ಪಿಂಕ್ ಸ್ಯಾರಿಯಲ್ಲಿ ಮಲಯಾಳಂ ನಟಿ ಮಂಜು ವಾರಿಯರ್, ವಯಸ್ಸು ಕಡಿಮೆಯಾಗ್ತಾ ಹೋಗ್ತಿದೆ ಎಂದ ಫ್ಯಾನ್ಸ್‌

Published : Aug 19, 2023, 02:39 PM IST

ಮಂಜು ವಾರಿಯರ್‌, ನಲವತ್ತು ವರ್ಷ ಕಳೆದರೂ ಇನ್ನೂ ಇಪ್ಪತ್ತರ ಯುವತಿಯರನ್ನೂ ನಾಚಿಸುವಂತಹಾ ತರುಣಿಯಂತಿರೋ ನಟಿ. ಸದ್ಯ ಇನ್ಸ್ಟಾಗ್ರಾಂನಲ್ಲಿ ಪಿಂಕ್ ಸೀರೆಯುಟ್ಟಿರೋ ಫೋಸ್ ಕೊಟ್ಟಿರೋ ಫೋಟೋಸ್ ಹಂಚಿಕೊಂಡಿದ್ದಾರೆ. ಫೇವರಿಟ್‌ ಮಂಜು ಚೇಚಿಯ ಫೋಟೋ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ.

PREV
19
ಪಿಂಕ್ ಸ್ಯಾರಿಯಲ್ಲಿ ಮಲಯಾಳಂ ನಟಿ ಮಂಜು ವಾರಿಯರ್, ವಯಸ್ಸು ಕಡಿಮೆಯಾಗ್ತಾ ಹೋಗ್ತಿದೆ ಎಂದ ಫ್ಯಾನ್ಸ್‌

ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಮಂಜು ವಾರಿಯರ್. ನಲವತ್ತು ವರ್ಷ ಕಳೆದರೂ ಇನ್ನೂ ಇಪ್ಪತ್ತರ ಯುವತಿಯರನ್ನೂ ನಾಚಿಸುವಂತಹಾ ತರುಣಿಯಂತೆ ಇದ್ದಾರೆ. ಯಾವಾಗ್ಲೂ ಸ್ಟೈಲಿಶ್ ಉಡುಗೆಯಲ್ಲಿ ಮಿಂಚೋ ಮಂಜು ಚೇಚಿ ಈ ಬಾರಿ ಪಿಂಕ್ ಸೀರೆಯಲ್ಲಿ ಸಖತ್‌ ಆಗಿ ಫೋಸ್ ಕೊಟ್ಟಿದ್ದಾರೆ. ಅಭಿಮಾನಿಗಳ ದಿಲ್‌ ಖುಷ್ ಮಾಡಿದ್ದಾರೆ.

29

ಮಂಜು ವಾರಿಯರ್ ಮಲಯಾಳಂನ ಫೇಮಸ್‌ ನಟಿಯಾಗಿದ್ದು, ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅಂತಹ ಚಿತ್ರಗಳು ವೈರಲ್ ಆಗುತ್ತದೆ. ಇದೀಗ ಮಂಜು ಅವರು ಪಿಂಕ್ ಸೀರೆ ಉಟ್ಟಿರೋ ಹೊಸ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

39
Manju warrior

ಗುಲಾಬಿ ಬಣ್ಣದ ಸೀರೆಯಲ್ಲಿ ಮಂಜು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಮಂಜು ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ 'ಐ ಲವ್ ಮಿ, ದಿ ಸಿಂಪಲ್ ಅಂಡ್ ಸ್ಟ್ರಾಂಗ್ ರೆವಲ್ಯೂಷನ್' ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮಂಜು ಅತ್ಯಂತ ಕಡಿಮೆ ಡಿಸೈನ್ ಇರೋ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ್ದಾರೆ. ಗುಂಗುರು ಕೂದಲು ಮತ್ತು ಭಾರವಾದ ಕಿವಿಯೋಲೆಗಳು ಶೇರ್ ಮಾಡಿದ್ದಾರೆ. 

49

ಡಿಫರೆಂಟ್ ಪೋಸ್‌ನಲ್ಲಿ ಪೋಸ್ಟ್ ಮಾಡಿರುವ ಫೋಟೋಗಳು ಅಭಿಮಾನಿಗಳ ಮನಗೆದ್ದಿದೆ. ಚಿತ್ರಕ್ಕೆ ಸಾಕಷ್ಟು ಮಂದಿ ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ. ನಿಮ್ಮ ವಯಸ್ಸು ರಿವರ್ಸ್ ಗೇರ್‌ನಲ್ಲಿ ಹೋಗುತ್ತಿದೆ ಎಂದು ಒಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ವಯಸ್ಸು ಕೇವಲ ಸಂಖ್ಯೆ ಎಂದಿದ್ದಾರೆ. 'ಇವರು ಯಾವ ಕಾಲೇಜಿನಲ್ಲಿ ಓದುತ್ತಿರುವ ಯುವತಿ' ಎಂದು ಮತ್ತೊಬ್ಬ ವ್ಯಕ್ತಿ ಕಾಮೆಂಟ್ ಮಾಡಿ ತಿಳಿಸಿದ್ದಾರೆ.

59

ಮಂಜು ವಾರಿಯರ್ ಮಲಯಾಳಂ ಚಿತ್ರರಂಗದ ಫೇಮಸ್  ನಟಿ ಜೊತೆಗೆ ಡ್ಯಾನ್ಸರ್‌ ಕೂಡ ಹೌದು. 1995ರಲ್ಲಿ ವಾರಿಯರ್ ತನ್ನ 16 ನೇ ವಯಸ್ಸಿನಲ್ಲಿ ಸಾಕ್ಷ್ಯಾಮ್  ಸಿನಿಮಾದ ಮೂಲಕ   ಪಾದಾರ್ಪಣೆ ಮಾಡಿದರು. ಕೇರಳ ರಾಜ್ಯ   ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಅತ್ಯುತ್ತಮ ನಟಯಾಗಿ ಸತತ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

69

ಮಂಜು ವಾರಿಯರ್ ಮಲಯಾಳಂ ಚಿತ್ರರಂಗದ ಫೇಮಸ್  ನಟಿ ಜೊತೆಗೆ ಡ್ಯಾನ್ಸರ್‌ ಕೂಡ ಹೌದು. 1995ರಲ್ಲಿ ವಾರಿಯರ್ ತನ್ನ 16 ನೇ ವಯಸ್ಸಿನಲ್ಲಿ ಸಾಕ್ಷ್ಯಾಮ್  ಸಿನಿಮಾದ ಮೂಲಕ   ಪಾದಾರ್ಪಣೆ ಮಾಡಿದರು. ಕೇರಳ ರಾಜ್ಯ   ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಅತ್ಯುತ್ತಮ ನಟಯಾಗಿ ಸತತ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

79

ದಿಲೀಪ್‌ರನ್ನು ಮದುವೆಯಾಗುವ ಮುನ್ನ ಕೇವಲ ಮೂರು ವರ್ಷಗಳ ಕಾಲ ಮಲಯಾಳಂ ಚಿತ್ರರಂಗದಲ್ಲಿ ನಟಿಸಿ  20 ಚಲನಚಿತ್ರಗಳನ್ನು ಮಾಡಿದರು.  ಆ ನಂತರ ಅಭಿನಯಿಸಲ್ಲಿಲ್ಲ. ಆ ಬಳಿಕ ದಾಂಪತ್ಯ ಕಲಹದಿಂದಾಗಿ ಪತಿ ನಟ ದಿಲೀಪ್‌ರಿಂದ ಡಿವೋರ್ಸ್ ಪಡೆದುಕೊಂಡರು.

89

ವಿಮರ್ಶಾತ್ಮಕವಾಗಿ ಜೊತೆಗೆ ಬಾಕ್ಸ್‌ ಆಫೀಸ್‌ನಲ್ಲೂ ಹಿಟ್‌ ಆದ ಹೌ ಓಲ್ಡ್ ಆರ್ ಯು (2014) ಚಿತ್ರದೊಂದಿಗೆ 14 ವರ್ಷಗಳ ಬ್ರೇಕ್‌ ನಂತರ  ಚಿತ್ರರಂಗಕ್ಕೆ ಮರಳಿದರು ನಟಿ.  ಈ ಸಿನಿಮಾದಿಂದ ಅನೇಕ ಆವಾರ್ಡ್‌ಗಳನ್ನು ಪಡೆದರು  ಮುಖ್ಯವಾಗಿ ಮಲಯಾಳಂನ ಅತ್ಯುತ್ತಮ ನಟಿಗಾಗಿ ಐದನೇ ಫಿಲ್ಮ್‌ಫೇರ್ ಪ್ರಶಸ್ತಿ ಗಳಿಸಿದರು ಮಂಜು.

99

4 ವರ್ಷಗಳ ನಂತರ ತನ್ನ ಎರಡನೇ ಇನ್ನಿಂಗ್ಸ್‌ ಆರಂಭಿಸಿ ಮತ್ತೆ  ಅದೇ ರೀತಿಯ ಫೇಮಸ್‌ ಆಗಿರುವ  ಏಕೈಕ ನಟಿ ಮಂಜು ವಾರಿಯರ್‌. ಈಗ ಅವರು ಸಾಮಾಜಿಕ ಕಾರ್ಯಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕಾಲಿಟ್ಟರುವ ಮಂಜು  ಸರ್ಕಾರದ ವಿವಿಧ ಯೋಜನೆಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

Read more Photos on
click me!

Recommended Stories