ಹೋಳಿ ಪಾರ್ಟಿಗೆ ಬನಾರಸಿ ಗೌನ್ ಧರಿಸಿ ಬಂದ ಇಶಾ ಅಂಬಾನಿ, ಬಟ್ಟೆಗೇ ಎಷ್ಟು ದುಡ್ಡು ಸುರೀತಾರಪ್ಪಾ ಎಂದ ನೆಟ್ಟಿಗರು!

First Published | Mar 16, 2024, 10:10 AM IST

ಬಿಲಿಯನೇರ್ ಮುಕೇಶ್ ಅಂಭಾನಿಯ ಏಕೈಕ ಪುತ್ರಿ ಇಶಾ ಅಂಬಾನಿ ಯಾವಾಗಲೂ ತಮ್ಮ ಸ್ಟೈಲಿಶ್‌ ಲುಕ್‌ನಿಂದ ಎಲ್ಲರ ಗಮನ ಸೆಳೆಯುತ್ತಾರೆ.  ಇತ್ತೀಚಿಗೆ ಆಂಟಿಲಿಯಾದಲ್ಲಿ ನಡೆದ ಅಂಬಾನಿಯವರ ಹೋಳಿ ಬಾಷ್‌ನಲ್ಲಿ ಇಶಾ ಅಂಬಾನಿ ಅದ್ಭುತವಾದ ಕಲರ್‌ಫುಲ್‌ ಗೌನ್‌ನಲ್ಲಿ ಮಿಂಚಿದರು.

ಬಿಲಿಯನೇರ್ ಮುಕೇಶ್ ಅಂಭಾನಿಯ ಏಕೈಕ ಪುತ್ರಿ ಇಶಾ ಅಂಬಾನಿ ಯಾವಾಗಲೂ ತಮ್ಮ ಸ್ಟೈಲಿಶ್‌ ಲುಕ್‌ನಿಂದ ಎಲ್ಲರ ಗಮನ ಸೆಳೆಯುತ್ತಾರೆ. ಇತ್ತೀಚಿಗೆ ಹೋಳಿ ಪಾರ್ಟಿಯಲ್ಲೂ ಕಲರ್‌ಫುಲ್ ಆಗಿ ಕಾಣಿಸಿಕೊಂಡರು.

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲೂ ಇಶಾ ಅಂಬಾನಿಯ ಫ್ಯಾಷನ್‌ ಸೆನ್ಸ್‌, ಲಕ್ಸುರಿಯಸ್ ಲೈಫ್‌ಸ್ಟೈಲ್ ಎಲ್ಲರ ಗಮನ ಸೆಳೆದಿತ್ತು. 

Tap to resize

ಇತ್ತೀಚಿಗೆ ಇಶಾ ಅಂಬಾನಿ ಆಂಟಿಲಿಯಾದಲ್ಲಿ ನಡೆದ ಅಂಬಾನಿಯವರ ಹೋಳಿ ಬಾಷ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡರು. ಬಾಲಿವುಡ್ ಸೆಲೆಬ್ರಿಟಿಗಳೂ ಭಾಗಿಯಾಗಿದ್ದ ಈ ಪಾರ್ಟಿಯಲ್ಲಿ ಇಶಾ ಅಂಬಾನಿ ಅದ್ಭುತವಾದ ಗೌನ್‌ನಲ್ಲಿ ಮಿಂಚಿದರು.

ಇಶಾ ಅಂಬಾನಿ, ಇತ್ತೀಚೆಗೆ ಅಂಬಾನಿ ನಿವಾಸವಾದ ಆಂಟಿಲಿಯಾದಲ್ಲಿ ಸ್ಟಾರ್-ಸ್ಟಡ್ ಹೋಳಿ ಬ್ಯಾಷ್‌ನ್ನು ಆಯೋಜಿಸಿದ್ದರು. ರೋಮನ್‌ ಥೀಮ್‌ನಲ್ಲಿ ಈ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ಪಾರ್ಟಿಗಾಗಿ ಇಶಾ, ಕಲರ್‌ಫುಲ್‌ ಸ್ಟ್ರಾಪಿ ಗೌನ್‌ನ್ನು ಆಯ್ಕೆ ಮಾಡಿಕೊಂಡರು. 

ಗೌನ್ ಅನೇಕ ಪದರಗಳ ಬನಾರಸಿ ಬಟ್ಟೆಯ ಡಿಸೈನ್‌ನ್ನು ಒಳಗೊಂಡಿತ್ತು. ಜೊತೆಗೆ ಎಲ್ಲಾ ಬಣ್ಣ ಮೇಳೈಸಿದ ದಿರಿಸು ಹೋಳಿ ಹಬ್ಬಕ್ಕೆ ತಕ್ಕುದಾದ ಉಡುಗೆ ಎಂಬ ಫೀಲಿಂಗ್‌ನ್ನು ಮೂಡಿಸಿತು. ಗೌನ್‌ನ ಬ್ಲೌಸ್ ಭಾಗವು ಸಹ ಅತ್ಯುತ್ತಮ ಡಿಸೈನ್‌ನಿಂದ ಆಕರ್ಷಣೀಯವಾಗಿದ್ದು, ಎಲ್ಲರ ಗಮನ ಸೆಳೆಯಿತು.

ಸುಂದರವಾದ ಗೌನ್‌ ಜೊತೆ ಇಶಾ ಅಂಬಾನಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಬಹು-ರತ್ನಗಳಿಂದ ಸುತ್ತುವರಿಯಲ್ಪಟ್ಟ ನೆಕ್‌ಪೀಸ್‌ ಧರಿಸಿದ್ದರು. ಸಿಂಪಲ್‌  ಮೇಕಪ್ ಮತ್ತು ಹೇರ್‌ಸ್ಟೈಲ್‌ ಪಾರ್ಟಿಯ ವೈಬ್‌ಗೆ ಚೆನ್ನಾಗಿ ಒಪ್ಪುತ್ತಿತ್ತು.

isha ambani

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಹಸ್ತಾಕ್ಷರ ಸಮಾರಂಭದಲ್ಲಿ ಇಶಾ ಅಂಬಾನಿ ರೀಗಲ್ ಲೆಹೆಂಗಾ ಚೋಲಿಯನ್ನು ಧರಿಸಿದ್ದರು. ಇಶಾ ಅಂಬಾನಿ ಧರಿಸಿದ್ದ ಲೆಹಂಗಾವನ್ನು ಸಂಪೂರ್ಣವಾಗಿ ಕಸೂತಿ ಮಾಡಲಾಗಿತ್ತು. ಕೆಂಪು, ಹಸಿರು ಬಣ್ಣದ ಬೀಡ್ಸ್‌ಗಳಿಂದ ಅಲಂಕರಿಸಲಾಗಿತ್ತು.

ಇಶಾ ಅಂಬಾನಿ, ಡಿಸೈನರ್ ಅಬು ಜಾನಿ ಸಂದೀಪ್ ಖೋಸ್ಲಾ ಸಿದ್ಧಪಡಿಸಿದ ಕೆಂಪು ಬಣ್ಣದ ಕಸೂತಿ ಲೆಹೆಂಗಾವನ್ನು ಧರಿಸಿದ್ದರು. ಗ್ರ್ಯಾಂಡ್ ಲೆಹಂಗಾದ ಬ್ಲೌಸ್ ಸಂಪೂರ್ಣ ಬೀಡ್ಸ್‌ ವರ್ಕ್‌ನಿಂದ ಕೂಡಿದ್ದು ಚಿನ್ನ, ವಜ್ರದ ಕೈ ಕುಸುರಿಯಿಂದ ಸಖತ್‌ ಗ್ರ್ಯಾಂಡ್ ಆಗಿ ಕಾಣುತ್ತಿತ್ತು.

ಇಶಾ ಅಂಬಾನಿ ಮತ್ತು ಅವರ ಪತಿ ಆನಂದ್ ಪಿರಾಮಲ್ ದಂಪತಿ 12 ಡಿಸೆಂಬರ್‌ 2018ರಂದು ಅದ್ಧೂರಿಯಾಗಿ ಮದುವೆಯಾದರು. ನವೆಂಬರ್ 19, 2022ರಂದು ಇಶಾ ಅಂಬಾನಿ, ಕೃಷ್ಣ ಮತ್ತು ಆದಿಯಾಗೆ ಜನ್ಮ ನೀಡಿದರು.

Latest Videos

click me!