ಬಿಲಿಯನೇರ್ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಒಂದಕ್ಕಿಂತ ಹೆಚ್ಚು ಬೆಲೆಬಾಳುವ ನೆಕ್ಲೇಸ್‌ಗಳನ್ನು ಹೊಂದಿದ್ದಾರೆ. ಇದು ಚಿನ್ನ, ಪಚ್ಚೆ ಮತ್ತು ವಜ್ರಗಳಿಂದ ಹಿಡಿದು ರಾಣಿ ಹಾರ್‌ನ್ನು ಒಳಗೊಂಡಿದೆ. ಇಶಾ ಅಂಬಾನಿ ನೆಕ್ಲೇಸ್ ಕಲೆಕ್ಷನ್ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ.
ಆಭರಣಗಳ ಕಲೆಕ್ಷನ್
ಬಿಲಿಯನೇರ್ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇಶಾ ಅಂಬಾನಿ ಬಳಿ ಕೋಟಿಗಟ್ಟಲೆ ಬೆಲೆಬಾಳುವ ಆಭರಣಗಳಿವೆ. ಒಂದಕ್ಕಿಂತ ಹೆಚ್ಚು ಬೆಲೆ ಕಟ್ಟಲಾಗದ ನೆಕ್ಲೇಸ್‌ಗಳಿವೆ. ಇದು ಚಿನ್ನ, ಪಚ್ಚೆ ಮತ್ತು ವಜ್ರಗಳಿಂದ ಹಿಡಿದು ರಾಣಿ ಹಾರ್‌ನ್ನು ಸಹ ಒಳಗೊಂಡಿದೆ.
26
ಡೈಮಂಡ್ ನೆಕ್‌ಪೀಸ್
ಮೆಟ್ ಗಾಲಾ 2019ರಲ್ಲಿ ಡಿಸ್ನಿ ರಾಜಕುಮಾರಿಯಿಂದ ಪ್ರೇರಿತವಾದ ಪ್ರಬಲ್ ಗುರುಂಗ್ ಗೌನ್‌ನ್ನು ಇಶಾ ಧರಿಸಿದ್ದರು. ಕಾರ್ಯಕ್ರಮದಲ್ಲಿ ಅವರು ಗರಿ ಮಾದರಿಯ ಲ್ಯಾವೆಂಡರ್ ಗೌನ್ ಧರಿಸಿದ್ದರು. ಈ ಸಂದರ್ಭದಲ್ಲಿ ಇಶಾ ಧರಿಸಿದ್ದ ಅನ್‌ಕಟ್ ಡೈಮಂಡ್ ನೆಕ್ಲೇಸ್ ಎಲ್ಲರ ಗಮನ ಸೆಳೆಯಿತು. ಈ ವಜ್ರದ ನೆಕ್ಲೇಸ್ ಕೋಟಿಗಟ್ಟಲೆ ಬೆಲೆ ಬಾಳುತ್ತದೆ.
36
ಡೈಮಂಡ್ ಚೋಕರ್
ಇಶಾ ಅಂಬಾನಿಯವರ ಮೆಟ್ ಗಾಲಾ 2023ರ ಉಡುಪು ಬಹಳಷ್ಟು ಸುದ್ದಿ ಮಾಡಿತ್ತು. ಇಶಾ, ಸುಂದರವಾದ ಕಪ್ಪು ಉಡುಪನ್ನು ಧರಿಸಿದ್ದರು. ಈ ಲುಕ್‌ನ್ನು ಕಂಪ್ಲೀಟ್ ಮಾಡಲು ದಪ್ಪ ಡೈಮಂಡ್ ಚೋಕರ್ ಧರಿಸಿದ್ದರು. Popxo ಪ್ರಕಾರ, ಇವುಗಳನ್ನು ಲೋರೇನ್ ಶ್ವಾರ್ಟ್ಜ್ ತಯಾರಿಸಿದ್ದಾರೆ ಮತ್ತು ಪ್ರತಿಯೊಂದಕ್ಕೂ ಕನಿಷ್ಠ 82 ಲಕ್ಷ ವೆಚ್ಚವಾಗಿರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
46
165 ಕೋಟಿ ರೂ. ಬೆಲೆಯ ನೆಕ್ಲೇಸ್
ಇಶಾ ಅಂಬಾನಿಯ ಈ ವಜ್ರದ ನೆಕ್ಲೇಸ್‌ನ ಬೆಲೆ ಕೇಳಿದರೆ ನೀವು ದಂಗಾಗುವುದು ಖಂಡಿತ. ಆಭರಣ ಮತ್ತು ವಜ್ರಗಳ ಬಗ್ಗೆ ಜ್ಞಾನ ಹೊಂದಿರುವ ತಜ್ಞರ ಪ್ರಕಾರ, ಇಶಾ ಅಂಬಾನಿಯ ಈ ವಜ್ರದ ನೆಕ್ಲೇಸ್‌ನ ಬೆಲೆ ಸುಮಾರು $ 20 ಮಿಲಿಯನ್ ಅಂದರೆ ಸುಮಾರು 165 ಕೋಟಿ ರೂ. ಆಗಿದೆ.
56
ಇಶಾ ಅಂಬಾನಿಯ ರಾಣಿಹಾರ್
ಇಶಾ ಅಂಬಾನಿ ಅವರ ವಿವಾಹವು ಭಾರತದ ಅತ್ಯಂತ ದುಬಾರಿ ವಿವಾಹಗಳಲ್ಲಿ ಒಂದಾಗಿದೆ. ಇಶಾ ಅಂಬಾನಿ ತಮ್ಮ ಮದುವೆಯಲ್ಲಿ ಸುಮಾರು 90 ಕೋಟಿ ರೂಪಾಯಿ ವೆಚ್ಚದ ಸುಂದರವಾದ ಲೆಹೆಂಗಾವನ್ನು ಧರಿಸಿದ್ದರು.
66
ತನ್ನ ನೋಟವನ್ನು ಪೂರ್ಣಗೊಳಿಸಲು, ಇಶಾ ರಾಣಿಹಾರವನ್ನು ಧರಿಸಿದ್ದರು. ಅದು ಸಹ ಕೋಟಿ ಕೋಟಿ ಬೆಲೆ ಬಾಳುತ್ತದೆ ಎಂದು ತಿಳಿದುಬಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.