ಮಹಿಳೆಯರು ಚಿನ್ನದ ಕಿವಿಯೋಲೆ ಧರಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

Published : Apr 05, 2025, 01:24 PM ISTUpdated : Apr 05, 2025, 01:25 PM IST

ಮಹಿಳೆಯರು ಸುಂದರವಾಗಿ ಕಾಣಲು ಆಭರಣಗಳನ್ನು ಧರಿಸುತ್ತಾರೆ. ಆದರೆ, ಚಿನ್ನವನ್ನು ಧರಿಸುವುದರಿಂದ ಮಹಿಳೆಯರಿಗೆ ಎಷ್ಟು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?  

PREV
14
ಮಹಿಳೆಯರು ಚಿನ್ನದ ಕಿವಿಯೋಲೆ ಧರಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಮಹಿಳೆಯರು ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ. ಅದರಲ್ಲಿಯೂ ಚಿನ್ನವೆಂದರೆ ವಿಪರೀತ ಪ್ರೀತಿ ಇರುತ್ತದೆ. ಎಷ್ಟು ಆಭರಣಗಳಿದ್ದರೂ. ಇನ್ನೂ ಚಿನ್ನವನ್ನು ಕೊಳ್ಳಬೇಕೆಂಬ ಆಸೆ ಇರುತ್ತದೆ. ಮಹಿಳೆಯರ ಅಂದವನ್ನು ದುಪ್ಪಟ್ಟು ಮಾಡುವುದರಲ್ಲಿ ಚಿನ್ನ ಯಾವಾಗಲೂ ಮುಂದಿರುತ್ತದೆ. ಆದರೆ, ಚಿನ್ನ ಕೇವಲ ಸುಂದರವಾದ ಆಭರಣ ಮಾತ್ರವಲ್ಲ. ಬಹಳ ರೀತಿಯ ಪ್ರಯೋಜನಗಳನ್ನು ಕೂಡಾ ಹೊಂದಿದೆ. ಮುಖ್ಯವಾಗಿ ಕಿವಿಯೋಲೆ ಚಿನ್ನದ್ದೇ ಏಕೆ ಧರಿಸಬೇಕು? ಅದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ನೋಡೋಣ...

24

ಬುಧ ಗ್ರಹವು ಬಲಗೊಳ್ಳುತ್ತದೆ

ಜ್ಯೋತಿಷ್ಯದ ಪ್ರಕಾರ, ಕಿವಿಗೆ ಚಿನ್ನದ ಕಿವಿಯೋಲೆ ಹಾಕಿಕೊಂಡರೆ ಜಾತಕದಲ್ಲಿ ಬುಧ ಗ್ರಹವು ಬಲವಾಗಿರುತ್ತದೆ. ಕಿವುಡುತನ, ನೋವು ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತವೆ. ಅದಕ್ಕಾಗಿಯೇ.. ಮಕ್ಕಳಿಗೆ ಚಿಕ್ಕಂದಿನಲ್ಲಿ ಕಿವಿಗಳನ್ನು ಚುಚ್ಚಿಸುತ್ತಾರೆ. ಅದಕ್ಕಾಗಿಯೇ, ಖಂಡಿತವಾಗಿ ಚಿನ್ನವನ್ನು ಕಿವಿಗಳಿಗೆ ಧರಿಸಬೇಕು.

ಬುದ್ಧಿಯನ್ನು ಹೆಚ್ಚಿಸುತ್ತದೆ

ಕಿವಿಯಲ್ಲಿ ಚಿನ್ನದ ಕಿವಿಯೋಲೆ ಹಾಕಿಕೊಂಡರೆ ಬುದ್ಧಿ ವಿಕಾಸವಾಗುತ್ತದೆ, ಶಕ್ತಿ ಹೆಚ್ಚಾಗುತ್ತದೆ, ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ.  

34

ನೆಗೆಟಿವಿಟಿಯನ್ನು ದೂರ ಮಾಡುತ್ತದೆ

ಚಿನ್ನವು ಪಾಸಿಟಿವಿಟಿಯನ್ನು ಆಕರ್ಷಿಸುತ್ತದೆ. ನಿಮ್ಮ ಮನಸ್ಸಿನಲ್ಲಿ ನೆಗೆಟಿವ್ ಆಲೋಚನೆಗಳು ಬರುತ್ತಿದ್ದರೆ ಚಿನ್ನದ ಕಿವಿಯೋಲೆ ಹಾಕಿಕೊಳ್ಳಿ. ಇದರಿಂದ ಕೆಟ್ಟ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ. ಪಾಸಿಟಿವಿಟಿ  ಹೆಚ್ಚಾದರೆ, ಆಟೋಮೆಟಿಕ್ ಆಗಿ ಶುಭವಾಗುತ್ತದೆ ಎಂದು ನಂಬುತ್ತಾರೆ. ಅದಕ್ಕಾಗಿಯೇ ಮರೆಯದೇ.. ಖಂಡಿತವಾಗಿ ಮಹಿಳೆಯರು ಚಿನ್ನದಿಂದ ಮಾಡಿದ ಕಿವಿ ಓಲೆಗಳನ್ನು ಧರಿಸಬೇಕು.

44

ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ

ನೀವು ಓದಿದ್ದು ನಿಜವೇ. ಚಿನ್ನದ ಕಿವಿಯೋಲೆ ಹಾಕಿಕೊಂಡರೆ ಕಣ್ಣಿನ ದೃಷ್ಟಿಯು ಕೂಡಾ ಸುಧಾರಿಸುತ್ತದೆ. ಇದರಿಂದ ಒತ್ತಡ ಕೂಡಾ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಜಾತಕದಲ್ಲಿ ಗುರು ಗ್ರಹವನ್ನು ಬಲಪಡಿಸುತ್ತದೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಿವಿಗಳಿಗೆ ಚಿನ್ನದ ಕಿವಿಯೋಲೆಗಳನ್ನು ಹಾಕಿಕೊಂಡರೆ ಜಾತಕದಲ್ಲಿ ಗುರು ಗ್ರಹವು ಬಲಗೊಳ್ಳುತ್ತದೆ. ಗುರುಗಳ ದಯೆಯಿಂದ ಶುಭ ಫಲಿತಾಂಶಗಳು ದೊರೆಯುತ್ತವೆ.

ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ

ಚಿನ್ನವು ನಮ್ಮ ಮಾನಸಿಕ ಸ್ಥಿತಿಯನ್ನು ಸಮತೋಲನಗೊಳಿಸುತ್ತದೆ. ಅದಕ್ಕಾಗಿಯೇ ಚಿನ್ನದ  ಕಿವಿಯೋಲೆ ಹಾಕಿಕೊಂಡರೆ ಮಾನಸಿಕ ಒತ್ತಡ ಕಡಿಮೆಯಾಗಿ, ಸ್ಟ್ರೆಸ್ ಕಡಿಮೆಯಾಗುತ್ತದೆ.

Read more Photos on
click me!

Recommended Stories