ಅನಂತ್‌ ಅಂಬಾನಿ-ರಾಧಿಕಾ ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ಅತೀ ದುಬಾರಿ ವಾಚ್ ಧರಿಸಿದ್ದು ಯಾರು?

First Published | Mar 15, 2024, 5:16 PM IST

ಗುಜರಾತ್‌ನಲ್ಲಿ ನಡೆದ ಅನಂತ್ ಅಂಬಾನಿ ಹಾಗೂ ಅದ್ಧೂರಿ ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ದೇಶ-ವಿದೇಶದ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಇಲ್ಲಿ ಎಲ್ಲರ ಗಮನ ಸೆಳೆದಿದ್ದು ಅಂಬಾನಿ ಕುಟುಂಬ ಸದಸ್ಯರು, ಸೆಲೆಬ್ರಿಟಿಗಳು ಧರಿಸಿದ್ದ ಕಾಸ್ಟ್ಲೀ ವಾಚ್‌. ಯಾರು ಎಷ್ಟೆಷ್ಟು ಬೆಲೆಯ ವಾಚ್ ಧರಿಸಿದ್ದರು. ಇಲ್ಲಿದೆ ಮಾಹಿತಿ.

ರಾಧಿಕಾ ಮರ್ಚೆಂಟ್ 
ಪ್ರಿ ವೆಡ್ಡಿಂಗ್‌ ಇವೆಂಟ್‌ನಲ್ಲಿ ರಾಧಿಕಾ ಮರ್ಚೆಂಟ್ ಪ್ರತಿ ಲುಕ್‌ ಸೂಪರ್ ಹಿಟ್ ಆಗಿತ್ತು. ಆದರೆ ಜಂಗಲ್ ಸಫಾರಿಯ ನೀಲಿ ವರ್ಣದ ಪ್ರಾಣಿ ಮುದ್ರಿತ ಡ್ರೆಸ್ ಎಲ್ಲರ ಗಮನ ಸೆಳೆಯಿತು. ಇದರ ಜೊತೆಗೆ ರಾಧಿಕಾ ವಾಚೆರಾನ್ ಕಾನ್‌ಸ್ಟಾಂಟಿನ್ ಬ್ರಾಂಡ್‌ನಿಂದ ವಾಚ್ \ಧರಿಸಿದ್ದರು. ಇದು. 1.85 ಕೋಟಿ ರೂ. ಬೆಲೆ ಬಾಳುತ್ತದೆ.

ಶ್ಲೋಕಾ ಅಂಬಾನಿ
ಕಾಕ್‌ಟೈಲ್ ಪಾರ್ಟಿಗಾಗಿ ಅಂಬಾನಿ ಹಿರಿ ಸೊಸೆ ಕಸ್ಟಮೈಸ್ ಮಾಡಿದ ವ್ಯಾಲೆಂಟಿನೋ ಗೌನ್‌ನಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಸ್ಲಿಟ್ ಸ್ಕರ್ಟ್‌ನೊಂದಿಗೆ ಗುಲಾಬಿ-ಅಲಂಕರಿಸಿದ ಕ್ರಾಪ್ ಟಾಪ್‌ ಧರಿಸಿದ್ದರು. ಇಲ್ಲಿ ಎಲ್ಲರ ಗಮನ ಸೆಳೆದಿದ್ದು ಶ್ಲೋಕಾ ಮೆಹ್ತಾರ ದುಬಾರಿ ವಾಚ್. ಶ್ಲೋಕಾ, ಪಾಟೆಕ್ ಫಿಲಿಪ್ ನಾಟಿಲಸ್ 7118/1450G 'ಹಾಟ್ ಜೋಯಿಲ್ಲರಿ' ವಾಚ್‌ನ್ನು ಧರಿಸಿದ್ದರು. ಇದು ನೈಜ ವಜ್ರಗಳಿಂದ ಮಾಡಲ್ಪಟ್ಟಿದೆ. ವಾಚ್‌ನ ಬೆಲೆ 4.8 ಕೋಟಿ.

Tap to resize

ಆಕಾಶ್ ಅಂಬಾನಿ
ಅಂಬಾನಿ ಹಿರಿ ಮಗ ಆಕಾಶ್ ಅಂಬಾನಿ, ಮದುವೆಯ ಪೂರ್ವದ ಸಂಭ್ರಮಾಚರಣೆಯಲ್ಲಿ ಅತ್ಯುತ್ತಮವಾಗಿ ಕಾಣಿಸಿಕೊಂಡರು. ಖ್ಯಾತ ಉದ್ಯಮಿ ಪಾಟೆಕ್ ಫಿಲಿಪ್ ಗ್ರ್ಯಾಂಡ್ ಕಾಂಪ್ಲಿಕೇಶನ್ ಗ್ರ್ಯಾಂಡ್ ಮಾಸ್ಟರ್ ಚೈಮ್ಸ್ ಬ್ರಾಂಡ್‌ನಿಂದ 23 ಕೋಟಿಯ ವಾಚ್ ಧರಿಸಿದ್ದರು.

ರಣವೀರ್ ಸಿಂಗ್‌
ತಂದೆಯಾಗಲಿರುವ ರಣವೀರ್ ಸಿಂಗ್ ಅವರು ಅನಂತ್ ಅಂಬಾನಿಯವರ ವಿವಾಹಪೂರ್ವ ಸಮಾರಂಭಕ್ಕಾಗಿ ಅತ್ಯುತ್ತಮ ಉಡುಗೆಯನ್ನು ಧರಿಸಿದ್ದರು. ಜೊತೆಗೆ ಫ್ರಾಂಕ್ ಮುಲ್ಲರ್ ರೌಂಡ್ ಸ್ಕೆಲಿಟನ್ ಬ್ರಾಂಡ್‌ನಿಂದ ಕಾಸ್ಟ್ಲೀ ಕೈಗಡಿಯಾರ ಧರಿಸಿದ್ದು, ಇದರ ಬೆಲೆ ಬರೋಬ್ಬರಿ 41 ಲಕ್ಷ ರೂ.

ದೀಪಿಕಾ ಪಡುಕೋಣೆ
ಪ್ರೆಗ್ನೆಂಟ್ ಆಗಿರುವ ದೀಪಿಕಾ ಪಡುಕೋಣೆ ಸಹ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಪಾರ್ಟಿಯನ್ನು ಸಖತ್ ಎಂಜಾಯ್ ಮಾಡಿದರು. ಕಾರ್ಟಿಯರ್ ಪ್ಯಾಂಥೆರ್ ಬರೋಬ್ಬರಿ 21.6 ಲಕ್ಷ ರೂ.ನ ವಾಚ್ ಧರಿಸಿದ್ದರು. ಸಂಪೂರ್ಣ ವೈಟ್ ಡ್ರೆಸ್‌ನೊಂದಿಗೆ ಇದನ್ನು ಪೇರ್ ಮಾಡಿದ್ದರು.

ಸದ್ಗುರುಗಳು
ಅನಂತ್ ಮತ್ತು ರಾಧಿಕಾ ದಂಪತಿಯನ್ನು ಆಶೀರ್ವದಿಸಲು  ಪ್ರೇರಣಾ ಭಾಷಣಕಾರ ಸದ್ಗುರುಗಳು ಸಹ ಅನಂತ್ ಮತ್ತು ರಾಧಿಕಾ ಅವರ ವಿವಾಹಪೂರ್ವ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ, ಸದ್ಗುರುಗಳು 6.5 ಲಕ್ಷ ರೂ. ಮೌಲ್ಯದ ವಾಚ್ ಧರಿಸಿದ್ದರು.

ಶಿಖರ್ ಪಹಾರಿಯಾ 
ಮದುವೆಗೆ ಮುಂಚಿನ ಪಾರ್ಟಿಗಾಗಿ ಜಾನ್ವಿ ಕಪೂರ್ ತನ್ನ ಗೆಳೆಯ ಶಿಖರ್ ಪಹಾರಿಯಾ ಅವರೊಂದಿಗೆ ಸ್ಟೈಲ್ ಆಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಿಖರ್, ಕಾಸ್ಟ್ಲೀ ಗಡಿಯಾರವನ್ನು ಪ್ರದರ್ಶಿಸಿದರು. ಈ ವಾಚ್‌ ಐಷಾರಾಮಿ ಬ್ರಾಂಡ್ ರಿಚಾರ್ ಮೈಲ್‌ನಿಂದ ಆಗಿದ್ದು ಬರೋಬ್ಬರಿ 8 ಕೋಟಿ ರೂ. ಬೆಲೆ ಬಾಳುತ್ತದೆ.

ಅನಂತ್ ಅಂಬಾನಿ
ವರನಾಗಿರುವ ಅನಂತ್ ಅವರು ತಮ್ಮ ವಿವಾಹಪೂರ್ವ ಸಮಾರಂಭದಲ್ಲಿ ಎಲ್ಲಾ ಅತಿಥಿಗಳಿಂದ ಅತ್ಯಂತ ದುಬಾರಿ ವಾಚ್ ಅನ್ನು ಧರಿಸಿದ್ದರು. ಈವೆಂಟ್‌ಗಳಲ್ಲಿ ಒಂದಕ್ಕೆ, ಅನಂತ್ ರಿಚರ್ಡ್ ಮಿಲ್ಲೆ RM 56-02 ಅನ್ನು ಬಿಳಿ-ಹ್ಯೂಡ್ ಬ್ಯಾಂಡ್‌ನೊಂದಿಗೆ ಧರಿಸಿದ್ದರು. ಇದರ ಬೆಲೆ ಭರ್ತಿ 45 ಕೋಟಿ.

Latest Videos

click me!