ಗೋಲ್ಡನ್‌ ಸ್ಟಾರ್‌ಗೆ ಜೋಡಿಯಾದ ಮಲಯಾಳಿ ಕುಟ್ಟಿ, ಮೊದ್ಲು ಹಲ್ಲಿಗೆ ಕ್ಲಿಪ್ ಹಾಕಿಸ್ಕೊಳ್ಳಿ ಅನ್ನೋದಾ ಜನ್ರು!

Published : Jan 12, 2024, 03:07 PM IST

ಪರಭಾಷೆಯ ನಟಿಯಂದಿರು ಕನ್ನಡ ಭಾಷೆಯ ಸಿನಿಮಾಗಳಲ್ಲಿ ನಟಿಸೋದು ಹೊಸದೇನಲ್ಲ.ಅದರಲ್ಲೂ ಮಲಯಾಳಂ ನಟಿಯರದ್ದು ಇದರಲ್ಲಿ ಮೇಲುಗೈ. ಈ ಲಿಸ್ಟ್‌ಗೆ ಹೊಸ ಸೇರ್ಪಡೆ ಮಾಳವಿಕಾ ನಾಯರ್‌. ಆದ್ರೆ ನೋಡೋಕೆ ಕ್ಯೂಟ್ ಕ್ಯೂಟ್ ಆಗಿದ್ರೂ ಜನ್ರು ಆಕೆಯ ಫೋಟೋಸ್‌ಗೆ ಏನೇನೋ ಕಾಮೆಂಟ್ ಮಾಡಿದ್ದಾರೆ.

PREV
18
ಗೋಲ್ಡನ್‌ ಸ್ಟಾರ್‌ಗೆ ಜೋಡಿಯಾದ ಮಲಯಾಳಿ ಕುಟ್ಟಿ, ಮೊದ್ಲು ಹಲ್ಲಿಗೆ ಕ್ಲಿಪ್ ಹಾಕಿಸ್ಕೊಳ್ಳಿ ಅನ್ನೋದಾ ಜನ್ರು!

ಪರಭಾಷೆಯ ನಟಿಯಂದಿರು ಕನ್ನಡ ಭಾಷೆಯ ಸಿನಿಮಾಗಳಲ್ಲಿ ನಟಿಸೋದು ಹೊಸದೇನಲ್ಲ. ತೆಲುಗು, ತಮಿಳು, ಮಲಯಾಳಂನ ನಟ-ನಟಿಯಂದಿರು ಆಗಾಗ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಮಲಯಾಳಂ ನಟಿಯರದ್ದು ಇದರಲ್ಲಿ ಮೇಲುಗೈ. ಈ ಲಿಸ್ಟ್‌ಗೆ ಹೊಸ ಸೇರ್ಪಡೆ ಮಾಳವಿಕಾ ನಾಯರ್‌.

28

ಈಗಾಗ್ಲೇ ಮೀರಾ ಜಾಸ್ಮಿನ್, ನವ್ಯಾ ನಾಯರ್‌, ಪಾರ್ವತಿ ಮೆನನ್, ಕಾರ್ತಿಕಾ ನಾಯರ್ ಮೊದಲಾದವರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ. ಅದಕ್ಕೆ ಹೊಸ ಸೇರ್ಪಡೆ ಮಲಯಾಳಿ ಕುಟ್ಟಿ ಮಾಳವಿಕಾ ನಾಯರ್‌. ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ನಾಯಕಿಯಾಗಿ ಈಕೆ ನಟಿಸಲಿದ್ದಾರೆ.

38

ಸೋಷಿಯಲ್ ಮೀಡಿಯಾದಲ್ಲಿ ನಟಿ ಆಗಾಗ ತಮ್ಮ ಸುಂದರ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಹಾಗೆ ಶೇರ್ ಮಾಡಿದ ಫೋಟೋಗೆ ಕೆಲವರು ಬ್ಯೂಟಿಫುಲ್‌ ನೈಸ್ ಎಂದು ಕಳುಹಿಸಿದರೆ ಇನ್ನು ಕೆಲವರು ಮೊದ್ಲು ನಿಮ್ ಹಲ್ಲಿಗೆ ಕ್ಲಿಪ್ ಹಾಕ್ಕೊಳ್ಳಿ ಎಂದು ಟೀಕಿಸಿದ್ದಾರೆ.

48

ಶ್ರೀನಿವಾಸರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ 'ಕೃಷ್ಣಂ ಪ್ರಣಯ ಸಖಿ' ಚಿತ್ರ ಸಿದ್ಧಗೊಳ್ಳುತ್ತಿದೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ  ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು. 

58

ಈಗಾಗಲೇ ಬೆಂಗಳೂರಿನಲ್ಲಿ ಈ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ಬಳಿಕ ಮೈಸೂರಿನಲ್ಲಿ, ನಂತರ ರಾಜಸ್ಥಾನದಲ್ಲಿಯೂ ಕೆಲ ಭಾಗದ ಚಿತ್ರೀಕರಣ ನಡೆಯಲಿದೆ. ಅಲ್ಲಿಂದ ನೇರವಾಗಿ ಯೂರೋಪ್‌ಗೂ ಶೂಟಿಂಗ್‌ಗಾಗಿ ಈ ತಂಡ ಪ್ರಯಾಣ ಬೆಳೆಸಲಿದೆ ಎಂದು ತಿಳಿದುಬಂದಿದೆ.

68

'ಕೃಷ್ಣಂ ಪ್ರಣಯ ಸಖಿ' ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಮಾಳವಿಕಾ ನಾಯರ್‌ಗಿದು ಮೊದಲ ಕನ್ನಡ ಸಿನಿಮಾ.

78

ಮಲಯಾಳಂ ಮತ್ತು ತೆಲುಗಿನ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಈ ನಟಿ, ಈಗ ಗಣೇಶ್‌ ಕೈ ಹಿಡಿದು ಸ್ಯಾಂಡಲ್‌ವುಡ್‌ಗೆ ಆಗಮಿಸಿದ್ದಾರೆ.

88

ಶರಣ್ಯ ಶೆಟ್ಟಿ,  ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್,  ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories