ನಿಮ್ಮ ಅಂದವನ್ನು ಹೆಚ್ಚಿಸೋಕೆ, ಮುಖದ ಗ್ಲೋ ಹೆಚ್ಚಿಸಿಕೊಳ್ಳಲು ನೀವು ಕೇವಲ ಐಸ್ ಕ್ಯೂಬ್ ಬಳಕೆ ಮಾಡಿದ್ರೆ ಸಾಲದು, ಅದರ ಜೊತೆಗೆ ಈ ವಸ್ತುಗಳನ್ನು ಬೆರೆಸಿದ್ರೆ ಸ್ಕಿನ್ ಸೂಪರ್ ಆಗುತ್ತೆ.
ಐಸ್ ಕ್ಯೂಬ್ (ice cube) ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳುವ ವಿಧಾನ ನಿಮಗೆ ಗೊತ್ತಿದೆ. ಆದರೆ ಇವತ್ತು ನಾವು ಯಾರು ನಿಮಗೆ ಇಲ್ಲಿವರೆಗೂ ಹೇಳಿರದ ಐಸ್ ಕ್ಯೂಬ್ ಬ್ಯೂಟಿ ರೆಸಿಪಿ ಬಗ್ಗೆ ಹೇಳ್ತೀವಿ. ಈ ಐಸ್ ಕ್ಯೂಬ್ ನೀವು ಬಳಸಿದ್ದೇ ಆದ್ರೆ ಸ್ಕಿನ್ ಗ್ಲೋ ಆಗೋದು ಖಚಿತಾ.
28
ಅಕ್ಕಿ ಐಸ್ ಕ್ಯೂಬ್‌ಗಳು - ಸುಕ್ಕುಗಳು ಮತ್ತು ವಯಸ್ಸಾಗುವಿಕೆಯನ್ನು ತಡೆಯಲು
ಸಾಮಗ್ರಿಗಳು:
1/2 ಕಪ್ ಬೇಯಿಸಿದ ಅನ್ನ
1/2 ಕಪ್ ಹಾಲು ಅಥವಾ ಅಕ್ಕಿ ನೀರು
1 ಟೀ ಚಮಚ ಜೇನುತುಪ್ಪ
ತಯಾರಿಸುವ ವಿಧಾನ
ಎಲ್ಲವನ್ನೂ ಮಿಕ್ಸಿಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ. ಅಗತ್ಯವಿದ್ದರೆ ಸೋಸಿ, ಐಸ್ ಟ್ರೇಗೆ ಹಾಕಿ ಮತ್ತು ಫ್ರೀಜ್ ಮಾಡಿ. ಈ ಐಸ್ ಕ್ಯೂಬ್ ಗಳಿಂದ ಮುಖಕ್ಕೆ ವೃತ್ತಾಕಾರದಲ್ಲಿ ಮಸಾಜ್ ಮಾಡೋದ್ರಿಂದ ಮುಖದ ಸುಕ್ಕುಗಳು ನಿವಾರಣೆಯಾಗುತ್ತೆ.
38
ಪುದೀನ ಮತ್ತು ಗ್ರೀನ್ ಟೀ ಐಸ್ ಕ್ಯೂಬ್ - ಮೊಡವೆ ಮತ್ತು ಆಯಿಲಿ ಸ್ಕಿನ್
ಸಾಮಗ್ರಿಗಳು:
1 ಕಪ್ ಕುದಿಸಿ ತಣ್ಣಗಾದ ಗ್ರೀನ್ ಟೀ
ಒಂದು ಹಿಡಿ ಪುದೀನ ಎಲೆಗಳು (mint leaves)
ತಯಾರಿಸುವ ವಿಧಾನ
ಗ್ರೀನ್ ಟೀ ಜೊತೆ ಪುದೀನ ಎಲೆಗಳನ್ನು ಸೇರಿಸಿ ಮಿಕ್ಸಿ ಮಾಡಿ, ಐಸ್ ಟ್ರೇಗಳಲ್ಲಿ ಹಾಕಿ ಮತ್ತು ಫ್ರೀಜ್ ಮಾಡಿ. ಇದು ಮೊಡವೆಗಳನ್ನು ನಿವಾರಿಸಲು, ಆಯ್ಲಿ ಸ್ಕಿನ್ ನಿವಾರಿಸಲು ಸಹಾಯ ಮಾಡುತ್ತೆ.
ಆಲೂಗಡ್ಡೆ (potato) ಮತ್ತು ನೀರನ್ನು ಮಿಕ್ಸಿ ಮಾಡಿ, ಅದನ್ನು ಸೋಸಿ, ಟ್ರೇಗಳಲ್ಲಿ ಹಾಕಿ, ಫ್ರೀಜ್ ಮಾಡಿ. ಇದು ಹೈಪರ್‌ಪಿಗ್ಮೆಂಟೇಶನ್ ಮತ್ತು ಚರ್ಮದ ಟೋನ್ ಸುಧಾರಿಸಲು ಸಹಾಯ ಮಾಡುತ್ತೆ.
58
ಕಾಫಿ ಐಸ್ ಕ್ಯೂಬ್‌ಗಳು - ಡಾರ್ಕ್ ಸರ್ಕಲ್ ಮತ್ತು ಉಬ್ಬಿದ ಕಣ್ಣುಗಳಿಗೆ
ಸಾಮಗ್ರಿಗಳು:
1 ಕಪ್ ಕುದಿಸಿ ತಣ್ಣಗಾದ ಕಾಫಿ
ತಯಾರಿಸುವ ವಿಧಾನ
ಇದನ್ನು ಸೋಸಿ ಟ್ರೇಗಳಲ್ಲಿ ಹಾಕಿ, ಫ್ರೀಜ್ ಮಾಡಿ. ಊತ ಮತ್ತು ಡಾರ್ಕ್ ಸರ್ಕಲ್ ಕಡಿಮೆ ಮಾಡಲು ಕಣ್ಣುಗಳ ಸುತ್ತಲೂ ನಿಧಾನವಾಗಿ ಮಸಾಜ್ ಮಾಡಿ.
68
ಬೀಟ್ರೂಟ್ ಐಸ್ ಕ್ಯೂಬ್‌ಗಳು - ರೋಸಿ ಗ್ಲೋಗಾಗಿ
ಸಾಮಗ್ರಿಗಳು:
1 ಸಣ್ಣ ಬೀಟ್ರೂಟ್ (beetroot)
1/2 ಕಪ್ ನೀರು
ತಯಾರಿಸುವ ವಿಧಾನ
ಎರಡನ್ನು ಮಿಕ್ಸಿ ಮಾಡಿ ರಸವನ್ನು ಸೋಸಿ, ಪ್ರೀಜ್ ಮಾಡಿ. ಈ ಐಸ್ ಕ್ಯೂಬನ್ನು ಮುಖಕ್ಕೆ ವೃತ್ತಾಕಾರವಾಗಿ ಹಚ್ಚಿ ಇದು ಮುಖದಲ್ಲಿನ ಹೊಳಪನ್ನು ಹೆಚ್ಚಿಸೋದಕ್ಕೆ ಸಹಾಯ ಮಾಡುತ್ತೆ.
78
ಟೊಮೆಟೊ ಐಸ್ ಕ್ಯೂಬ್‌ಗಳು - ದೊಡ್ಡ ರಂಧ್ರಗಳು ಮತ್ತು ಎಣ್ಣೆಯುಕ್ತ ಚರ್ಮಕ್ಕಾಗಿ
ಸಾಮಗ್ರಿಗಳು:
1 ಮಾಗಿದ ಟೊಮೆಟೊ
ಕೆಲವು ಹನಿ ನಿಂಬೆ ರಸ
ತಯಾರಿಸುವ ವಿಧಾನ
ಟೊಮೆಟೊ ಮತ್ತು ನಿಂಬೆ ರಸವನ್ನು ಬೆರೆಸಿ ಸೋಸಿ, ಫ್ರೀಜ್ ಮಾಡಿ. ಈ ಕ್ಯೂಬನ್ನು ಮುಖಕ್ಕೆ ಹಚ್ಚೋದ್ರಿಂದ ಮುಖದ ರಂಧ್ರಗಳು ಬಿಗಿಯಾಗುತ್ತವೆ, ಅಲ್ಲದೇ ಮುಖದಲ್ಲಿನ ಎಣ್ಣೆಯನ್ನು ಕಡಿಮೆ ಮಾಡಲು ಇವು ಬೆಸ್ಟ್.
88
ಅರಿಶಿನ ಮತ್ತು ಕಡಲೆ ಹಿಟ್ಟು ಐಸ್ ಕ್ಯೂಬ್‌ಗಳು - ಹೊಳೆಯುವ ಚರ್ಮಕ್ಕಾಗಿ
ಸಾಮಗ್ರಿಗಳು
1 ಟೀಚಮಚ ಅರಿಶಿನ
2 ಚಮಚ ಬೇಸನ್
1/2 ಕಪ್ ರೋಸ್ ವಾಟರ್ (rose water) ಅಥವಾ ನೀರು
ತಯಾರಿಸುವ ವಿಧಾನ
ಇವೆಲ್ಲವನ್ನೂ ನಯವಾಗಿ ಪೇಸ್ಟ್ ಮಾಡಿ, ಬೇಕಾದಷ್ಟು ನೀರು ಸೇರಿಸಿ, ಫ್ರೀಜ್ ಮಾಡಿ. ಇದರಿಂದ ಮಸಾಜ್ ಮಾಡೋದ್ರಿಂದ ಸ್ಕಿನ್ ಹೊಳೆಯೋದಕ್ಕೆ ಶುರುವಾಗುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.