ಅಂಬಾನಿ ಸಮಾರಂಭಕ್ಕೆ ಬಂದು ಬೆಲೆಬಾಳುವ ಪೆಂಡೆಂಟ್‌ ಕಳೆದುಕೊಂಡ ಜುಕರ್‌ಬರ್ಗ್ ಪತ್ನಿ, 3.5 ಗಂಟೆ ಎಲ್ಲರ ಹುಡುಕಾಟ!

First Published | Mar 10, 2024, 5:45 PM IST

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಭಾವಿ ಸೊಸೆ ರಾಧಿಕಾ ಮರ್ಚೆಂಟ್ ಅವರ ಮೂರು ದಿನಗಳ ಪೂರ್ವ ಸಮಾರಂಭಕ್ಕೆ  ಪ್ರಪಂಚದಾದ್ಯಂತದ ಸುಪ್ರಸಿದ್ಧ ವ್ಯಕ್ತಿಗಳು ಜಮಾಯಿಸಿದ್ದರು ಈ ವೇಳೆ ಅತ್ಯಂತ ಕುತೂಹಲಕಾರಿ ಘಟನೆ ನಡೆದಿದೆ. 

ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮವನ್ನು ಆಚರಿಸಿದ್ದು, ಇಡೀ ವಿಶ್ವದ ಗಣ್ಯರನ್ನು ನಿಬ್ಬೆರಗಾಗುವಂತೆ ಮಾಡಿದೆ. ಇಡೀ ಬಾಲಿವುಡ್‌ ಮಾತ್ರವಲ್ಲ ಭಾರತೀಯ ಗಣ್ಯಾತಿಗಣ್ಯರ ಜೊತೆ ಫೇಸ್‌ಬುಕ್‌, ಮೆಟಾ ಸಂಸ್ಥೆಯ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್, ಬಿಲ್ ಗೇಟ್ಸ್ ಮಾತ್ರವಲ್ಲ ಹೆಚ್ಚಿನವರಂತಹ ಪಾಶ್ಚಿಮಾತ್ಯ ದೇಶಗಳ ಗಣ್ಯ ವ್ಯಕ್ತಿಗಳು ಈ ಆತಿಥ್ಯವನ್ನು ಸ್ವೀಕರಿಸಿದ್ದಾರೆ.

ಜಾಗತಿಕ ಪಾಪ್ ತಾರೆ, ರಿಹಾನ್ನಾ ಅಂಬಾನಿ ಕುಟುಂಬದ ಕಾಕ್ಟೈಲ್ ಪಾರ್ಟಿಯಲ್ಲಿ ಪ್ರದರ್ಶನ ನೀಡಿದ್ದು, ಈ ಮೂಲಕ ಯಾವುದೇ ಸಾರ್ವಜನಿಕ ಸಂಗೀತ ಕಚೇರಿಗಳನ್ನು ಮಾಡದ ತಮ್ಮ ಎಂಟು ವರ್ಷಗಳ ಸುದೀರ್ಘ ವಿರಾಮವನ್ನು ಮುರಿದರು. ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಭಾರತದ  ಇತಿಹಾಸದಲ್ಲಿ  ವಿವಾಹ ಪೂರ್ವ ಆಚರಣೆ ಹಿಂದೆಗೂ ನಡೆಯದಂತೆ ಮಾಡಿ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ.

Tap to resize

ಈ ಹಬ್ಬದ ವಾತಾವರಣದ ನಡುವೆ ಮಾರ್ಕ್ ಜುಕರ್‌ಬರ್ಗ್ ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ತಮ್ಮ ಬೆಲೆಬಾಳುವ ಪೆಂಡೆಂಟ್ ಅನ್ನು ಕಳೆದುಕೊಂಡಿದ್ದಾರೆ. ವಿಚಾರ ತಿಳಿದ ತಕ್ಷಣ  ವಿವಾಹ ಪೂರ್ವದ ಸಂಭ್ರಮದ ನಡುವೆ ಭಾರೀ ಗೊಂದಲ ಉಂಟಾಗಿದ್ದು, ಜುಕರ್‌ಬರ್ಗ್ ದಂಪತಿಗಳ ಜೊತೆ ಅತಿಥಿಗಳೆಲ್ಲ ಸೇರಿ ಮೂರೂವರೆ ಗಂಟೆಗಳ ಕಾಲ ಪೆಂಡೆಂಟ್‌ಗಾಗಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ.

ಪ್ರಿಸ್ಸಿಲ್ಲಾ ಅವರು ಪೆಂಡೆಂಟ್ ಅನ್ನು ಮರಳಿ ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂದು  ಖಚಿತವಾಗಿಲ್ಲ. ಆದರೆ ಈ ವಿಚಾರ ಬಹಿರಂಗವಾದ ತಕ್ಷಣ ನೆಟಿಜನ್‌ಗಳು  ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಕಮೆಂಟ್‌ ಹಾಕಿದ್ದಾರೆ. ಮಾರ್ಚ್ 5, 2024 ರಂದು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಡೌನ್ ಆಗಲು ಈ ಪೆಂಡೆಂಟ್ ಘಟನೆಯೇ ಮುಖ್ಯ ಕಾರಣ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.  

ಇನ್ನು ಮಾರ್ಕ್ ಜುಕರ್‌ಬರ್ಗ್ ಯಾವಾಗಲೂ ಕ್ಯಾಶುಯಲ್ ಡ್ರೆಸ್ಸಿಂಗ್‌ಗೆ ಹೆಸರುವಾಸಿಯಾಗಿದ್ದಾರೆ, ಏಕೆಂದರೆ ಉದ್ಯಮಿ ಯಾವಾಗಲೂ ಕಾರ್ಗೋ ಶಾರ್ಟ್ಸ್‌ನೊಂದಿಗೆ ಜೋಡಿಯಾಗಿರುವ ಬೂದು ಬಣ್ಣದ ಟೀ ಶರ್ಟ್ ಅನ್ನು ಧರಿಸುತ್ತಾರೆ. ಆದ್ದರಿಂದ, CEO ಅವರು ಫಂಕಿ ಅನಿಮಲ್ ಪ್ರಿಂಟ್‌ಗಳೊಂದಿಗೆ ವಿಶೇಷವಾದ ಬೀಜ್-ಹ್ಯೂಡ್ ಶರ್ಟ್ ಅನ್ನು ಧರಿಸಿದಾಗ ಮತ್ತು ಅದನ್ನು ಬಿಳಿ ಪ್ಯಾಂಟ್‌ನೊಂದಿಗೆ ಜೋಡಿಸಿದಾಗ, ಅವರ ನೋಟವು ಕೆಲವೇ ಸಮಯದಲ್ಲಿ ವೈರಲ್ ಆಗಿತ್ತು. ಮಾರ್ಕ್ ಜುಕರ್‌ಬರ್ಗ್ ಅವರ ಈ ಹೊಸ ಅವತಾರವನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. 

Latest Videos

click me!