ಯಾರು ಈ ಆಶ್ನಾ ಮೆಹ್ತಾ
ವರದಿಯಂತೆ ಅಶ್ನಾ ಅವರ ತಂದೆಯ ಬಗ್ಗೆ ವಿವರಗಳು ಕಡಿಮೆ ಅವರ ತಾಯಿ, ಪಾಯಲ್ ನ್ಯೂಯಾರ್ಕ್‌ನ ಸಂಸ್ಥಾಪಕಿ ಪಾಯಲ್ ಮೆಹ್ತಾ ಒಬ್ಬ ಪ್ರಸಿದ್ಧ ಆಭರಣ ವಿನ್ಯಾಸಕಿ, ಪಾಯಲ್ ಮೆಹ್ತಾ ಅವರ ಪುತ್ರಿ ಅಶ್ನಾ ಬಾಲ್ಯದಿಂದಲೂ ವಜ್ರಗಳ ಬಗ್ಗೆ ಅಪಾರ ಒಲವು ಹೊಂದಿ ತನ್ನ ತಾಯಿಯ ಹೆಜ್ಜೆಗಳನ್ನು ಅನುಸರಿಸಿ, ಯುನೈಟೆಡ್ ಸ್ಟೇಟ್ಸ್‌ನಲ್ಲಿ, ವಿಶೇಷವಾಗಿ ಹಾಲಿವುಡ್ ಎ-ಲಿಸ್ಟರ್‌ಗಳಲ್ಲಿ ಐಷಾರಾಮಿ ಆಭರಣ ಕ್ಷೇತ್ರದಲ್ಲಿ ಪ್ರಮುಖ ಹೆಸರಾದರು. ವಿಶ್ವದ ಅತಿದೊಡ್ಡ ವಜ್ರ ತಯಾರಕರಲ್ಲಿ ಒಂದಾದ ರೋಸಿ ಬ್ಲೂ ಕುಟುಂಬದ ಸದಸ್ಯೆಯಾಗಿ, ಅವರು ಗ್ಲಾಮರ್ ಲೋಕಕ್ಕೆ ಹತ್ತಿರವಾದರು.