ಲಕ್ಷಗಟ್ಟಲೆ ಬೆಲೆ ಬಾಳುವ ಈ ಸೀರೆ ಕಲೆಕ್ಷನ್ ನಿಮ್ಮ ಹತ್ತಿರ ಇದ್ಯಾ?

First Published Jan 14, 2023, 3:03 PM IST

ಭಾರತೀಯರಿಗೆ ಸೀರೆ ಅಂದ್ರೆ ಒಂದು ಎಮೋಷನ್. ಹಾಗಾಗಿ ಮಹಿಳೆಯರು ಸೀರೆಯನ್ನು ಅತೀ ಇಷ್ಟಪಟ್ಟು ಧರಿಸ್ತಾರೆ. ವಿವಿಧ ತರಹದ ಸೀರೆಗಳು ಎಲ್ಲೆಡೆ ಲಭ್ಯವಿದೆ. ಜೊತೆಗೆ ವಿವಿಧ ಬೆಲೆಯ ಸೀರೆಗಳು ಲಭ್ಯವಿದೆ. ಸೀರೆಗಳ ಬಗ್ಗೆ ಅದರಲ್ಲೂ ದುಬಾರಿ ಸೀರೆಗಳ ಬಗ್ಗೆ ತಿಳಿಯಲು ನಿಮಗೆ ಇಂಟ್ರೆಸ್ಟ್ ಇದ್ರೆ, ಮುಂದೆ ಓದಿ.    

ಭಾರತದಲ್ಲಿ ಸೀರೆಗಳ (Saree) ಮಾರುಕಟ್ಟೆ ದೊಡ್ಡದಾಗಿದೆ. 100 ರೂಪಾಯಿಗಳಿಂದ ಲಕ್ಷಾಂತರ ರೂಪಾಯಿಗಳವರೆಗಿನ ಸೀರೆಗಳು ಇಲ್ಲಿ ಲಭ್ಯವಿವೆ. ಇದನ್ನು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ ಧರಿಸಲಾಗುತ್ತೆ. ಸೀರೆಗಳನ್ನು ಹತ್ತಿಯಿಂದ ಹಿಡಿದು ಜಾರ್ಜೆಟ್, ಶಿಫಾನ್, ಕ್ರೇಪ್ ಮತ್ತು ವಿವಿಧ ಬಟ್ಟೆಗಳಿಂದ ತಯಾರಿಸಲಾಗುತ್ತೆ. ಆದರೆ ಭಾರತದ ಅತ್ಯಂತ ದುಬಾರಿ ಸೀರೆಗಳ ಬಗ್ಗೆ ನಿಮಗೆ ತಿಳಿದಿದ್ಯಾ? ಭಾರತದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಸೀರೆಗಳ ಬಗ್ಗೆ  ಇಲ್ಲಿ ತಿಳಿಯೋಣ, ಇದಕ್ಕೆ ಸಾವಿರಾರು ರೂಪಾಯಿಗಳಿಂದ ಲಕ್ಷಾಂತರ ರೂಪಾಯಿಗಳವರೆಗೆ ವೆಚ್ಚವಾಗುತ್ತೆ...
 

ಕರ್ಹುವಾ ಕಟ್ ವರ್ಕ್ ಸೀರೆ

ವಾರಣಾಸಿಯ ಒಂದು ವೈಶಿಷ್ಟ್ಯವಾದ ಬನಾರಸಿ ರೇಷ್ಮೆ ಸೀರೆಗಳ (Banaras Silk saree) ಬಗ್ಗೆ ನೀವೆಲ್ಲರೂ ಕೇಳಿರಬಹುದು. ಹಾಗೆಯೇ, ಕರ್ಹುವಾ ಕಟ್ವರ್ಕ್ ಸೀರೆಯು ವಾರಣಾಸಿಯ ಪ್ರಸಿದ್ಧ ಸೀರೆ. ಕರ್ಹುವಾ ಕಟ್ ವರ್ಕ್ ಸೀರೆಗಳನ್ನು ಸುಂದರವಾಗಿ ಕತ್ತರಿಸಲಾಗುತ್ತೆ. ಈ ಸೀರೆಗಳ ಬೆಲೆ ಸುಮಾರು 5 ಸಾವಿರ ರೂಪಾಯಿಗಳಿಂದ ಪ್ರಾರಂಭವಾಗಿ 5 ಲಕ್ಷ ರೂಪಾಯಿಗಳವರೆಗೆ ಹೋಗುತ್ತೆ.

ಮುಂಗಾ ಸಿಲ್ಕ್ ಸೀರೆ

ಅಸ್ಸಾಂನ (Assam) ಮುಂಗಾ ಸಿಲ್ಕ್ ಸೀರೆಯು ವಿಶ್ವದಾದ್ಯಂತ ಬಹಳ ಪ್ರಸಿದ್ಧ. ಈ ಸೀರೆಯು ಮುಖ್ಯವಾಗಿ ಹಳದಿ ಮತ್ತು ಚಿನ್ನದ ಬಣ್ಣಗಳಲ್ಲಿ ಬರುತ್ತೆ. ಮುಂಗಾ ರೇಷ್ಮೆ ಸೀರೆಯು ಹೊಳೆಯುತ್ತೆ. ಈ ಸೀರೆಯ ವಿಶೇಷತೆಯೆಂದರೆ ಅದು ಹಳೆಯದಾದಂತೆ ಅದರ ಹೊಳಪು ಹೆಚ್ಚಾಗುತ್ತೆ. ನೀವು ಈ ಸೀರೆಯನ್ನು 2,000 ರೂ.ಗಳಿಂದ 2 ಲಕ್ಷ ರೂ.ಗಳವರೆಗೆ ಮಾರುಕಟ್ಟೆಯಲ್ಲಿ ಪಡೆಯಬಹುದು.

ಪಟಾನ್ ಪಟೋಲಾ ಸೀರೆ

ಪಟಾನ್ ಪಟೋಲಾ ಸೀರೆಯನ್ನು ಗುಜರಾತ್ ನಲ್ಲಿ(Gujarat) ತಯಾರಿಸಲಾಗುತ್ತೆ. ಈ ಸೀರೆಯ ಬಟ್ಟೆಯು ಸಾವಿರಾರು ವರ್ಷಗಳವರೆಗೆ ಒಂದೇ ರೀತಿ ಇರುತ್ತೆ. ಪಟೋಲಾ ಸೀರೆಯನ್ನು ತಯಾರಿಸಲು ಮೂರರಿಂದ ನಾಲ್ಕು ತಿಂಗಳುಗಳು ಬೇಕಾಗುತ್ತೆ. ಪಟಾನ್ ಪಟೋಲಾ ಸೀರೆಯ ಬೆಲೆ 3,000 ರೂ.ಗಳಿಂದ ಪ್ರಾರಂಭವಾಗಿ 1 ಲಕ್ಷ ರೂ.ಗೆ ಏರುತ್ತೆ.

ಕಾಂಜೀವರಂ(Kanchipuram) ಸೀರೆ

'ಸೀರೆಗಳ ರಾಣಿ' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕಾಂಜೀವರಂ ಸೀರೆಗಳನ್ನು ಕಾಂಜೀವರಂ ಪ್ರದೇಶದಲ್ಲಿ ಕಂಡುಬರುವ ಸಾಂಪ್ರದಾಯಿಕವಾಗಿ ನೇಯ್ದ ರೇಷ್ಮೆಯಿಂದ ತಯಾರಿಸಲಾಗುತ್ತೆ. ಇವು ಭಾರತದ ಅತ್ಯಂತ ದುಬಾರಿ ಸೀರೆಗಳಲ್ಲಿ ಒಂದಾಗಿದೆ. ಜೊತೆಗೆ ಸೌತ್ ಇಂಡಿಯಾದಲ್ಲಂತೂ ಈ ಸೀರೆ ಎಲ್ಲರ ನೆಚ್ಚಿನ ಸೀರೆಯಾಗಿದೆ.

ಕಾಂಜೀವರಂ ಸೀರೆಗಳಲ್ಲಿ ಕಂಡುಬರುವ ಸಾಂಪ್ರದಾಯಿಕ ವಿನ್ಯಾಸಗಳಲ್ಲಿ ಫ್ಲೋರಲ್ (Floral) ಬೂಟ್ಸ್, ಚೆಕ್ಸ್ , ಸ್ಟ್ರೈಪ್ಸ್ , ಟೆಂಪಲ್ ಮತ್ತು ಫ್ಲೋರಲ್ ವಿನ್ಯಾಸಗಳು ಸೇರಿವೆ. ಪಲ್ಲು, ಬಾರ್ಡರ್ ಮತ್ತು ಸೀರೆ ಬಾಡಿ ಪ್ರತ್ಯೇಕವಾಗಿ ನೇಯ್ಗೆ ಮಾಡಲಾಗುತ್ತೆ ಮತ್ತು ನಂತರ ಅಧಿಕೃತ ಕಾಂಜೀವರಂ ಸೀರೆಯಾಗಿ ಒಟ್ಟಿಗೆ ಸಂಯೋಜಿಸಲಾಗುತ್ತೆ. ಈ ರೇಷ್ಮೆ ಸೀರೆಗಳು 12 ಸಾವಿರ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳವರೆಗೆ ಏರುತ್ತೆ.

ಸಂಬಲ್ ಪುರಿ ಸೀರೆ

ಸಂಬಲ್ ಪುರಿ ಸೀರೆಯು ಕೈಯಿಂದ ನೇಯ್ದ ಸೀರೆ. ಇದರಲ್ಲಿ ದಾರಗಳನ್ನು ಬಳಸುವ ಮೊದಲು ಪೇಂಟ್ (Paint) ಮಾಡಲಾಗುತ್ತೆ. ಹೆಣಿಗೆಯ ಮೊದಲು ಬಣ್ಣ ಹಾಕುವ ಪ್ರಕ್ರಿಯೆಯು ಎಂದಿಗೂ ಮಸುಕಾಗದ ಹೊಳಪನ್ನು ನೀಡುತ್ತೆ. ಅದರ ದುಬಾರಿ ಜವಳಿ ವಸ್ತುಗಳು ಮತ್ತು ಕಾರ್ಮಿಕರ ಕರಕುಶಲ ವಸ್ತುಗಳ ಕಾರಣದಿಂದಾಗಿ, ಸೀರೆಯನ್ನು ಲಕ್ಷಾಂತರ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತೆ, ಇದು ಭಾರತದ ಅತ್ಯಂತ ದುಬಾರಿ ಸೀರೆಗಳಲ್ಲಿ ಒಂದಾಗಿದೆ.
 

click me!