ಸೀರೆಯುಟ್ಟು ಅಪ್ಸರೆಯಂತೆ ಕಂಡ ಸ್ಟಾರ್‌ನಟನ ಮಗಳು, ಬಟ್ಟಲು ಕಂಗಳೇ ಮಾತಾಡ್ತಿವೆ ಎಂದ ನೆಟ್ಟಿಗರು!

Published : Mar 16, 2024, 11:24 AM ISTUpdated : Mar 16, 2024, 11:30 AM IST

ಸಿನಿಮಾ ರಂಗದ ನಟ-ನಟಿಯರು ಯಾವಾಗಲೂ ತಮ್ಮ ಸ್ಟೈಲಿಶ್ ಲುಕ್‌ನಿಂದ ಎಲ್ಲರ ಗಮನ ಸೆಳೆಯುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಫೋಟೋಗಳನ್ನು ಶೇರ್ ಮಾಡುತ್ತಾರೆ. ಹಾಗೆಯೇ ಇತ್ತೀಚಿಗೆ ಸ್ಟಾರ್‌ ನಟರೊಬ್ಬರ ಮಗಳು ಸೀರೆಯುಟ್ಟ ಟ್ರೆಡಿಶನಲ್ ಲುಕ್ ಫೋಟೋವನ್ನು ಶೇರ್ ಮಾಡಿದ್ದಾರೆ.

PREV
17
ಸೀರೆಯುಟ್ಟು ಅಪ್ಸರೆಯಂತೆ ಕಂಡ ಸ್ಟಾರ್‌ನಟನ ಮಗಳು, ಬಟ್ಟಲು ಕಂಗಳೇ ಮಾತಾಡ್ತಿವೆ ಎಂದ ನೆಟ್ಟಿಗರು!

ಸಿನಿಮಾ ರಂಗದ ನಟ-ನಟಿಯರು ಯಾವಾಗಲೂ ತಮ್ಮ ಸ್ಟೈಲಿಶ್ ಲುಕ್‌ನಿಂದ ಎಲ್ಲರ ಗಮನ ಸೆಳೆಯುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಫೋಟೋಗಳನ್ನು ಶೇರ್ ಮಾಡುತ್ತಾರೆ. ಹಾಗೆಯೇ ಇತ್ತೀಚಿಗೆ ಮಲಯಾಳಂನ ಸ್ಟಾರ್‌ ನಟರೊಬ್ಬರ ಮಗಳು ತನ್ನ ಸೀರೆಯುಟ್ಟ ಟ್ರೆಡಿಶನಲ್ ಲುಕ್ ಫೋಟೋವನ್ನು ಶೇರ್ ಮಾಡಿದ್ದಾರೆ.
 

27

ಆಕೆ ಮತ್ಯಾರೂ ಅಲ್ಲ ಮಲಯಾಳಂನ ಹಿರಿಯ ನಟ ಕೃಷ್ಣಕುಮಾರ್ ಮಗಳು ಅಹಾನಾ ಕೃಷ್ಣ. ಅಹಾನಾ ಕೃಷ್ಣ, ಮಲಯಾಳಂ ಸಿನಿಮಾಗಳಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತಾರೆ. ಕೆಲವು ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಹಾನಾ ವೈಟ್‌ ಟ್ರಾನ್ಸ್‌ಪರೆಂಟ್ ಸ್ಯಾರಿ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

37

2014 ರಲ್ಲಿ ಮಲಯಾಳಂ ಸಿನಿಮಾ ರಾಜೀವ್ ರವಿಯವರ 'ನಾನ್ ಸ್ಟೀವ್ ಲೋಪೆಜ್' ಚಿತ್ರದಲ್ಲಿ ನಾಯಕಿಯಾಗಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು

47

ನಂತರ 2017 ರಲ್ಲಿ ನಿವಿನ್ ಪೌಲಿ ಅವರೊಂದಿಗೆ ಅಲ್ತಾಫ್ ನಿರ್ದೇಶಿಸಿದ 'ನಂಜಂದುಕಾಳುದೆ ನಾಟಿಲ್ ಒರಿಡವೇಳ'ದಲ್ಲಿ ಕಾಣಿಸಿಕೊಂಡರು. ನಟ ಕೃಷ್ಣ ಕುಮಾರ್ ಮತ್ತು ಪತ್ನಿ ಸಿಂಧು ಕೃಷ್ಣ ಅವರ ನಾಲ್ವರು ಪುತ್ರಿಯರಲ್ಲಿ ಅಹಾನಾ ಹಿರಿಯವರು.

57

ಅಹಮದಾಬಾದ್‌ನ ಮುದ್ರಾ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ನಿಂದ ಜಾಹೀರಾತು ನಿರ್ವಹಣೆ ಮತ್ತು ಸಾರ್ವಜನಿಕ ಸಂಪರ್ಕಗಳಲ್ಲಿ ಸ್ನಾತಕೋತ್ತರ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಇವರ ಮನೆಯು ಕೇರಳದ ತಿರುವನಂತಪುರಂನಲ್ಲಿದೆ

67

2019 ರಲ್ಲಿ, ಅಹಾನಾ ಟೊವಿನೋ ಥಾಮಸ್ ಜೊತೆಗೆ 'ಲುಕಾ' ಎಂಬ ರೋಮ್ಯಾಂಟಿಕ್ ಮೂವಿಯಲ್ಲಿ ನಟಿಸಿದ್ದು, ಇದು ಸೂಪರ್‌ ಹಿಟ್ ಆಯಿತು. ಕಮರ್ಷಿಯಲ್ ಹಿಟ್ ಎಂದು ಕರೆಸಿಕೊಂಡ ಈ ಸಿನಿಮಾದ ಪ್ರಮುಖ ನಟರ ಅಭಿನಯಕ್ಕೆ ಪ್ರಶಂಸೆಗಳು ಕೇಳಿಬಂದವು. 

77

ಅದೇ ವರ್ಷ, ಅಹಾನಾ ಶಂಕರ್ ರಾಮಕೃಷ್ಣನ್ ಅವರ ಪತ್ತಿನೆಟ್ಟಂ ಪಾಡಿಯಲ್ಲಿ ಕಾಣಿಸಿಕೊಂಡರು. ಆ ಬಳಿಕ ಆದಿ, ಪಾಚುವುಂ ಅದ್ಭುತ ವಿಳಕ್ಕುಂ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

Read more Photos on
click me!

Recommended Stories