ್ನು ಬಳಸುತ್ತೇವೆ. ಇದರಿಂದ ನಮ್ಮ ಮುಖವು ಹೊಳೆಯುವುದು ಮಾತ್ರವಲ್ಲ, ಸುಂದರವಾಗಿಯೂ ಕಾಣುತ್ತದೆ. ಇಂದು ಕೂಡ ನಾವು ಇಂತಹುದೇ ಸಿಂಪಲ್ ಆಗಿರುವ ಸ್ಕಿನ್ ಕೇರ್ ಟಿಪ್ಸ್ ತಂದಿದ್ದೇವೆ. ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಲಭ್ಯವಿರುವುದರಿಂದ ಅಂಗಡಿಗೆ ಹೋಗಿ ಖರೀದಿ ಮಾಡುವ ಅವಶ್ಯಕತೆಯೇನಿಲ್ಲ. ಹೌದು, ಇಂದು ಅನೇಕ ಜನರು ತಮ್ಮ ಮುಖಕ್ಕೆ ಐಸ್ ಬಳಸುತ್ತಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲ, ಸಲೆಬ್ರಿಟಿಗಳು ಸಹ ಮುಖಕ್ಕೆ ಐಸ್ ಅಪ್ಲೈ ಮಾಡುವ ವಿಡಿಯೋಗಳು ವೈರಲ್ ಆಗಿರುವುದನ್ನು ನೀವೆಲ್ಲ ಗಮನಿಸಿರಬೇಕು. ಆದರೆ ಮುಖಕ್ಕೆ ಐಸ್ ಹಚ್ಚುವುದರಿಂದ ಆಗುವ ಪ್ರಯೋಜನಗಳೇನೆಂದು ನಿಮಗೆ ತಿಳಿದಿದೆಯೇ?.
27
ಹಲವು ರೀತಿಯ ಸಮಸ್ಯೆಗಳಿಂದ ಪರಿಹಾರ
ಐಸ್ ಶಾಖದಿಂದ ಪರಿಹಾರ ನೀಡುವುದಲ್ಲದೆ, ತ್ವಚೆಗೂ ತುಂಬಾ ಪ್ರಯೋಜನಕಾರಿಯಾಗಿದೆ. ಮುಖಕ್ಕೆ ಐಸ್ ಹಚ್ಚುವುದರಿಂದ ಚರ್ಮ ತಂಪಾಗುತ್ತದೆ ಮತ್ತು ಹಲವು ರೀತಿಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಸೌಂದರ್ಯ ತಜ್ಞರು ಚರ್ಮದ ಆರೈಕೆಯ ದಿನಚರಿಯಲ್ಲಿ ಐಸ್ ಚಿಕಿತ್ಸೆಯನ್ನು ಸೇರಿಸಲು ಶಿಫಾರಸು ಮಾಡುತ್ತಾರೆ. ಇಂದು ಈ ಲೇಖನದಲ್ಲಿ ನಾವು ಮುಖಕ್ಕೆ ಐಸ್ ಹಚ್ಚುವುದರಿಂದ ಸಿಗುವ ಪ್ರಯೋಜನಗಳೇನೆಂದು ನೋಡೋಣ ಬನ್ನಿ...
37
ಮುಖಕ್ಕೆ ಐಸ್ ಹಚ್ಚುವುದು ಹೇಗೆ?
ಐಸ್ ಅನ್ನು ಎಂದಿಗೂ ತ್ವಚೆಯ ಮೇಲೆ ನೇರವಾಗಿ ಹಚ್ಚಬಾರದು. ಕಾಟನ್ ಬಟ್ಟೆಯಲ್ಲಿ ಸುತ್ತಿ ನಂತರ ಯಾವಾಗಲೂ ಮುಖಕ್ಕೆ ಐಸ್ ಹಚ್ಚಿ. 1-2 ನಿಮಿಷಗಳಿಗಿಂತ ಹೆಚ್ಚು ಕಾಲ ಮುಖದ ಮೇಲೆ ಐಸ್ ಹಚ್ಚಬೇಡಿ. ವಾರಕ್ಕೆ 4-5 ಬಾರಿ ಐಸ್ ಹಚ್ಚಿ.
47
ಮೊಡವೆಗಳಿಂದ ಪರಿಹಾರ
ಮುಖದಲ್ಲಿ ಸುಡುವ ಸಂವೇದನೆಯನ್ನು ಕಡಿಮೆ ಮಾಡಲು ಐಸ್ ಸಹಾಯ ಮಾಡುತ್ತದೆ. ನಿಮ್ಮ ಮುಖದ ಮೇಲೆ ಮೊಡವೆಗಳು ಇದ್ದರೆ, ಐಸ್ ಹಚ್ಚುವುದರಿಂದ ಪರಿಹಾರ ಸಿಗುತ್ತದೆ ಮತ್ತು ನೋವು ಕಡಿಮೆಯಾಗುತ್ತದೆ.
57
ಮೇಕಪ್ ದೀರ್ಘಕಾಲ ಇರಲು
ಮೇಕಪ್ ಹಚ್ಚುವ ಮೊದಲು ಮುಖಕ್ಕೆ ಐಸ್ ಹಚ್ಚುವುದರಿಂದ ತ್ವಚೆಯು ಮೃದುವಾಗುತ್ತದೆ ಮತ್ತು ಮೇಕಪ್ ಹೆಚ್ಚು ಕಾಲ ಉಳಿಯುತ್ತದೆ. ಇದಲ್ಲದೆ, ಮೇಕಪ್ ಹಚ್ಚುವ ಮೊದಲು ಇದು ಪ್ರೈಮರ್ ಆಗಿ ಕಾರ್ಯನಿರ್ವಹಿಸುತ್ತದೆ.
67
ತ್ವಚೆ ಕಾಂತಿಯುತವಾಗಿರಲು
ಮುಖಕ್ಕೆ ಐಸ್ ಹಚ್ಚುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ಮುಖವನ್ನು ನೈಸರ್ಗಿಕವಾಗಿ ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ.
77
ಬಿಸಿಲಿನಿಂದ ಪರಿಹಾರ
ವಿಶೇಷವಾಗಿ ಬೇಸಿಗೆಯಲ್ಲಿ ಸುಡುವ ಸೂರ್ಯನಿಂದಾಗಿ ಚರ್ಮವು ಸುಟ್ಟುಹೋಗುತ್ತದೆ. ಇಂತಹ ಸಮಯದಲ್ಲಿ ಮುಖಕ್ಕೆ ಐಸ್ ಹಚ್ಚುವುದರಿಂದ ಬಿಸಿಲಿನಿಂದ ಪರಿಹಾರ ಸಿಗುತ್ತದೆ ಮತ್ತು ತ್ವಚೆ ತಂಪಾಗಿರುತ್ತದೆ.